ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಮಸೀದಿಗಳು ಮತ್ತು ಮದರಸಾಗಳಿಗೆ ಸಿಗುವ ಸರಕಾರಿ ಅನುದಾನ ರದ್ದುಪಡಿಸಲಾಗುವುದು
ಮಧ್ಯಪ್ರದೇಶ ಸರಕಾರವು ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೊಳಿಸುತ್ತಿದೆ. ಈ ಮಸೂದೆಯನ್ನು ‘ಧರ್ಮ ಸ್ವಾತಂತ್ರ್ಯ’ ಎಂದು ಕರೆಯಲಾಗುವುದು. ಧಾರ್ಮಿಕ ಸಂಘಟನೆಗಳು ಲವ್ ಜಿಹಾದ್ ಮತ್ತು ಮತಾಂತರಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಹಾಗೂ ಇಂತಹ ಸಂಘಟನೆಗಳಿಗೆ ಸರಕಾರದಿಂದ ಸೌಲಭ್ಯಗಳು ಸಿಗುತ್ತಿದ್ದರೆ, ಅವುಗಳನ್ನು ಅನುದಾನದ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.