ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರ ಜಯಂತಿ ನಿಮಿತ್ತ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶೌರ್ಯ ಜಾಗೃತಿ ವ್ಯಾಖ್ಯಾನ ರಾಣಿ ಲಕ್ಷ್ಮೀಬಾಯಿಯವರ ಆದರ್ಶವನ್ನಿಟ್ಟು ತಮ್ಮಲ್ಲಿ ಶೌರ್ಯ ಜಾಗೃತಗೊಳಿಸಿ ! – ಕು. ಸರಿತಾ ಮುಗಳಿ

ಕು. ಸರಿತಾ ಮುಗಳಿ

ಬೆಂಗಳೂರು – ಇಂದಿನ ಯುವ ಪೀಳಿಗೆಯು ಸ್ವೇಚ್ಛಾಚಾರದ ಹೆಸರಿನಲ್ಲಿ ತಮ್ಮನ್ನು ತಾವು ಗುಲಾಮಗಿರಿಯಲ್ಲಿ ಸಿಲುಕಿಸುತ್ತಿದ್ದಾರೆ. ಇಂದಿನ ಜಾತ್ಯತೀತ ಶಿಕ್ಷಣ ಪದ್ಧತಿ ಮತ್ತು ಪಾಶ್ಚಾತ್ಯ ಅಂಧಾನುಕರಣೆಗಳಿಂದ ಅನೇಕ ಯುವತಿಯರು ‘ಲವ್ ಜಿಹಾದ್’ ನಂತಹ ಸಂಚಿನಲ್ಲಿ ಸಿಲುಕಿ ದೇಶದ್ರೋಹದ ಕೃತ್ಯವನ್ನು ಮಾಡುತ್ತಿದ್ದಾರೆ. ಇದನ್ನು ತಡೆಯಲು ಪ್ರತಿಯೊಬ್ಬ ಹಿಂದೂವು ನಮ್ಮ ರಾಷ್ಟ್ರಪುರುಷರ ಬಗ್ಗೆ ಮತ್ತು ಭಾರತದ ಶ್ರೇಷ್ಠ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಆವಶ್ಯಕವಾಗಿದೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ರಣಾಂಗಣದಲ್ಲಿ ಇಳಿದು ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಆದರ್ಶವನ್ನು ಕಣ್ಣೆದುರು ಇಟ್ಟುಕೊಂಡು ಮಹಿಳೆಯರು ತಮ್ಮಲ್ಲಿರುವ ಶೌರ್ಯವನ್ನು ಜಾಗೃತಗೊಳಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಕು. ಸರಿತಾ ಮುಗಳಿಯವರು ಮಾರ್ಗದರ್ಶನ ಮಾಡಿದರು. ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಣಿ ಲಕ್ಷ್ಮೀಬಾಯಿ ಜಯಂತಿ ನಿಮಿತ್ತ ಧರ್ಮಪ್ರೇಮಿಗಳಿಗಾಗಿ ಇತ್ತೀಚೆಗೆ ‘ಆನ್‌ಲೈನ್’ ಶೌರ್ಯಜಾಗೃತಿ ವ್ಯಾಖ್ಯಾನದ ಆಯೋಜನೆ ಮಾಡಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀ. ಅನಿಲ್ ಸೋಲಂಕರ್ ಇವರು  ಕಾರ್ಯಕ್ರಮದ ಕೊನೆಯಲ್ಲಿ ಸ್ವರಕ್ಷಣಾ ಪ್ರಶಿಕ್ಷಣದ ಮಾಹಿತಿಯನ್ನು ತಿಳಿಸಿದರು. ಅನೇಕ ಧರ್ಮಪ್ರೇಮಿಗಳು ಈ ಕಾರ್ಯಕ್ರಮದ ಲಾಭ ಪಡೆದರು.

ಉಪಸ್ಥಿತ ಧರ್ಮಪ್ರೇಮಿಗಳ ಅಭಿಪ್ರಾಯ

೧. ನಾನು  ಪರಿಚಯದ ಪ್ರತಿಯೊಬ್ಬ ಹಿಂದೂಗಳನ್ನು ಒಟ್ಟು  ಮಾಡಿ ಅವರಿಗೆ ಸ್ವರಕ್ಷಣಾ ತರಬೇತಿಯ ಬಗ್ಗೆ ಹೇಳಿ ಕಲಿಸಲು ಪ್ರಯತ್ನಿಸುತ್ತೇನೆ.

೨. ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರ ಜೀವನದ ಪ್ರತಿಯೊಂದು ಪ್ರಸಂಗವನ್ನು ಕೇಳುವಾಗ ನನ್ನಲ್ಲಿ ಶೌರ್ಯ ಜಾಗೃತಿ ಆಗುತ್ತಿತ್ತು, ನಾವು ಸಹ ನಮ್ಮ ರಾಷ್ಟ್ರಪುರುಷರ ಆದರ್ಶವನ್ನು ಇಟ್ಟುಕೊಳ್ಳಬೇಕು ಮತ್ತು ಅದಕ್ಕನುಸಾರ ತಮ್ಮ ಮಕ್ಕಳಿಗೂ ಯೋಗ್ಯ ಸಂಸ್ಕಾರವನ್ನು ನೀಡಬೇಕು.

೩. ವ್ಯಾಖ್ಯಾನದ ವಿಷಯ ಕೇಳುವಾಗ ಶೌರ್ಯಜಾಗೃತಿ ಆಯಿತು. ನಾವೂ ಸ್ವರಕ್ಷಣಾ ತರಬೇತಿಯನ್ನು ಪರಿಪೂರ್ಣವಾಗಿ ಕಲಿಯಬೇಕು.