ಗಿಲ್ಗಿಟ್-ಬಾಲ್ಟಿಸ್ತಾನದ ನಿಯಂತ್ರಣವನ್ನು ಕೈಬಿಡಿ ! – ಭಾರತದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಅಂತಹ ಎಚ್ಚರಿಕೆ ನೀಡುವ ಮೂಲಕ ಪಾಕಿಸ್ತಾನವು ಈ ಪ್ರದೇಶದ ನಿಯಂತ್ರಣವನ್ನು ಕೈಬಿಡುತ್ತದೆ ಎಂದು ಅಪೇಕ್ಷಿಸಲಾಗುವುದಿಲ್ಲ. ಅದಕ್ಕಾಗಿ ಭಾರತವು ಅವರು ಅರ್ಥಮಾಡಿಕೊಳ್ಳುವ ಸೈನ್ಯ ಭಾಷೆಯಲ್ಲಿ ಹೇಳುವ ಮೂಲಕ ಈ ಭಾಗವನ್ನು ಮರಳಿ ಪಡೆಯಬೇಕು !

ನವ ದೆಹಲಿ – ಪಾಕಿಸ್ತಾನ ನುಸುಳಿ ವಶಪಡಿಸಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಮಧ್ಯಂತರ ರಾಜ್ಯದ ಸ್ಥಾನಮಾನ ನೀಡುವುದನ್ನು ಭಾರತ ಸರಕಾರ ವಿರೋಧಿಸಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ. ಪಾಕಿಸ್ತಾನವು ಗಿಲ್ಗಿಟ್-ಬಾಲ್ಟಿಸ್ತಾನ ಮೇಲಿರುವ ನಿಯಂತ್ರಣವನ್ನು ಬಿಡಬೇಕು. ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಮಧ್ಯಂತರ ರಾಜ್ಯದ ಸ್ಥಾನಮಾನ ಘೋಷಿಸಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಧೋರಣೆಯನ್ನು ಭಾರತ ವಿರೋಧಿಸಿದ್ದು,

ಭಾರತದ ವಿದೇಶಾಂಗ ಸಚಿವಾಲಯವು, ಈ ಪ್ರದೇಶದಲ್ಲಿ ಭೌತಿಕ ಬದಲಾವಣೆಯನ್ನು ತರಲು ಪಾಕಿಸ್ತಾನದ ಪ್ರಯತ್ನಗಳನ್ನು ಭಾರತ ಸರಕಾರ ತೀವ್ರವಾಗಿ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದೆ. ಈ ಪ್ರದೇಶದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಇಮ್ರಾನ್ ಖಾನ್ ಸರಕಾರ ಕೆಲವು ದಿನಗಳ ಹಿಂದೆ ಘೋಷಿಸಿತ್ತು. ಇದರ ವಿರುದ್ಧವೂ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.