
ಪ್ರತಾಪಗಢ (ಉತ್ತರ ಪ್ರದೇಶ) – ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದೆ; ಏಕೆಂದರೆ ಅದು ಹಿಂದೂ ಬಹುಸಂಖ್ಯಾತ ಮತ್ತು ಸನಾತನ ಬಹುಸಂಖ್ಯಾತವಾಗಿದೆ. ಯಾವುದೇ ಮುಸ್ಲಿಂ ಬಹುಸಂಖ್ಯಾತ ದೇಶವು ಜಾತ್ಯತೀತ (ಸೆಕ್ಯುಲರ್) ಆಗಿಲ್ಲ. ಒಂದು ವೇಳೆ ಅಂತಹ ದೇಶ ಯಾವುದಾದರೂ ಇದ್ದರೆ ತಿಳಿಸಿ. ಪ್ರತಿಯೊಂದು ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಶರಿಯತ್ ಕಾನೂನು ಜಾರಿಯಲ್ಲಿದೆ. ಎಲ್ಲಿಯವರೆಗೆ ಭಾರತವು ಹಿಂದೂ ಬಹುಸಂಖ್ಯಾತವಾಗಿರುತ್ತದೆಯೋ, ಅಲ್ಲಿಯವರೆಗೆ ಮಾತ್ರ ನಮ್ಮ ಸಂವಿಧಾನವಿರುತ್ತದೆ ಮತ್ತು ಅಲ್ಲಿಯವರೆಗೆ ಮಾತ್ರ ನಾವು ಜಾತ್ಯತೀತ ದೇಶವಾಗಿರುತ್ತೇವೆ ಎಂದು ಜನಸತ್ತಾ ದಳ ಲೋಕತಾಂತ್ರಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕರಾಗಿರುವ ರಘುರಾಜ ಪ್ರತಾಪ ಸಿಂಗ್ ಉರ್ಫ್ ರಾಜಾ ಭಯ್ಯಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ದೇಶ ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗುತ್ತಿದ್ದ ಮುಸ್ಲಿಮರನ್ನು ಹಿಂದೂಗಳು ತಡೆದರು !
ನಮ್ಮ ದೇಶದ ವಿಭಜನೆಯು ಧರ್ಮದ ಆಧಾರದ ಮೇಲೆ ನಡೆದಿದೆ ಎಂಬುದನ್ನು ನಾವು ಮರೆಯಬಾರದು ಎಂದು ರಾಜಾ ಭಯ್ಯಾ ಹೇಳಿದರು. ಮುಸ್ಲಿಂ ಲೀಗ್ ‘ನಮಗೆ ಇಸ್ಲಾಮಿಕ್ ರಾಷ್ಟ್ರ ಬೇಕು’ ಎಂದು ಒತ್ತಾಯಿಸಿತ್ತು ಮತ್ತು ಈ ರೀತಿಯಾಗಿ ಭಾರತವು ವಿಭಜಿಸಲ್ಪಟ್ಟಿತು. ಅದರ ನಂತರ ಪೂರ್ವ ಪಾಕಿಸ್ತಾನವು 1971 ರಲ್ಲಿ ಬಾಂಗ್ಲಾದೇಶವಾಯಿತು. ಈ ಎಲ್ಲ ವಿಷಯಗಳು ಧರ್ಮದ ಆಧಾರದ ಮೇಲೆಯೇ ನಡೆದಿದ್ದವು. ವಿಭಜನೆಯ ಸಮಯದಲ್ಲಿ ಯಾವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುತ್ತಿದ್ದರೋ, ಅವರನ್ನು ತಡೆಯುವ ಕೆಲಸವನ್ನು ಹಿಂದೂಗಳು ಮಾಡಿದ್ದರು. (ಈಗ ಮತಾಂಧ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸುವ ಸಮಯ ಬಂದಿದೆ ! – ಸಂಪಾದಕರು)
ಹಿಂದೂ ಸನಾತನ ಧರ್ಮವು ಅನಾದಿಯಾಗಿದೆ !
ಈ ಭೂಮಿಯ ಮೇಲಿರುವ ಎಲ್ಲಾ ಧರ್ಮಗಳು ಮತ್ತು ಪಂಥಗಳ ಪ್ರಾರಂಭಕ್ಕೆ ಒಂದು ನಿರ್ದಿಷ್ಟ ದಿನಾಂಕವಿದೆ ಎಂದು ರಾಜಾ ಭಯ್ಯಾ ಹೇಳಿದರು. ಕ್ರಿಶ್ಚಿಯನ್ ಧರ್ಮವು ಈ ದಿನಾಂಕದಿಂದ ಪ್ರಾರಂಭವಾಯಿತು, ಇಸ್ಲಾಂ ಧರ್ಮವು ಈ ದಿನಾಂಕದಿಂದ ಪ್ರಾರಂಭವಾಯಿತು, ಸಿಖ್ ಧರ್ಮವು ಈ ದಿನಾಂಕದಿಂದ ಪ್ರಾರಂಭವಾಯಿತು; ಆದರೆ ಹಿಂದೂ ಸನಾತನ ಧರ್ಮವು ಅನಾದಿ ಮತ್ತು ಅನಂತವಾಗಿದೆ. ಅತ್ಯಂತ ಮಹತ್ವದ ವಿಷಯವೆಂದರೆ ಇತರ ಧರ್ಮಗಳನ್ನು ಸ್ಥಾಪಿಸಲು ಒಬ್ಬ ವ್ಯಕ್ತಿ ಅಥವಾ ಮಹಾಪುರುಷರಿದ್ದರು; ಆದರೆ ಹಿಂದೂ ಧರ್ಮದ ಉತ್ಪತ್ತಿಯು ಯಾವುದೇ ಒಬ್ಬ ಮಹಾಪುರುಷನಿಂದ ಆಗಿಲ್ಲ, ಅದು ಶಾಶ್ವತವಾಗಿದೆ. ಆದ್ದರಿಂದಲೇ ಅದನ್ನು ‘ಸನಾತನ’ ಎಂದು ಕರೆಯಲಾಗಿದೆ. ಹೀಗಾಗಿ ಸನಾತನ ಧರ್ಮದ ಮುಂದೆ ಎಲ್ಲರೂ ತಲೆಬಾಗಬೇಕಾಗುತ್ತದೆ.
ಹಿಂದೂ ಧರ್ಮದಲ್ಲಿನ ಲೋಪದೋಷಗಳು ನಿವಾರಣೆಯಾಗುತ್ತಿವೆ !
ನನ್ನ ಕಾರ್ಯಶೈಲಿಯಲ್ಲಿ ಮತ್ತು ನಮ್ಮ ಹಿಂದೂ ಧರ್ಮದಲ್ಲಿ ಬಂದಿರುವ ಕೆಲವು ಲೋಪದೋಷಗಳನ್ನು (ಜಾತಿ ಪದ್ಧತಿ ಇತ್ಯಾದಿ) ದೂರಗೊಳಿಸಲು ನಾನು ಯಾವಾಗಲೂ ಪ್ರಯತ್ನಿಸುತ್ತಿರುತ್ತೇನೆ ಮತ್ತು ಈ ಲೋಪದೋಷಗಳು ನಿವಾರಣೆಯಾಗುತ್ತಿವೆ ಎಂದು ರಾಜಾ ಭಯ್ಯಾ ಹೇಳಿದರು. ಹಿಂದೂಗಳು ಈಗ ಜಾಗೃತರಾಗುತ್ತಿದ್ದಾರೆ. ಹಿಂದೂಗಳಲ್ಲಿ ಈಗ ತಮ್ಮ ದೇಶ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡುತ್ತಿದೆ.
ಶ್ರೀರಾಮನ ಮೇಲಿನ ಆಘಾತ !
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು