ಮಲೇಷ್ಯಾದ ರೋಹಿಂಗ್ಯಾಗಳ ಭಯೋತ್ಪಾದಕ ಸಂಘಟನೆಯು ಭಾರತದ ಮೇಲೆ ದಾಳಿ ನಡೆಸುವ ಸಿದ್ಧತೆಯಲ್ಲಿ !

  • ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ನೆರವು ಪಡೆಯುವ ಸಾಧ್ಯತೆ

  • ಅಯೋಧ್ಯೆ, ಬೋಧಗಯಾ, ಪಂಜಾಬ್ ಮತ್ತು ಶ್ರೀನಗರ ನಗರಗಳಿಗೆ ಅಪಾಯ

  • ಭಾರತವು ಬಹುಸಂಖ್ಯಾತ ಹಿಂದೂಗಳ ದೇಶವಾಗಿದ್ದರಿಂದ ಜಿಹಾದಿ ಸಂಘಟನೆಗಳು ಈ ದೇಶವನ್ನು ಗುರಿಪಡಿಸುತ್ತಿವೆ. ಈ ಪರಿಸ್ಥಿತಿಯನ್ನು ಶಾಶ್ವತವಾಗಿ ಬದಲಾಯಿಸಲು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪರ್ಯಾಯ ಮಾರ್ಗಗಳಿಲ್ಲ !
  • ಪ್ರತಿದಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಹೊಸ ರಾಷ್ಟ್ರ ವಿರೋಧಿ ಚಟುವಟಿಕೆಗಳು ಬಹಿರಂಗವಾಗುತ್ತಿರುವಾಗ, ‘ಸರ್ಕಾರ ಇದನ್ನು ಏಕೆ ನಿಷೇಧಿಸುತ್ತಿಲ್ಲ ?’ ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಹುಟ್ಟುತ್ತದೆ !

ನವ ದೆಹಲಿ – ರೋಹಿಂಗ್ಯಾ ಮುಸ್ಲಿಮರೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಂಘಟನೆ ಭಾರತದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳಿಗೆ ತಿಳಿದುಬಂದಿದೆ. ಮಹಿಳೆಯ ನೇತೃತ್ವದಲ್ಲಿ, ಭಯೋತ್ಪಾದಕ ಸಂಘಟನೆಯು ಮುಂದಿನ ಕೆಲವು ವಾರಗಳಲ್ಲಿ ಭಾರತೀಯ ನಗರಗಳಲ್ಲಿ ದಾಳಿ ನಡೆಸಬಹುದು. ಈ ಸಂಘಟನೆಯ ಭಯೋತ್ಪಾದಕರಿಗೆ ಮ್ಯಾನ್ಮಾರ್‌ನಲ್ಲಿ ತರಬೇತಿ ನೀಡಲಾಗಿದೆ. ಡಿಸೆಂಬರ್ ಮಧ್ಯದಲ್ಲಿ ಅಥವಾ ಡಿಸೆಂಬರ್ ಅಂತ್ಯದಲ್ಲಿ ಉಗ್ರರ ಸಮೂಹ ಬಾಂಗ್ಲಾದೇಶದ ಮೂಲಕ ಭಾರತವನ್ನು ಪ್ರವೇಶಿಸಬಹುದು, ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಸಂಘಟನೆ ಮಲೇಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ನಂಟಿರುವ ಕೆಲವು ಜಿಹಾದಿಗಳು ಭಯೋತ್ಪಾದಕರ ಸಮೂಹಕ್ಕೆ ಸಹಾಯ ಮಾಡುತ್ತಿರಬಹುದು, ಎಂದು ಗುಪ್ತಚರ ಸಂಸ್ಥೆಗಳಿಗೆ ಅನುಮಾನವಿದೆ. ದೆಹಲಿ, ಹರಿಯಾಣಾ, ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಲ ಈ ರಾಜ್ಯಗಳ ಪೊಲೀಸರಿಗೆ ಹಾಗೂ ಗುಪ್ತಚರ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಯೋಧ್ಯೆ, ಬೋಧಗಯಾ, ಪಂಜಾಬ್ ಮತ್ತು ಶ್ರೀನಗರ ನಗರಗಳಲ್ಲಿ ದಾಳಿಯ ಅಪಾಯ ಹೆಚ್ಚು ಎಂದು ಅವರು ಹೇಳಿದರು.

೧. ಗುಪ್ತಚರ ಮೂಲಗಳ ಪ್ರಕಾರ, ಈ ದಾಳಿಗೆ ೨ ಲಕ್ಷ ಡಾಲರ್ (ಸುಮಾರು ೧ ಕೋಟಿ ೪೭ ಲಕ್ಷ ೪೭ ಸಾವಿರ ರೂಪಾಯಿ) ವಿನಿಮಯವಾಗಿದೆ. ಈ ವ್ಯವಹಾರವು ಭಾರತಕ್ಕೆ ಸಂಬಂಧಿಸಿದೆ. ಅಲ್ಲದೆ, ಇದರ ಎಳೆಯನ್ನು ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಹಾಗೂ ಮಲೇಷ್ಯಾದಲ್ಲಿ ಅಡಗಿರುವ ಡಾ. ಜಾಕಿರ್ ನಾಯಕ್ ಮತ್ತು ದೇಶದ ರಾಜಧಾನಿ ಕೌಲಾಲಂಪುರದಲ್ಲಿರುವ ರೋಹಿಂಗ್ಯಾ ನಾಯಕ ಮೊಹಮ್ಮದ್ ನಾಸಿರ್‌ನೊಂದಿಗಿದೆ.

೨. ಈ ಆಕ್ರಮಣದ ಯೋಜನೆಯಲ್ಲಿ ಮಹಿಳೆ ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಈ ಮಹಿಳೆಯನ್ನು ಇದೇ ವರ್ಷ ಮಲೇಷ್ಯಾದಿಂದ ಮ್ಯಾನ್ಮಾರ್‌ಗೆ ತರಬೇತಿಗಾಗಿ ಕಳುಹಿಸಲಾಗಿತ್ತು.