ಇತರ ಧರ್ಮದವರು ದೇವಸ್ಥಾನದಲ್ಲಿ ಪ್ರವೇಶಿಸಿದರೆ ಆಕಾಶ ಬೀಳುತ್ತದೆಯೇ ? – ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಶ್ನೆ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥಾನ ಹಾಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಕಛೇರಿಗಳಲ್ಲಿ ಕಲಂ ೭ ರ ಅಡಿಯಲ್ಲಿ ಹಿಂದೂಯೇತರರಿಗೆ ಕೆಲಸ ನೀಡಲು ಅನುಮತಿಯನ್ನು ನೀಡಬಾರದು, ಎಂದು ಆಗ್ರಹಿಸುವ ೨ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ‘ಒಂದು ವೇಳೆ ಇತರ ಧರ್ಮದವರು ದೇವಸ್ಥಾನದೊಳಗೆ ಪ್ರವೇಶಿಸಿದರೆ, ಆಕಾಶ ಬೀಳುವುದೇ ?’, ಎಂದು ನ್ಯಾಯಾಲಯವು ಪ್ರಶ್ನಿಸಿದೆ.