ಪೂಂಚ್ (ಜಮ್ಮು-ಕಾಶ್ಮೀರ) ದಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಒಬ್ಬ ಸೈನಿಕ ಹುತಾತ್ಮ

ಸರಕಾರ ಇನ್ನಾದರೂ ಭಾರತೀಯ ಸೈನಿಕರ ಬಲಿ ಪಡೆಯುತ್ತಿರುವ ಪಾಕ್‌ಗೆ ವಿಶ್ವದ ಭೂಪಟದಿಂದ ಅಳಿಸಿಹಾಕಬೇಕು !

ಪೂಂಚ್ : ಪೂಂಚ್‌ನ ಕಿರ್ಣಿ ಸೆಕ್ಟರ್‌ನ ಶಾಹಪುರ್ ಬಳಿ ಪಾಕ್ ಸೈನಿಕರು ಕದನವಿರಾಮ ಉಲ್ಲಂಘಿಸುತ್ತ ಮಾಡಿದ ಗುಂಡಿನ ದಾಳಿಯಲ್ಲಿ ಓರ್ವ ಸೈನಿಕ ಹುತಾತ್ಮರಾದರೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ಮತ್ತು ಮೊರ್ಟಾರನ್ನು ಉಪಯೋಗಿಸುತ್ತ ಪಾಕಿಸ್ತಾನವು ಭಾರತೀಯ ಸೈನಿಕರ ಚೌಕಿಗಳನ್ನು ನಾಶ ಮಾಡಲು ಪ್ರಯತ್ನಿಸಿತು; ಆದರೆ ಭಾರತೀಯ ಪಡೆಗಳು ಪ್ರತ್ಯುತ್ತರ ನೀಡಿದರು, ಇದರಲ್ಲಿ ಪಾಕ್‌ನ ಚೌಕಿಯು ಹಾನಿಗೀಡಾಯಿತು. ಮೂರು ದಿನಗಳ ಹಿಂದೆ ಪಾಕಿಸ್ತಾನ ಮಾಡಿದ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಸೈನಿಕ ಹುತಾತ್ಮರಾಗಿದ್ದರು.