ಬಾಗಪತ (ಉತ್ತರಪ್ರದೇಶ) ಎಂಬಲ್ಲಿರುವ ಮಸೀದಿಯಲ್ಲಿ ಭಾಜಪಾದ ಕಾರ್ಯಕರ್ತರಿಂದ ಹನುಮಾನ ಚಾಲಿಸಾದ ಪಠಣ

ಬಿಜೆಪಿ ಕಾರ್ಯಕರ್ತ ಮನುಪಾಲ್ ಬನ್ಸಾಲ್ ಅವರು ವಿನಯ್‌ಪುರದ ಮಸೀದಿಯಲ್ಲಿ ಹನುಮಾನ್ ಚಾಲಿಸಾ ಪಠಿಸಿದರು. ಮೌಲಾನಾ ಅಲಿ ಹಸನ್ ಅವರ ಅನುಮತಿಯೊಂದಿಗೆ ಈ ಪಠಣವನ್ನು ಮಾಡಲಾಯಿತು.

ಪಾಕಿಸ್ತಾನದ ಸಿಂಧ್‌ನಲ್ಲಿ ಮತಾಂಧರಿಂದ ದೇವಾಲಯಗಳು ಧ್ವಂಸ, 300 ಹಿಂದೂ ಕುಟುಂಬಗಳ ಮೇಲೆ ದಾಳಿ ನಡೆಸಲು ಯತ್ನ !

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶೀತಲ್ ದಾಸ್ ಪ್ರದೇಶದಲ್ಲಿ ಹಿಂದೂ ದೇವಾಲಯವನ್ನು ಮತಾಂಧರು ಧ್ವಂಸ ಮಾಡಿದ್ದಾರೆ. ದೇವಾಲಯದ ಸುತ್ತಮುತ್ತ ವಾಸಿಸುತ್ತಿರುವ 300 ಹಿಂದೂ ಕುಟುಂಬಗಳ ಮೇಲೆ ದಾಳಿ ನಡೆಸಲು ಸಹ ಪ್ರಯತ್ನಿಸಲಾಯಿತು

ಮಧ್ಯಪ್ರದೇಶ ಸರಕಾರದಿಂದ ಚಿನೀ ಮತ್ತು ಇತರ ವಿದೇಶಿ ಪಟಾಕಿಗಳ ಮೇಲೆ ನಿಷೇಧ

ರಾಜ್ಯದ ಭಾಜಪಾ ಸರಕಾರವು ದೀಪಾವಳಿಯ ಮೊದಲು ಚೀನಾದ ಮತ್ತು ವಿದೇಶಿ ಪಟಾಕಿಗಳನ್ನು ಸಂಗ್ರಹಿಸುವುದು, ಸಾಗಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲು ನಿರ್ಧರಿಸಿದೆ. ಈ ಪಟಾಕಿಗಳ ಆಮದನ್ನು ಪರವಾನಗಿ ಇಲ್ಲದೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕಾಂಗಡಾ (ಹಿಮಾಚಲ ಪ್ರದೇಶ)ದಲ್ಲಿರುವ ಶ್ರೀ ಬಾಗಲಾಮುಖಿ ದೇವಾಲಯವನ್ನು ಸರಕಾರೀಕರಣಗೊಳಿಸಲು ಶಿಫಾರಸು

ಸ್ಥಳೀಯ ಪ್ರಸಿದ್ಧ ಶ್ರೀ ಬಾಗಲಮುಖಿ ದೇವಾಲಯವನ್ನು ಸರಕಾರೀಕರಣಗೊಳಿಸಲು ಕಾಂಗಡಾ ಜಿಲ್ಲಾಧಿಕಾರಿಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಭಾಷೆ, ಕಲೆ ಮತ್ತು ಸಂಸ್ಕೃತಿ ಇಲಾಖೆ) ಶಿಫಾರಸು ಮಾಡಿದ್ದಾರೆ. ಉಪಜಿಲ್ಲಾಧಿಕಾರಿ ದೆಹರಾ ಅವರ ವರದಿಯ ಆಧಾರದ ಮೇಲೆ ಅವರು ಈ ಶಿಫಾರಸು ಮಾಡಿದ್ದಾರೆ. ಅದರಂತೆ ಮುಂದಿನ ಕ್ರಮಕ್ಕೆ ಚಾಲನೆ ನೀಡಲಾಗಿದೆ.

ಫ್ರಾನ್ಸ್‌ನಿಂದ ೧೮೩ ಪಾಕಿಸ್ತಾನಿಗಳ ವಿಸಾ ರದ್ದು, ೧೧೮ ಜನರನ್ನು ಫ್ರಾನ್ಸ್‌ನಿಂದ ಗಡಿಪಾರು

ಫ್ರಾನ್ಸ್ ಪಾಕಿಸ್ತಾನದ ಗೂಢಚಾರ ಇಲಾಖೆ ಐ.ಎಸ್.ಐ.ನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶುಜಾ ಪಾಷಾ, ಅವರ ಸಂಬಂಧಿಕರೂ ಸೇರಿದಂತೆ ೧೮೩ ಪಾಕಿಸ್ತಾನಿಗಳ ವಿಜಿಟರ್ ವೀಸಾಗಳನ್ನು ರದ್ದುಪಡಿಸಿದೆ ಮತ್ತು ೧೧೮ ಪಾಕಿಸ್ತಾನಿಗಳನ್ನು ಬಲವಂತವಾಗಿ ವಾಪಸ್ ಕಳುಹಿಸಿದೆ.

ಪಾಕಿಸ್ತಾನದಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಿದ ಸಚಿವರನ್ನು ಹೊರಹಾಕಲಾಯಿತು

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸರಕಾರದ ಮಾಹಿತಿ ಸಚಿವ ಫೈಯಾಜುಲ್ ಚೌಹಾನ್ ಅವರನ್ನು ಸಚಿವಾಲಯದ ಹುದ್ದೆಯಿಂದ ತೆಗೆದುಹಾಕಲಾಗಿದೆ. ಫೈಯಾಜುಲ್ ನಿರಂತರವಾಗಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹೊರಹಾಕಿದ್ದಾರೆ.

ಜಾಲೌನ್ (ಉತ್ತರ ಪ್ರದೇಶ) – ಪಕ್ಷದ ಮಹಿಳಾ ಕಾರ್ಯದರ್ಶಿಯನ್ನು ಕಿರುಕುಳ ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷನನ್ನು ಯುವತಿಯಿಂದ ಥಳಿತ !

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಅವರನ್ನು ತಮ್ಮದೇ ಪಕ್ಷದ ಮಹಿಳಾ ಕಾರ್ಯದರ್ಶಿ ಮತ್ತು ಇನ್ನೊಬ್ಬ ಯುವತಿ ರಸ್ತೆಯಲ್ಲಿ ಥಳಿಸಿದರು. ಅನುಜ್ ಮಿಶ್ರಾ ಯಾವಾಗಲೂ ನನ್ನನ್ನು ಕಿರುಕುಳ ನೀಡುತ್ತಾರೆ ಎಂದು ಮಹಿಳಾ ಕಾರ್ಯದರ್ಶಿ ಆರೋಪಿಸಿದರು. ಅವನನ್ನು ಚಪ್ಪಲಿಯಿಂದ ಹೊಡೆಯುತ್ತಿದ್ದಂತೆ, ಮಿಶ್ರಾ ಹೇಳುತ್ತಿದ್ದರು, ‘ನಾನು ಮತ್ತೆ ಮಾಡುವುದಿಲ್ಲ. ನನ್ನನ್ನು ಬಿಟ್ಟುಬಿಡಿ’; ಆದರೆ ಅವರನ್ನು ಥಳಿಸಲಾಗುತ್ತಿತ್ತು.

ಬುರ್ಖಾ ಧರಿಸಿ ಹಿಂದೂ ಹುಡುಗಿಯನ್ನು ದುಬೈಗೆ ಕಳುಹಿಸಲು ಯತ್ನಿಸುತ್ತಿದ್ದ ಮತಾಂಧ ಯುವಕನ ಬಂಧನ

ಒರಿಸ್ಸಾ ಮತ್ತು ಬಂಗಾಲದ ಗಡಿಯಲ್ಲಿರುವ ಜಜಪುರ ರಸ್ತೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಮತ್ತು ಭಜರಂಗದಳದ ಸಹಾಯದಿಂದ ಸಬೀರ್ ಅಲಿ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಒರಿಸ್ಸಾದ ಗಂಜಮ್ ಜಿಲ್ಲೆಯಿಂದ ಹಿಂದೂ ಬಾಲಕಿಯನ್ನು ಬುರಖಾ ಧರಿಸಿ ಕೋಲಕಾತಾಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನದ ಮೂಲಕ ದುಬೈಗೆ ಕರೆದೊಯ್ಯಲು ಪ್ರಯತ್ನಿಸಿದ್ದ.

ಖಲಿಸ್ತಾನವನ್ನು ಬೆಂಬಲಿಸುವ ೧೨ ಜಾಲತಾಣ‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ

ಖಲಿಸ್ತಾನ್ ಬೆಂಬಲಿಸುವ ೧೨ ಜಾಲತಾಣಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಇವುಗಳ ಪೈಕಿ ಕೆಲವು ಜಾಲತಾಣಗಳನ್ನು ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ನಡೆಸುತ್ತಿತ್ತು.

ನ್ಯಾಯಾಧೀಶರು ಲೈಂಗಿಕ ಸಂವೇದನಶೀಲತೆಯ ಬಗ್ಗೆ ಜ್ಞಾನ ಪಡೆದುಕೊಳ್ಳುವ ಅಗತ್ಯವಿದೆ ! – ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್

ನ್ಯಾಯಾಧೀಶರಿಗೆ ಲೈಂಗಿಕ ಸಂವೇದನಶೀಲತೆಯ ಬಗ್ಗೆ ಜ್ಞಾನ ನೀಡುವುದು ಅಗತ್ಯವಿದೆ. ಈ ಸಂವೇದನಾಶೀಲತೆ ಇದ್ದರೆ, ನ್ಯಾಯಾಧೀಶರು ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಹೆಚ್ಚು ಸಂವೇದನಾಶೀಲವಾಗಿ ನಿರ್ವಹಿಸುವರು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನ್ಯಾಯಾಂಗ ಅಕಾಡೆಮಿಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು