ರಾಜ್ಯದ ಹಿಂದೂ ವಿರೋಧಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭಾಜಪ ಶಾಸಕ ಸಿ.ಟಿ. ರವಿ ಅವರಿಂದ ತಕ್ಕ ಪ್ರತ್ಯುತ್ತರ
ಶಾಖೆಗೆ ಬಂದು ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವಂತೆಯೂ ಕರೆ

ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ 3 ಬಾರಿ ನಿಷೇಧ ಹೇರಲಾಗಿತ್ತು. 2 ಬಾರಿ ನ್ಯಾಯಾಲಯವು, ಒಮ್ಮೆ ಸರಕಾರವು ಅದನ್ನು ಹಿಂತೆಗೆದುಕೊಂಡಿತು. ನಿಮ್ಮ ಪ್ರಶ್ನೆಗಳ ಬಗ್ಗೆ ಸರಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಚರ್ಚೆ ನಡೆದಿದೆ. ಸಂವಿಧಾನವು ಸಂಸ್ಥೆಗಳಿಗೆ ನೋಂದಾಯಿತ ಮತ್ತು ನೋಂದಾಯಿತವಲ್ಲದ ರೂಪದಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ. ಸಂಘವು ಆರ್ಥಿಕ ನೆರವು ಪಡೆದಿದ್ದರೆ ಅಥವಾ ಅದರ ಸೊಸೈಟಿ, ಪಕ್ಷ, ಟ್ರಸ್ಟ್ ಇದ್ದರೆ ಮಾತ್ರ ನೋಂದಣಿ ಮಾಡುವುದು ಅಗತ್ಯವಾಗಿದೆ. ಸಂಘವು ಸೊಸೈಟಿ, ಟ್ರಸ್ಟ್ ಅಥವಾ ಸಂಸ್ಥೆಯಲ್ಲ. ಇದು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಘಟನೆಯಾಗಿದೆ. ಆದ್ದರಿಂದ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಭಾಜಪ ಶಾಸಕ ಸಿ.ಟಿ. ರವಿ ಅವರು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರಿಗೆ ಖರ್ಗೆ ಅವರು ಬರೆದ ಪತ್ರದ ಬಗ್ಗೆ ಶಾಸಕ ರವಿ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರು.
ರವಿ ಅವರು ಮುಂದೆ ಮಾತನಾಡುತ್ತಾ, ಸಂಘದ ಬಗ್ಗೆ ಕುತೂಹಲವಿದ್ದರೆ, ಖರ್ಗೆ ಅವರು ಶಾಖೆಯನ್ನು ನೋಡಲಿ. ಯಾವುದೇ ಶಾಖೆಗೆ ಹೋಗಿ ಸಂಘದ ಬಗ್ಗೆ ತಿಳಿದುಕೊಳ್ಳಬೇಕು. 100 ವರ್ಷಗಳಿಂದ ಸಂಘದ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಪೂರ್ವಗ್ರಹ ಪೀಡಿತರಾಗಿ ಮತ್ತು ದ್ವೇಷದಿಂದ ನೋಡಿದರೆ ಸಂಘ ಅರ್ಥವಾಗುವುದಿಲ್ಲ. ಶಾಖೆಗೆ ಬಂದರೆ ಖರ್ಗೆ ಅವರ ಅಹಂಕಾರಕ್ಕೆ ಪೆಟ್ಟು ಬೀಳಬಹುದು. ಶಾಖೆಗೆ ಬಂದರೆ ಅಹಂಕಾರ ಕಡಿಮೆಯಾಗುತ್ತದೆ.
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಅಶ್ಲೀಲತೆ ಹರಡುವ ‘ಸ್ಟ್ಯಾಂಡ್-ಅಪ್ ಕಾಮಿಡಿ’ ಕಾರ್ಯಕ್ರಮಗಳಿಗೆ ಸೆನ್ಸಾರ್ ಮಂಡಳಿಯ ಪೂರ್ವಾನ್ಮತಿ ಕಡ್ಡಾಯಗೊಳಿಸಿ!
‘ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಜಾತ್ಯತೀತವಾಗಿದೆ, ಯಾವುದಾದರೂ ಇಸ್ಲಾಮಿಕ್ ದೇಶ ಜಾತ್ಯತೀತವಾಗಿದ್ದರೆ ತಿಳಿಸಿ !’ – ರಾಜಾ ಭಯ್ಯಾ, ಶಾಸಕರು, ಉತ್ತರ ಪ್ರದೇಶ
Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’
ಚಿಕ್ಕ ಮಕ್ಕಳಿಗೆ ಗೋಮಾಂಸ ತಿನ್ನಲು ಸಲಹೆ ನೀಡುವವರ ವಿರುದ್ಧ ಮೊಕದ್ದಮೆ ದಾಖಲಿಸಿ ! – ವಿಶ್ವ ಹಿಂದೂ ಪರಿಷತ್
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !