ಈ ದೈನಿಕವು ಜಿಹಾದಿ ಸಿದ್ಧಾಂತವನ್ನು ಹರಡುವ ಎಷ್ಟು ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರನ್ನು ನೋಂದಾಯಿಸಿದೆ ? ಇದನ್ನು ಅವರು ಹೇಳುವರೇ ? ಈ ದೈನಿಕದ ಇತಿಹಾಸ ಹಾಗೂ ವರ್ತಮಾನ ಹಿಂದೂದ್ವೇಷಿಯಾಗಿಯೇ ಉಳಿದಿದೆ. ಬ್ರಿಟಿಷರು ಪ್ರಾರಂಭಿಸಿದ ಈ ದೈನಿಕವು ಇಂದಿಗೂ ಅವರ ವಿಚಾರಗಳ ಹಾಗೂ ಕೃತಿಗಳು ಪ್ರತಿಬಿಂಬಿಸುತ್ತಿದೆ. ಹಿಂದೂಗಳು ಇಂತಹವರ ಮೇಲೆ ಬಹಿಷ್ಕಾರ ಹಾಕಿದರೆ ಆಶ್ಚರ್ಯಪಡಬೇಕಿಲ್ಲ !
ನವ ದೆಹಲಿ – ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಹೇಳುತ್ತಾ ಫೇಸ್‌ಬುಕ್‌ನಿಂದ ‘ಲವ್ ಜಿಹಾದ್’ ವಿರೋಧಿಸುವ ೩ ಗುಂಪುಗಳನ್ನು ತೆಗೆದುಹಾಕಲಾಗಿದೆ. ಇದನ್ನು ಆಂಗ್ಲ ದಿನಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಇದೇ ದೈನಿಕದಿಂದ ಈ ಗುಂಪುಗಳ ವಿರುದ್ಧ ದೂರು ದಾಖಲಿಸಲಾಗಿತ್ತು.
ಈ ಗುಂಪುಗಳಿಂದ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ವರದಿ ಮಾಡಲಾಗಿತ್ತು. ಅದೇರೀತಿ ಅಶ್ಲೀಲ ಹಾಗೂ ಪ್ರಚೋದನಕಾರಿ ಭಾಷಣಗಳ ಪ್ರಸಾರ, ಅಂತರ್-ಧರ್ಮೀಯ ದಂಪತಿಗಳ ಗುರುತುಗಳನ್ನು ಬಹಿರಂಗಪಡಿಸುವ ಮೂಲಕ, ಅವರ ಭದ್ರತೆಗೆ ಅಪಾಯ, ಅವರ ಖಾಸಗಿ ಜೀವನದಲ್ಲಿ ಸಮಸ್ಯೆಗಳು ಸೃಷ್ಟಿ, ಅಲ್ಪಸಂಖ್ಯಾತ ಸಮುದಾಯದ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದವು ಮತ್ತು ಅವರ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದವು ಎಂದು ವರದಿ ಹೇಳಿತ್ತು.