ಗುವಾಹಟಿ (ಅಸ್ಸಾಂ) ನಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಮತಾಂಧರಿಂದ ಹಿಂದೂ ಯುವಕನ ಕತ್ತು ಸೀಳಿ ಹತ್ಯೆ

  • ಇಂತಹ ಘಟನೆಗಳ ಬಗ್ಗೆ ಪ್ರಶಸ್ತಿ ಹಿಂತಿರುಗಿಸುವ ತಂಡವು ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

  • ಒಂದುವೇಳೆ ಬಹುಸಂಖ್ಯಾತರಿಂದ ಓರ್ವ ಮತಾಂಧನ ಹತ್ಯೆಯಾಗುತ್ತಿದ್ದರೆ ಕೂಡಲೇ ಅವರನ್ನು ತಾಲಿಬಾನಿಗಳೆಂದು ಪಟ್ಟಕಟ್ಟುತ್ತಿದ್ದರು !

ಗುವಾಹಟಿ (ಅಸ್ಸಾಂ) – ಗುವಾಹಟಿ (ಅಸ್ಸಾಂ) ಯಲ್ಲಿ ಹಿಂದೂ ಯುವಕ ರಿತುಪರ್ಣ ಪೆಗು ಎಂಬವರ ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ದುಲಾಲ್ ಅಲಿ, ಇಬ್ರಾಹಿಂ ಅಲಿ, ಇಬ್ರಾಹಿಂ ಇವನ ತಾಯಿ ಮನೋವರ್ ಖಾತುನ್, ಹುಸೇನ್ ಅಲಿ ಮತ್ತು ಅರಮಾನ್ ಅಲಿ ಈ ಮತಾಂಧರನ್ನು ಬಂಧಿಸಿದ್ದಾರೆ. ಒಂದು ಖುರ್ಚಿಯ ಮೇಲಿನ ವಾಗ್ವಾದದಿಂದಾಗಿ ಈ ಕೊಲೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿಯ ‘ಅರಮಾನ್ ಹೋಮ್ ಫರ್ನಿಶಿಂಗ್’ ಎಂಬ ಹೆಸರಿನ ಅಂಗಡಿಯಲ್ಲಿ ರಿತುಪರ್ಣಾ ಹಾಗೂ ಹುಸೇನ್ ಅಲಿ ಇಬ್ಬರು ಮಾತನಾಡುತ್ತಿದ್ದರು. ಆಗ ಅವರ ನಡುವೆ ಒಂದು ಖುರ್ಚಿಯ ಬಗ್ಗೆ ವಾಗ್ವಾದ ನಡೆಯಿತು. ಈ ಸಮಯದಲ್ಲಿ ರಿತುಪರ್ಣಾನು ಹುಸೇನ್‌ನ ಕೆನ್ನೆಗೆ ಬಾರಿಸಿದ. ನಂತರ ಹುಸೇನ್ ತನ್ನ ಕುಟುಂಬದವರನ್ನು ಕರೆಸಿದ ಹಾಗೂ ಅವರು ರಿತುಪರ್ಣಾನನ್ನು ಹೊಡೆಯುತ್ತಾ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದರು, ಅದೇ ರೀತಿ ಆತನ ಕತ್ತನ್ನು ಸೀಳಿದರು. ಇದರಲ್ಲಿ ರಿತುಪರ್ಣಾನು ಮೃತಪಟ್ಟನು.