ಕೊರೋನಾ ವೈರಾಣುವಿನ ಸಂಕ್ರಾಮಿಕತೆಯಿಂದ ಜಗತ್ತಿನಾದ್ಯಂತ ತುರ್ತುಪರಿಸ್ಥಿತಿ ಉದ್ಭವಿಸಿದೆ. ಪ್ರತಿಯೊಬ್ಬರೂ ‘ಸ್ಯಾನಿಟೈಸರ್’ ಹಾಗೂ ‘ಮಾಸ್ಕ್’ನ ಆಧಾರದಿಂದ ಕೊರೋನಾದೊಂದಿಗೆ ದಿನಕಳೆಯುತ್ತಿದ್ದಾರೆ. ಎಲ್ಲರೂ ಈ ಸಾಂಕ್ರಾಮಿಕತೆಯನ್ನು ತಡೆಗಟ್ಟಲು ಕೊರೋನಾದ ಮೇಲೆ ಲಸಿಕೆ ಅಥವಾ ಔಷಧಿಯ ನಿರೀಕ್ಷೆಯಲ್ಲಿದ್ದಾರೆ. ವೈರಾಣುವನ್ನು ಪ್ರತಿಬಂಧಿಸಲು ಸುಮಾರು ಅರ್ಧ ಶತಕೋಟಿ ನಾಗರಿಕರಿಗೆ ಕೊರೋನಾ ಪ್ರತಿಬಂಧಕ ಲಸಿಕೆಯನ್ನು ನೀಡಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದು ದೇಶವೂ ತನ್ನ ಪರಿಯಿಂದ ಕೊರೋನಾದ ಲಸಿಕೆಯನ್ನು ಉತ್ಪಾದಿಸಲು ಪ್ರಯತ್ನಿಸುತ್ತಿದೆ. ಹಲವಾರು ದೇಶಗಳು ಈ ವಿಷಯದಲ್ಲಿ ಸ್ಪರ್ಧೆಗಿಳಿದಿವೆ; ಆದರೆ ಇಂತಹ ಸಮಯದಲ್ಲಿ ಕೆಲವು ಅಹಿತಕರ ಘಟನೆಗಳು ಕೂಡ ನಡೆಯುತ್ತಿದೆ. ಭಾರತದಲ್ಲಿ ಔಷಧಿಗಳನ್ನು ಉತ್ಪಾದಿಸುವ ಭಾಗ್ಯನಗರದ ಡಾ. ರೆಡ್ಡಿ ಎಂಬ ಖ್ಯಾತ ಕಂಪನಿಗೆ ರಶಿಯಾದ ಕೊರೋನಾದ ಲಸಿಕೆಯನ್ನು ಪರೀಕ್ಷಿಸಲು ಅನುಮತಿ ನೀಡಲಾಗಿದೆ. ರಶಿಯಾವು ಕೊರೋನಾದ ಮೇಲೆ ‘ಸ್ಪುಟನಿಕ್-ವಿ ಎಂಬ ಲಸಿಕೆಯನ್ನು ಸಂಶೋಧಿಸಿದೆ. ಲಸಿಕೆಯ ಕೆಲಸವು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಡಾ. ರೆಡ್ಡಿ ಕಂಪನಿಯ ಮೇಲೆ ಸೈಬರ್ ಹಲ್ಲೆಯಾಯಿತು. ಇದರಿಂದ ಕಂಪನಿಯು ಜಗತ್ತಿನಾದ್ಯಂತವಿರುವ ತನ್ನ ಎಲ್ಲ ಶಾಖೆಗಳ ಕೆಲಸವನ್ನು ನಿಲ್ಲಿಸಿದೆ. ಈ ಹಿಂದೆಯೂ ಕಂಪನಿಯ ಸರ್ವರ್‌ನಿಂದ ಡಾಟಾವನ್ನು ಕಳ್ಳತನ ಮಾಡಲಾಗಿತ್ತು. ಸೈಬರ್ ಹಲ್ಲೆಯ ಪರಿಣಾಮವೆಂದು ಮುಂಬೈನ ಶೇರು ಮಾರುಕಟ್ಟೆಯಲ್ಲಿ ಈ ಸಂಸ್ಥೆಯ ಶೇರಿನ ಮೌಲ್ಯವು ಕುಸಿದಿದೆ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಕೂಡ ಈ ಕಂಪನಿಯ ಮೌಲ್ಯ ಶೇಕಡಾ ಎರಡುವರೆಯಷ್ಟು ಕುಸಿದಿದೆ. ಈ ಘಟನೆಯಿಂದ ಭಾರತ ಹಾಗೂ ರಶಿಯಾದ ನಡುವಿನ ಸಂಬಂಧದ ಮೇಲೆಯೂ ಪರಿಣಾಮವಾಗಬಹುದು, ಎಂಬುದನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ. ಆಪತ್ಕಾಲೀನ ಸ್ಥಿತಿಯಲ್ಲಿ ಈ ರೀತಿ ಡಾಟಾ ಕಳ್ಳತನವಾಗುವುದು ಅಪಾಯಕಾರಿಯಾಗಿದೆ. ನಿಖರವಾಗಿ ಯಾವ ದೇಶವು ಈ ಸೈಬರ್ ಹಲ್ಲೆ ನಡೆಸಿತು ? ಅದರ ರೂವಾರಿ ಯಾರು ? ಎಂಬುದರ ಬಗ್ಗೆ ಶೀಘ್ರಾತಿಶೀಘ್ರ ತನಿಖೆಯಾಗಬೇಕು. ಸರಕಾರವು ಇದರೊಂದಿಗೆ ಇತರ ಉಪಾಯ ಯೋಜನೆಗಳನ್ನು ಕೂಡ ಅವಲಂಬಿಸಬೇಕು. ಇಂದು ಇಡೀ ಜಗತ್ತು ಲಸಿಕೆಯ ನಿರೀಕ್ಷೆಯಲ್ಲಿದೆ. ಆದ್ದರಿಂದ ಲಸಿಕೆಯ ವಿಷಯದಲ್ಲಿ ತಂತ್ರಜ್ಞಾನದ ಆಧಾರದಲ್ಲಿ ಆದಷ್ಟು ಹೆಚ್ಚು ಸಂಶೋಧನೆ ನಡೆಸುತ್ತಿರುವಾಗ ನಾವು ಸಹ ಅಷ್ಟೇ ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಒಂದೆಡೆ ಆಪತ್ಕಾಲೀನ ಸ್ಥಿತಿ ಹಾಗೂ ಯಾವುದೇ ಶತ್ರು ಅಥವಾ ಸೈನಿಕರು ಎದುರುಬದುರಿದ್ದಾಗ ಮತ್ತೊಂದೆಡೆ ನಡೆಯುತ್ತಿರುವ ಸೈಬರ್ ಹಲ್ಲೆಗಳು, ಇದು ದೇಶಕ್ಕಾಗಿ ಅಪಾಯದ ಕರೆಗಂಟೆಯೇ ಆಗಿದೆ. ಕೊರೋನಾದ ಲಸಿಕೆ ತಯಾರಾಗುವ ವರೆಗೂ ಇಂತಹ ಸೈಬರ್ ಹಲ್ಲೆಗಳು ನಡೆಯುತ್ತಿರುವುದು ಭಾರತವೂ ಸೇರಿದಂತೆ ಇತರ ಎಲ್ಲ ದೇಶಗಳ ಎದುರು ದೊಡ್ಡ ಸವಾಲಾಗಿದೆ. ಸೈಬರ್ ಹಲ್ಲೆಗಳ ಮೂಲಕ ಲಸಿಕೆಯ ಉತ್ಪಾದನೆಯನ್ನು ನಿಲ್ಲಿಸಲು ರಾಷ್ಟ್ರವ್ಯಾಪಿ ನಡೆಯುತ್ತಿರುವ ಷಡ್ಯಂತ್ರವನ್ನು ನಿಷ್ಕ್ರಿಯಗೊಳಿಸಬೇಕು. ಆಸ್ಟ್ರಾಝೆನೆಕಾ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಕೂಡ ಕೊರೋನಾ ಲಸಿಕೆಯ ಪರೀಕ್ಷಣೆ ನಡೆಸುತ್ತಿವೆ. ಲಸಿಕೆಯ ಮೂರನೇಯ ಹಂತದಲ್ಲಿ ಪರೀಕ್ಷೆಯ ಸಮಯದಲ್ಲಿ ಬ್ರಾಝಿಲ್‌ನ ಸ್ವಯಂಸೇವಕನು ಮರಣ ಹೊಂದಿದನು. ಹೀಗಿದ್ದರೂ ‘ಲಸಿಕೆಯ ಪರೀಕ್ಷಣೆ ಕಾರ್ಯ ಮುನ್ನಡೆಯುವುದು, ಎಂದು ಬ್ರಾಝಿಲ್‌ನ ಆರೋಗ್ಯ ಪ್ರಾಧಿಕಾರವು ಹೇಳಿದೆ. ಲಸಿಕೆಯ ಪರೀಕ್ಷಣೆಯ ಸಮಯದಲ್ಲಿ ಮರಣವಾಗುವ ಘಟನೆ ತುಂಬಾ ಚಿಂತಾಜನಕವಾಗಿದೆ; ಏಕೆಂದರೆ ಈ ಲಸಿಕೆಯ ಮೇಲೆ ಅನೇಕರ ಜೀವವು ಅವಲಂಬಿಸಿಕೊಂಡಿದೆ. ಸಪ್ಟೆಂಬರ್ ೨೦೨೦ ರಲ್ಲಿ ಬ್ರಿಟನ್‌ನಲ್ಲಿ ಕೊರೋನಾದ ಮೇಲಿನ ಲಸಿಕೆಯ ಮೇಲೆ ಪರೀಕ್ಷೆಯ ಸಮಯದಲ್ಲಿ ಸ್ವಯಂಸೇವಕರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಕೊರೋನಾ ಪ್ರತಿಬಂಧಕ ಲಸಿಕೆಯೆಂದರೆ ಇಂದಿನ ವರೆಗಿನ ಜಗತ್ತಿನ ಇತಿಹಾಸದಲ್ಲಿ ಮಹಾಲಸಿಕೀಕರಣ ಅಭಿಯಾನವೇ ಆಗಲಿದೆ. ಆದ್ದರಿಂದ ಪ್ರತಿಯೊಂದು ದೇಶದಲ್ಲಾಗುವ ಘಟನೆಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು !
ಭಾರತದ ಪಾತ್ರ
ಮೈಕ್ರೋಸಾಫ್ಟ್‌ನ ಸಂಸ್ಥಾಪಕರಾದ ಬಿಲ್ ಗೇಟ್ಸ್‌ರವರು ‘ಕೊರೋನಾವನ್ನು ಎದುರಿಸಲು ನಡೆಸಲಾಗುತ್ತಿರುವ ಸಂಶೋಧನೆ ಹಾಗೂ ಲಸಿಕೆಯಲ್ಲಿ ಭಾರತದ ಪಾಲು ಹೆಚ್ಚು ಮಹತ್ವದ್ದಾಗಿದೆ’ ಎಂದು ನುಡಿದಿದ್ದಾರೆ. ಕೊರೋನಾ ಪ್ರತಿಬಂಧಕ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ದೇಶಗಳಿಗೆ ಹೋಲಿಸಿದರೆ ಭಾರತದ ಪಾತ್ರ ಮಹತ್ವದ್ದಾಗಿದೆ’, ಎಂದಿದ್ದಾರೆ. ಇದರಿಂದ ಬಿಲ್ ಗೇಟ್ಸ್ ಇವರಿಗೂ ಭಾರತದಿಂದ ಅಪಾರ ನಿರೀಕ್ಷೆಯಿದೆ, ಎಂದು ಕಂಡು ಬರುತ್ತದೆ. ಪುಣೆಯ ಸೀರಮ್ ಇನ್ಸ್‌ಟಿಟ್ಯೂಟ್ನಲ್ಲಿ ಕೊರೋನಾ ನಿರೋಧಕ ಲಸಿಕೆಯ ಉತ್ಪಾದನೆಯ ಕೆಲಸ ನಡೆಯುತ್ತಿದೆ. ಇದರಿಂದ ಇಂದು ಇಡೀ ಜಗತ್ತಿನ ಗಮನವು ಭಾರತದ ಮೇಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು ಜಾಗರೂಕವಾಗಿ, ತತ್ಪರತೆಯಿಂದ, ಗಂಭೀರವಾಗಿ ಹಾಗೂ ಸುರಕ್ಷೆಯ ದೃಷ್ಟಿಯಿಂದ ಹೆಜ್ಜೆಯನ್ನಿಡಬೇಕಾಗಿದೆ. ‘ಜಗತ್ತಿನಾದ್ಯಂತದ ಪ್ರತಿಯೊಂದು ಸಂಕಟವೂ ನಮಗೆ ಅವಕಾಶವಾಗಿದೆ, ಎಂಬ ದೃಷ್ಟಿಯಿಂದ ನೋಡಿದರೆ ಭಾರತದ ಪಾತ್ರವು ಇತರ ದೇಶಗಳಿಗೆ ನಿಜವಾಗಿಯೂ ವಿಶ್ವಾಸಾರ್ಹವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.
ಲಸಿಕೆಯ ರಾಜಕಾರಣ ಬೇಡ !
ಕೆಲವು ದೇಶಗಳು ಕೊರೋನಾ ಪ್ರತಿಬಂಧಕ ಲಸಿಕೆಯನ್ನು ತನ್ನ ನಾಗರಿಕರಿಗೆ ಉಚಿತವಾಗಿ ನೀಡುವುದಾಗಿ ಹೇಳಿವೆ. ಅದರಲ್ಲಿ ಯುರೋಪಿಯನ್ ದೇಶಗಳಲ್ಲಿ ನಾರ್ವೆ ದೇಶವು ಒಳಗೊಂಡಿದೆ. ಬಿಹಾರದಲ್ಲಿ ಈಗ ನಡೆಯಲಿರುವ ಚುನಾವಣೆಯ ಹೋರಾಟದಲ್ಲಿ ಭಾಜಪ ಸರಕಾರವು ತನ್ನ ಘೋಷಣಾಪತ್ರದಲ್ಲಿ ‘ಎಲ್ಲ ಜನರಿಗೂ ಕೊರೋನಾ ಪ್ರತಿಬಂಧಕ ಲಸಿಕೆಯನ್ನು ಉಚಿತವಾಗಿ ನೀಡಲಿವೆವು, ಎಂಬ ಆಶ್ವಾಸನೆಯನ್ನು ನೀಡಿದೆ. ಭಾರತದಲ್ಲಿ ಯಾವುದಾದರೂ ಹೇಳಿಕೆ ನೀಡಿದಾಗ ಅದು ರಾಜಕಾರಣವಾಗದೇ ಇರಲಾರದು. ಅದರಂತೆ ಘೋಷಣಾಪತ್ರದಲ್ಲಿ ಭಾಜಪದ ಈ ಭೂಮಿಕೆಯಿಂದ ಬಿಹಾರದಲ್ಲಿ ರಾಜಕಾರಣ ನಡೆಯುತ್ತಿದೆ. ಮತಗಳಿಗಾಗಿ ಈ ರೀತಿ ಮಾಡಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಇತರ ಪಕ್ಷಗಳ ಮುಖಂಡರು ಭಾಜಪದ ಈ ಅಂಶದ ಮೇಲೆ ಟೀಕಿಸಿದ್ದಾರೆ. ಈಗಂತೂ ‘ಬಿಹಾರದಂತೆ ಭಾರತದ ಇತರ ರಾಜ್ಯಗಳಲ್ಲಿಯೂ ಈ ಲಸಿಕೆ ಉಚಿತವಾಗಿ ಸಿಗುವುದೇ ? ಎಂಬುದರ ಮೇಲೆ ವಿಚಾರ ವಿನಿಮಯ ನಡೆಯುತ್ತಿದೆ. ಭಾರತದ ಕೇಂದ್ರೀಯ ಆರೋಗ್ಯಸಚಿವರಾದ ಡಾ. ಹರ್ಷವರ್ಧನರವರು ‘ಜುಲೈ ೨೦೨೧ ರವರೆಗೆ ದೇಶದ ೨೫ ಕೋಟಿ ಜನರಿಗೆ ಲಸಿಕೆ ನೀಡಬಹುದು, ಎಂದು ನುಡಿದಿದ್ದಾರೆ; ಆದರೆ ಬೇರೆ ದೇಶಗಳಂತೆ ಭಾರತದಲ್ಲಿಯೂ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದೇ, ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ. ‘ಪ್ರತಿಯೊಬ್ಬ ಭಾರತೀಯನವರೆಗೂ ಕೊರೋನಾದ ಲಸಿಕೆ ತಲುಪಿಸುವುದರ ಖರ್ಚು ೮೦ ಸಾವಿರ ಕೋಟಿಯಷ್ಟಾಗಬಹುದು’, ಎಂದು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ‘ಸಿಈಓ ಶ್ರೀ. ಅದರ ಪೂನಾವಾಲಾರವರು ನುಡಿದಿದ್ದಾರೆ.
ಒಂದು ವೇಳೆ ಪೂನಾವಾಲಾರವರು ನೀಡಿದ ಸಂಖ್ಯೆಯನ್ನು ಪರಿಗಣಿಸಿದರೂ ಇಷ್ಟು ದೊಡ್ಡ ಖರ್ಚು ಭಾರತದ ಕೈಗೆಟುಕುವುದೇ ? ಎಂಬುದನ್ನು ಸರಕಾರವು ಸರಿಯಾಗಿ ಆಲೋಚಿಸಬೇಕು. ಅದೇ ರೀತಿ ಈ ಲಸಿಕೆಯನ್ನು ಉಚಿತವಾಗಿ ನೀಡುವುದು ಅಥವಾ ನೀಡದಿರುವುದರ ಬಗ್ಗೆ ಆಳವಾಗಿ ಅಭ್ಯಾಸ ಮಾಡಿ ಖರ್ಚಿನ ವ್ಯವಸ್ಥೆಯನ್ನು ಮಾಡಿ ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳಲಿ. ಇಲ್ಲದಿದ್ದರೆ ಲಸಿಕೆ ಲಭ್ಯವಾದರೂ ಖರ್ಚಿನ ಅಂಶದ ಮೇಲೆ ವಿವಾದದ ಮೇಲೆ ವಿವಾದವಾಗುವುದು, ಹೀಗಾಗುವುದು ಬೇಡ ! ಲಸಿಕೆಯ ಪರೀಕ್ಷೆಯು ಯಶಸ್ವಿಯಾಗಲು ಎದುರು ನೋಡುತ್ತಿರುವಾಗ ಲಸಿಕೆ ನೀಡಲು ಇತರ ಅಗತ್ಯ ಸಾಮಾಗ್ರಿಗಳ ಪೂರೈಕೆ ಮೊದಲೇ ಮಾಡಿಟ್ಟುಕೊಳ್ಳಿ. ಕೊರೋನಾ ಪ್ರತಿಬಂಧಕ ಲಸಿಕೆಯನ್ನು ಶೀಘ್ರಾತಿಶೀಘ್ರವಾಗಿ ಸಂಬಂಧಪಟ್ಟವರಿಗೆ ತಲುಪಿಸುವುದು ದೇಶದ ಮುಂದೆ ಪರ್ಯಾಯವಾಗಿ ಜಗತ್ತಿನ ಮುಂದೆ ಒಂದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು ಭಾರತವು ಈಗ ಎಲ್ಲ ಹಂತಗಳಲ್ಲಿಯೂ ಸಿದ್ಧವಾಗಬೇಕು !