ಕೋಲಕಾತಾದಲ್ಲಿ ೧೬ ಆಗಸ್ಟ್ ೧೯೪೬ ರಂದು ಮತಾಂಧರಿಂದಾದ ಗಲಭೆಗೆ ‘ಏಟಿಗೆ ಎದುರೇಟು’ ಎಂಬಂತೆ ಪ್ರತ್ಯುತ್ತರ ನೀಡಿದ ಗೋಪಾಲಚಂದ್ರ ಮುಖ್ಯೋಪಾಧ್ಯಾಯರು !

ಗೋಪಾಲಚಂದ್ರ ಮುಖ್ಯೋಪಾಧ್ಯಾಯ

ಕೋಲಕಾತಾದ ಇತಿಹಾಸದ ಅತ್ಯಂತ ದೊಡ್ಡ ಕರಾಳ ದಿನ !

೧೬ ಆಗಸ್ಟ್ ೧೯೪೬ ಈ ದಿನದಂದು ಮುಸ್ಲಿಮ್ ಲೀಗ್‌ನ ನಾಯಕ ಮತ್ತು ಬಂಗಾಲದ ಅಂದಿನ ಮುಖ್ಯಮಂತ್ರಿಗಳಾದ ಹುಸೇನ ಶಾಹೀದ ಸುರ‍್ಹಾವರ್ದಿ ಇವರ ಅಣತಿಯಂತೆ ಲೀಗ್‌ನ ಗಲಭೆಕೋರರು ‘ಡೈರೆಕ್ಟ್ ಆಕ್ಶನ್ ಡೇ’ಯ (ನೇರ ಕಾರ್ಯಾಚರಣೆಯ ದಿನದ) ಹೆಸರಿನಲ್ಲಿ ಹಿಂದೂಗಳ ಹತ್ಯೆಯನ್ನು ಮಾಡಲು ಪ್ರಾರಂಭಿಸಿದ್ದರು. ಕೋಲಕಾತಾದ ರಸ್ತೆಯ ಮೇಲೆ ಹಿಂದೂಗಳ ಭಯಾನಕ ನರಮೇಧ ನಡೆದಿತ್ತು, ಮಹಿಳೆಯರ ಮೇಲೆ ಬಲಾತ್ಕಾರವಾಗುತ್ತಿತ್ತು ಮತ್ತು ಅವರ ಮೇಲೆ ಹಾರಾಡುವ ಹದ್ದುಗಳು ಎಲ್ಲೆಡೆಗೆ ಕಾಣಿಸುತ್ತಿದ್ದವು. ಈ ಭೀಕರ ಹತ್ಯಾಕಾಂಡದ ನೇತೃತ್ವವನ್ನು ಸ್ವತಃ ಸುರ‍್ಹಾವರ್ದಿ ಮತ್ತು ಮುಜಿಬೂರ ರೆಹಮಾನ (ಮುಂದೆ ಬಾಂಗ್ಲಾದೇಶದ ರಾಷ್ಟ್ರಪತಿಯಾದವರು) ಇವರಿಬ್ಬರೂ ವಹಿಸಿದ್ದರು ಮತ್ತು ಈ ಹತ್ಯಾಕಾಂಡದ ಹಿಂದಿನ ಬುದ್ಧಿ (ಆನಿಯೋಜನೆ) ‘ಕಾಯದಾ ಆಝಮ್ ಬ್ಯಾ. ಜಿನ್ನಾ ಇವರದ್ದಾಗಿತ್ತು.

ಮುಸ್ಲಿಮ್ ಲೀಗ್‌ನ ಸಭೆಯ ನಂತರ ಕೋಲಕಾತಾದಲ್ಲಿ ನಡೆದ ಹಿಂದೂಗಳ ಭೀಕರ ನರಮೇಧ

ಆಗಸ್ಟ್ ೧೬ ರಂದು ಮುಸ್ಲಿಮ್ ಲೀಗ್‌ನ ಒಂದು ಸಭೆಯಾಯಿತು, ಅದರಲ್ಲಿ ಸುರ‍್ಹಾವರ್ದಿ ಮತ್ತು ಮುಜಿಬೂರ್ ಇವರು ನೆರೆದಿದ್ದ ಸಾವಿರಾರು ಜನರೆದುರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದರು ಮತ್ತು ಇಸ್ಲಾಂ ಧರ್ಮವನ್ನು ನಂಬದ (ಕಾಫೀರ) ಹಿಂದೂಗಳ ಹತ್ಯೆಯನ್ನು ಮಾಡಲು ಅವರನ್ನು ಪ್ರಚೋದಿಸಿದರು. ತದನಂತರ ಇಸ್ಲಾಮೀ ಕಾಲದ ಭೀಕರ ಅತ್ಯಾಚಾರವು ಮತ್ತೊಮ್ಮೆ ಒಂದು ಬಾರಿ ಕೋಲಕಾತಾದಲ್ಲಿ ಪ್ರಾರಂಭವಾಯಿತು. ಎರಡು ದಿನ ಮತಾಂಧರು ದಂಗೆಯನ್ನು ಮಾಡಿದರು. ಯಾವುದಾದರೊಬ್ಬ ಮತಾಂಧ ಗಲಭೆಕೋರ ಸಿಕ್ಕಿಬಿದ್ದರೆ, ಸುರ‍್ಹಾವರ್ದಿ ಅವನನ್ನು ತಕ್ಷಣ ಬಿಟ್ಟು ಬಿಡುತ್ತಿದ್ದನು. ಆ ಸಮಯದ ಆಂಗ್ಲ ಗವರ್ನರ್ ಎಫ್. ಬರೋಜ ಇವರು ಏನೂ ನಡೆದಿಲ್ಲವೆಂಬಂತೆ ಬಾಯಿ ಮುಚ್ಚಿಕೊಂಡಿದ್ದರು. ನಾಲ್ಕೂ ದಿಕ್ಕುಗಳಲ್ಲಿ ಎಲ್ಲೆಂದರಲ್ಲಿ ಹಿಂದೂಗಳ ಶವಗಳು ಬಿದ್ದಿದ್ದವು, ಹಾಹಾಕಾರವೆದ್ದಿತ್ತು ಮತ್ತು ನರಮೇಧವು ಹೆಚ್ಚಾಗುತ್ತಲೇ ಇತ್ತು. ಈ ಸಂಪೂರ್ಣ ನರಮೇಧದಲ್ಲಿ ಕಾಂಗ್ರೆಸ್ಸಿನ ನೇತಾರರು ಕುರುಡ, ಮೂಕ ಮತ್ತು ಕಿವುಡರಾಗಿ ಈ ರಾಕ್ಷಸರಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದರು.

ಪತ್ರಕರ್ತನ ಅಭಿಪ್ರಾಯ : ಕೋಲಕಾತಾ ಗಲಭೆಯು ಯುದ್ಧಕ್ಕಿಂತ ಭೀಕರ ಮತ್ತು ಭಯಾನಕವಾಗಿತ್ತು

‘ಸ್ಟೇಟ್ಸ್‌ಮ್ಯಾನ್’ ಹೆಸರಿನ ದಿನಪತ್ರಿಕೆಯ ಪತ್ರಕರ್ತ ಕಿಮ್ ಕ್ರಿಸ್ಟನ್ ಇವರು, ‘ಯುದ್ಧದ ಅನುಭವವು ನನ್ನನ್ನು ಕಠೋರ ಮಾಡಿದೆ; ಆದರೆ ಯುದ್ಧವು ರಣರಂಗದಲ್ಲಿಯೂ ಇಷ್ಟು ಭೀಕರ ಮತ್ತು ಭಯಾನಕ ಎಂದಿಗೂ ಇರಲಿಲ್ಲ. ಇದು ಗಲಭೆಯಲ್ಲ. ಒಂದು ವೇಳೆ ಇದಕ್ಕಾಗಿ ಒಂದು ಶಬ್ದವನ್ನು ಶೋಧಿಸುವುದಿದ್ದರೆ, ಅದನ್ನು ಮಧ್ಯಯುಗದಲ್ಲಿನ ‘ಇಸ್ಲಾಮಿ ಜಿಹಾದ್’ ನಲ್ಲಿಯೇ ಶೋಧಿಸಬೇಕಾಗುವುದು,’ ಎಂದು ಬರೆದಿದ್ದಾರೆ. (ಆಧಾರ : ಗಾಂಧಿ ಹಿಜ್ ಲೈಫ್ ಆಂಡ್ ಥಾಟ್ಸ್, ಪುಟ ಸಂಖ್ಯೆ ೨೫೩, ಲೇಖಕರು : ಜೆ. ಬಿ. ಕೃಪಾಲಿನಿ)

ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಗೋಪಾಲಚಂದ್ರ ಮುಖ್ಯೋಪಾಧ್ಯಾಯ !

ಮತಾಂಧರ ಈ ಭೀಕರ ದೌರ್ಜನ್ಯಗಳಿಂದ ‘ಗೋಪಾಲ ಪಾಠಾ’ ಅಂದರೆ ಗೋಪಾಲಚಂದ್ರ ಮುಖ್ಯೋಪಾಧ್ಯಾಯ ಹೆಸರಿನ ಓರ್ವ ಬಂಗಾಲಿ ಯುವಕನ ರಕ್ತವು ಕುದಿಯಿತು. ಮುಖ್ಯೋಪಾಧ್ಯಾಯ ಪರಿವಾರದವರದ್ದು ಕಟುಕರ ವ್ಯವಸಾಯವಾಗಿತ್ತು. ಗೋಪಾಲಚಂದ್ರರು ತಮ್ಮ ಕೆಲವು ಸಹಚರರನ್ನು ಕೂಡಲೇ ಒಟ್ಟುಗೂಡಿಸಿದರು ಮತ್ತು ಶಸ್ತ್ರಗಳನ್ನು ಹಾಗೂ ಬಾಂಬ್ಗಳನ್ನು ಪಡೆದುಕೊಂಡರು. ಬಹಳಷ್ಟು ಹಿಂದೂ ವ್ಯಾಪಾರಿಗಳು ಅವರಿಗೆ ಮೇಲಿನ ಸಾಮಗ್ರಿಗಳನ್ನು ಪಡೆದುಕೊಳ್ಳಲು ಸಾಕಷ್ಟು ಹಣದ ಸಹಾಯ ಮಾಡಿದರು. ಗೋಪಾಲಜಿಯವರು ಎಲ್ಲ ವ್ಯವಸ್ಥೆಯನ್ನು ಮಾಡಿದರು ಮತ್ತು ತಮ್ಮ ಸಹಚರರೊಂದಿಗೆ ಅವರು ಮತಾಂಧ ಗಲಭೆಕೋರರಿಗೆ ಅವರ ಭಾಷೆಯಲ್ಲಿಯೇ ಉತ್ತರ ಕೊಡಲು ಹೊರಬಂದರು. ಆ ದಿನದಿಂದ ಕೋಲಕಾತಾದ ರಸ್ತೆಗಳ ಮೇಲೆ ಮತಾಂಧ ಗಲಭೆಕೋರರ ಶವಗಳು ಕಾಣಿಸ ತೊಡಗಿದವು. ಕೈಯಲ್ಲಿ ಖಡ್ಗ ಹಿಡಿದ ಗೋಪಾಲಜಿಯವರ ರೌದ್ರರೂಪವನ್ನು ನೋಡಿ ಮತಾಂಧರಲ್ಲಿ ಭಯಹುಟ್ಟಿತು. ಗೋಪಾಲಜಿಯವರು ತಮ್ಮ ಸಹಚರರಿಗೆ, ‘ಅಮಾಯಕ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಚಿಕ್ಕ ಮಕ್ಕಳನ್ನು  ಮುಟ್ಟಬಾರದು’, ಎಂದು ಹೇಳಿದ್ದರು.

ಮೋಹನದಾಸ ಗಾಂಧಿ ಮತ್ತು ಸರಕಾರವನ್ನುನಂಬುವುದಕ್ಕಿಂತ ತಮ್ಮ ರಕ್ಷಣೆಯನ್ನು ತಾವೇ ಮಾಡಿ ಕೊಳ್ಳುವುದು ಆವಶ್ಯಕವಾಗಿದೆ ಎಂದು ಹಿಂದೂಗಳಿಗೆ ತಿಳಿಯಿತು !

ಅಲ್ಲಿಯವರೆಗೆ ಮೋಹನದಾಸ ಗಾಂಧಿ ಮತ್ತು ಸರಕಾರದ ಭರವಸೆಯನ್ನು ಅವಲಂಬಿಸಿದ ಹಿಂದೂಗಳಿಗೂ, ತಮ್ಮ ರಕ್ಷಣೆ ಯನ್ನು ತಾವೇ ಮಾಡಿಕೊಳ್ಳಬೇಕು ಎಂಬುದು ತಿಳಿಯಿತು. ಆದ್ದರಿಂದ ಉಳಿದ ಹಿಂದೂಗಳೂ ಗೋಪಾಲಜಿಯವರೊಂದಿಗೆ ಹೊರಗೆ ಬಂದರು. ಸಂಯುಕ್ತ ಬಂಗಾಲ, ಬಿಹಾರ ಇವುಗಳೂ ಹೊತ್ತಿ ಉರಿಯಲು ಪ್ರಾರಂಭವಾದವು. ಹಿಂದೂ ಪೌರುಷದ ಸೂರ್ಯೋದಯವಾಯಿತು ಮತ್ತು ಜಿಹಾದಿ ಸಂಕಟದ ಕಗ್ಗತ್ತಲೆ ದೂರವಾಗತೊಡಗಿತು. ಬಹಳ ದಿನಗಳಿಂದ ಹಿಂದೂಗಳ ನರಮೇಧವನ್ನು ನೋಡಿಯೂ ‘ಮೌನಿಬಾಬಾ’ ಆಗಿ ಕುಳಿತ್ತಿದ್ದ ಗಾಂಧಿ ವಿಚಲಿತರಾದರು. ಅವರು ಸುರ‍್ಹಾವರ್ದಿಯ ಬಗ್ಗೆ ಏನೂ ಮಾತನಾಡದೇ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತು ಮತಾಂಧರನ್ನು ರಕ್ಷಿಸಲು ಆಮರಣ ಉಪವಾಸ ಪ್ರಾರಂಭಿಸಿದರು.

‘ಹಿಂದೂ ಸಹೋದರಿಯರ ರಕ್ಷಣೆಗಾಗಿ ಶಸ್ತ್ರಗಳನ್ನು ಬಿಡುವುದಿಲ್ಲ’, ಎಂದು ಕಾಂಗ್ರೆಸ್ ನೇತಾರರಿಗೆ ಸ್ಪಷ್ಟ ಉತ್ತರವನ್ನು ನೀಡಿದ ಗೋಪಾಲಚಂದ್ರ !

ಗೋಪಾಲಚಂದ್ರ ಮುಖ್ಯೋಪಾಧ್ಯಾಯರು ಕೋಲಕಾತಾವನ್ನು ವಿನಾಶದಿಂದರಕ್ಷಿಸಿದರು. ಕಾಂಗ್ರೆಸ್ಸಿನ ಅಂದಿನ ಓರ್ವ ಸ್ಥಳೀಯ ನಾಯಕರು ಅವರಿಗೆ, ‘ಗಾಂಧಿಯವರೆದುರು ಶಸ್ತ್ರಗಳನ್ನು ಕೆಳಗಿಡಿ’, ಎಂದು ಹೇಳಿದರು. ಆದರೆ ಅವರು ಸ್ಪಷ್ಟವಾಗಿ ನಿರಾಕರಿಸಿದರು ಮತ್ತು ‘ಯಾವಾಗ ಹಿಂದೂಗಳ ಹತ್ಯೆಯಾಗುತ್ತಿತ್ತೋ, ಆಗ ಎಲ್ಲಿದ್ದರು ನಿಮ್ಮ ಗಾಂಧಿ ? ಈ ಶಸ್ತ್ರಗಳಿಂದ ನಾನು ನನ್ನ ಹಿಂದೂ ಸಹೋದರಿಯರ ಮಾನರಕ್ಷಣೆಯನ್ನು ಮಾಡಿದ್ದೇನೆ. ನಾನು ಶಸ್ತ್ರಗಳನ್ನು ಕೆಳಗಿಡುವುದಿಲ್ಲ’, ಎಂದು ಹೇಳಿದರು.

ಗೋಪಾಲಚಂದ್ರ ಮುಖ್ಯೋಪಾಧ್ಯಾಯರು ೨೦೦೫ ನೇ ಇಸವಿಯಲ್ಲಿ ಕೋಲಕಾತಾದಲ್ಲಿ ಕೊನೆಯ ಉಸಿರೆಳೆದರು. ಅಲ್ಲಿಯವರೆಗೆ ತಥಾಕಥಿತ ಶ್ರೇಷ್ಠ ವಿಚಾರವಂತರು, ‘ಸೆಕ್ಯುಲರ್’ (ಜಾತ್ಯತೀತ) ಸಾಮ್ಯವಾದಿಗಳು ಮತ್ತು ಕಾಂಗ್ರೆಸ್ಸಿನ ರಾಜಕಾರಣಿಗಳು ಈ ದೇಶದ ನಿಜವಾದ ತೇಜಸ್ವಿ ನಾಯಕರ ವಿಷಯದಲ್ಲಿ ಏನು ಮಾಡಿದರೋ, ಅದನ್ನೇ ಗೋಪಾಲಜಿಯವರಿಗೂ ಮಾಡಿದರು. ಜನರ ಮನಸ್ಸಿನಿಂದ ಅವರ ನೆನಪನ್ನೂ ಸಹ ಅಳಿಸಿ ಹಾಕಲಾಯಿತು; ಆದರೆ ಬಂಗಾಲವನ್ನು ಕಾಪಾಡಿದ ಈ ಯೋಧನ ಸ್ಮರಣೆಯನ್ನು ಯಾರೂ ಸಂಪೂರ್ಣವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ.

ವಂದೇ ಮಾತರಮ್ !