'ಪವಿತ್ರ ನೀರು' ಕುಡಿದರೆ ರೋಗ ಗುಣವಾಗುತ್ತದೆ ಎಂದು ದಾವೆ!
ಜನರ ವಂಚನೆ ಮತ್ತು ದಾರಿ ತಪ್ಪಿಸುವವರನ್ನು ಸರಕಾರ ಕಾರಾಗೃಹಕ್ಕೆ ತಳ್ಳುವುದು ಅವಶ್ಯಕ!

ಪುಣೆ – ಪವಿತ್ರ ನೀರು ಕುಡಿದರೆ ಕ್ಯಾನ್ಸರ್, ಟ್ಯೂಮರ್‌ನಂತಹ ಅಸಾಧ್ಯ ಕಾಯಿಲೆಗಳು ಗುಣವಾಗುತ್ತವೆ ಎಂದು ಹೇಳಿಕೊಳ್ಳುತ್ತಿದ್ದ ಪಾಸ್ಟರ್ (ಕ್ರಿಶ್ಚಿಯನ್ ಧರ್ಮಪ್ರಚಾರಕ) ಕೆನೆತ್ ಪಾಲ್ ಸಿಲ್ವೆ ಅವರೂ ಸೇರಿದಂತೆ 8 ಜನರ ವಿರುದ್ಧ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಕಾರ್ಯಕರ್ತೆಯಾದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
1. ಕ್ರಿಶ್ಚಿಯನ್ ಧರ್ಮಗುರು ಕೊಂಡ್ವಾದ ಪ್ರಾರ್ಥನಾ ಮಂದಿರಕ್ಕೆ ಬಂದಿದ್ದರು. ದೂರು ನೀಡಿದ ಮಹಿಳೆ ತನ್ನ ಸ್ನೇಹಿತೆಯೊಂದಿಗೆ ಅಲ್ಲಿ ಹಾಜರಿದ್ದರು. ಅಲ್ಲಿನ ಸ್ವಯಂಸೇವಕರು ತಲಾ 20 ರೂಪಾಯಿ ಪಡೆದು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ನೀಡಿದರು.
2. ‘ಯಾವುದೇ ಕಾಯಿಲೆ ಇದ್ದರೂ, ಆ ಭಾಗಕ್ಕೆ ಈ ನೀರನ್ನು ಹಚ್ಚಿ. ಇದರಿಂದ ಕಾಯಿಲೆ ಕಡಿಮೆಯಾಗುತ್ತದೆ’ ಎಂದು ಅವರು ಹೇಳಿದರು.
3. ಧರ್ಮಗುರುಗಳು, ‘ಶರೀರದ ಯಾವ ಭಾಗದಲ್ಲಿ ಕಾಯಿಲೆ ಇದೆಯೋ, ಆ ಭಾಗದ ಮೇಲೆ ಬಲಗೈಯನ್ನು ಇರಿಸಿ. ಕ್ಯಾನ್ಸರ್, ಟ್ಯೂಮರ್ ಸೇರಿದಂತೆ ಯಾವುದೇ ಕಾಯಿಲೆಯಿಂದ ದೇವರು ನಿಮ್ಮನ್ನು ಗುಣಪಡಿಸುತ್ತಾನೆ’ ಎಂದು ಹೇಳಿದರು.
4. ದೂರು ನೀಡಿದ ಮಹಿಳೆ ಮತ್ತು ಆಕೆಯ ಸ್ನೇಹಿತೆ ಇದರ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದರು. ಆಗ ಅಲ್ಲಿನ ಮಹಿಳಾ ಸ್ವಯಂಸೇವಕರು ಚಿತ್ರೀಕರಿಸದಂತೆ ತಡೆದರು. ಅವರಿಗೆ ತಳ್ಳಾಟ ನಡೆಸಿ ಮೊಬೈಲ್‌ನಲ್ಲಿದ್ದ ವಿಡಿಯೋವನ್ನು ಅಳಿಸಿ ಹಾಕಿದರು. ಪೊಲೀಸರು ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ‘ಮಹಾರಾಷ್ಟ್ರ ನರಬಲಿ ಮತ್ತು ಇತರ ಅಮಾನವೀಯ, ಅನಿಷ್ಟ ಮತ್ತು ಅಘೋರಿ ಪದ್ಧತಿ ಮತ್ತು ಮಂತ್ರವಾದ ನಿಷೇಧ ಕಾಯ್ದೆ’ ಸೇರಿದಂತೆ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!