ಲಷ್ಕರ್-ಎ-ತೋಯಬಾ ಮತ್ತು ಹಿಜಬುಲ್ ಮುಜಾಹಿದ್ದೀನ್ ಸ್ವಾತಂತ್ರ್ಯ ದಿನದಂದು ಆತ್ಮಾಹುತಿ ದಾಳಿಗೆ ನಡೆಸಿದ್ದರು ಸಿದ್ಧತೆ

ಬಂಧಿತ ಭಯೋತ್ಪಾದಕರು ನೀಡಿದ ಮಾಹಿತಿ

  • ಕಳೆದ ೩ ದಶಕಗಳಿಂದ ದೇಶದ ಸ್ವಾತಂತ್ರ್ಯದಿನ ಹಾಗೂ ಪ್ರಜಾಪ್ರಭುತ್ವದಿನವನ್ನು ಭಯೋತ್ಪಾದನೆಯ ಕರಿನೆರಳಿನಲ್ಲಿ ಆಚರಿಸುತ್ತಿರುವ ವಿಶ್ವದ ಏಕೈಕ ದೇಶ ಭಾರತ !

  • ಭಾರತವು ಇದನ್ನು ಇನ್ನೆಷ್ಟು ವರ್ಷ ಸಹಿಸಬೇಕಾಗಿದೆ ?

ಅಮೃತಸರ (ಪಂಜಾಬ): ಪಠಾಣಕೋಟನಿಂದ ಬಂಧಿಸಲ್ಪಟ್ಟ ಲಷ್ಕರ್-ಎ-ತೋಯಬಾದ ಅಮೀರ್ ಹುಸೇನ್ ವಾನಿ ಮತ್ತು ವಾಸಿಮ ಹಸನ್ ವಾನಿಯ ವಿಚಾರಣೆ ನಡೆಸುತ್ತಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಕಾರ ಲಷ್ಕರ್-ಎ-ತೋಯಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಆಗಸ್ಟ್ ೧೫ ರಂದು ಆತ್ಮಾಹುತಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿಯೇ ಅವರು ಪಂಜಾಬ್ ಮೂಲಕ ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದರು; ಕಾಶ್ಮೀರ ಗಡಿಯಲ್ಲಿ ಬಿಗಿ ಭದ್ರತೆ ಇರುವುದರಿಂದ ಅಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಕಷ್ಟವಾಗುತ್ತಿದೆ. ಎಂದು ಹೇಳಿದರು.