ಹಿಂದೆ ಭಾರತೀಯ ಮಹಿಳೆಯನ್ನು ಪರಿಶುದ್ಧತೆ, ಸಭ್ಯತೆ ಮತ್ತು ನೈತಿಕತೆಯ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು; ಆದರೆ ಭಾರತೀಯ ಮಹಿಳೆಯರ ಅಧಃಪತನವನ್ನು ನೋಡಿದರೆ, ಸಮಾಜದ ನೈತಿಕತೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ ! ಎಲ್ಲಾ ಪಕ್ಷದ ಆಡಳಿತಗಾರರು ಸಮಾಜಕ್ಕೆ ಸಾಧನೆಯನ್ನು ಕಲಿಸದಿರುವ ಪರಿಣಾಮವಾಗಿದೆ !
ರಾಯಪುರ (ಛತ್ತೀಸ್‌ಗಡ) – ಹೆಚ್ಚಿನ ಯುವತಿಯರು ಒಮ್ಮತದ ಸಂಬಂಧ ಇಟ್ಟುಕೊಳ್ಳುತ್ತಾರೆ ಹಾಗೂ ಪ್ರೀತಿಭಂಗವಾದಾಗ ಅತ್ಯಾಚಾರವಾಗಿದೆ ಎಂದು ಆರೋಪಿಸುತ್ತಾರೆ ಎಂದು ಛತ್ತೀಸ್‌ಗಡದ ಮಹಿಳಾ ಆಯೋಗದ ಅಧ್ಯಕ್ಷೆ ಕಿರಣಮಯಿ ನಾಯಕ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
Most Rape Complaints Filed After Break-Up, Says Women's Body Chief https://t.co/qI3cljtSQP pic.twitter.com/42izjJUGwE
— NDTV (@ndtv) December 12, 2020
ಕಿರಣಾಮಯಿ ನಾಯಕ್ ತಮ್ಮ ಮಾತನ್ನು ಮುಂದುವರೆಸುತ್ತಾ,
೧. ಹೆಚ್ಚಿನ ಘಟನೆಗಳಲ್ಲಿ ‘ಲಿವ್-ಇನ್’ ನಲ್ಲಿದ್ದು ಒಪ್ಪಿಗೆಯಿಂದ ಸಂಬಂಧ ಇಟ್ಟುಕೊಂಡ ನಂತರವೂ ಹುಡುಗಿಯರು ಅತ್ಯಾಚಾರ ಆಗಿದೆ ಎಂದು ದೂರು ನೀಡುತ್ತಾರೆ. ಮಹಿಳೆಯರು ಮತ್ತು ಹುಡುಗಿಯರು ಮೊದಲು ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಮಹಿಳೆಯರಿಗೆ ಹಾಗೂ ಹುಡುಗಿಯರಲ್ಲಿ ಮನವಿ ಮಾಡುತ್ತೇನೆ. ನೀವು ಈ ರೀತಿಯ ಸಂಬಂಧದಲ್ಲಿದ್ದರೆ, ಅದು ಕೆಟ್ಟ ಪರಿಣಾಮವನ್ನು ಬೀರುತ್ತದೆ.
೨. ವಿವಾಹಿತ ವ್ಯಕ್ತಿಯು ಯುವತಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದರೆ, ಆ ವ್ಯಕ್ತಿಯು ತನಗೆ ಜೀವಿಸಲು ಸಹಾಯ ಮಾಡುತ್ತಾನೋ ಇಲ್ಲವೋ ಎಂದು ಯುವತಿ ನೋಡಬೇಕು. ಆದರೆ ಯಾವಾಗ ಇಂತಹ ಸಂಬಂಧವು (ಹೆಚ್ಚಿನ ಸಂದರ್ಭಗಳಲ್ಲಿ ಹೀಗೆಯೇ ಆಗುತ್ತದೆ) ಮುರಿದುಬಿಳುತ್ತದೆಯೋ, ಆಗ ಯುವತಿಯರು ಪೊಲೀಸ್ ಠಾಣೆಗೆ ಹೋಗುತ್ತಾರೆ.
೩. ಹದಿಹರೆಯದ ಹುಡುಗಿಯರಿಗೆ ನನ್ನ ಸಲಹೆ, ಯಾವುದೇ ಪ್ರೀತಿಯ ಬಲೆಗೆ ಬೀಳಬೇಡಿ. ಇದು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನಿಮ್ಮ ಇಡೀ ಜೀವನವನ್ನು ಧ್ವಂಸಗೊಳಿಸಬಹುದು. ಇತ್ತೀಚೆಗೆ ೧೮ ವಯಸ್ಸಿಗೆ ಮದುವೆಯಾಗುವ ಪ್ರಮಾಣ ಏರಿದೆ. ಮುಂದಿನ ಕೆಲವು ವರ್ಷಗಳಲ್ಲಿ ಅವರು ಮಕ್ಕಳನ್ನು ಹೆತ್ತಾಗ, ದಂಪತಿಗಳು ಒಟ್ಟಿಗೆ ಇರುವುದು ಕಷ್ಟಕರವಾಗುತ್ತದೆ.
೪. ಆಯೋಗವು ಹೆಚ್ಚು ಹೆಚ್ಚು ಕೌಟುಂಬಿಕ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ನಾವು ಪುರುಷರು ಮತ್ತು ಮಹಿಳೆಯರಿಗೆ ಅವರ ತಪ್ಪುಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತೇವೆ. ಅವರು ಒಂದು ಮಾರ್ಗವನ್ನು ಕಂಡುಕೊಳ್ಳಲಿ, ಅದಕ್ಕಾಗಿ ಪ್ರಯತ್ನಿಸುತ್ತೇವೆ. ಸಲಹೆ ನೀಡುವುದೊಂದೇ ದಾರಿಯಾಗಿದೆ.