‘ಪ್ಲೇಸಸ್ ಆಫ್ ವರ್ಶಿಪ್’ ಗೆ ವಿರೋಧಿಸುವ ಹಿಂದೂಗಳ ಅರ್ಜಿ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ನಿಂದ ಅರ್ಜಿ ಸಲ್ಲಿಕೆ

ಕಾಶಿ ಮತ್ತು ಮಥುರಾ ದೇವಸ್ಥಾನಗಳ ವಿವಾದ

ನವ ದೆಹಲಿ: ಕಾಶಿ ಮತ್ತು ಮಥುರಾ ದೇವಸ್ಥಾನ ಪ್ರಕರಣದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್’ನ ೧೯೯೧ ರ ಕಾಯ್ದೆಯ ವಿರುದ್ಧ ‘ವಿಶ್ವ ಭದ್ರ ಪುರೋಹಿತ ಮಹಾಸಂಘ’ವು ಸಲ್ಲಿಸಿದ್ದ ಅರ್ಜಿಯ ವಿರುದ್ಧ ‘ಜಮಿಯತ್ ಉಲೆಮಾ-ಎ-ಹಿಂದ್’ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ‘ಜಮಿಯತ್’ ತನ್ನ ಅರ್ಜಿಯಲ್ಲಿ, ‘ನ್ಯಾಯಾಲಯವು ಮಹಾಸಂಘದ ಅರ್ಜಿಯಿಂದ ನೋಟಿಸ್ ನೀಡಬಾರದು. ಈ ಪ್ರಕರಣದಿಂದ ದೇಶದ ಜಾತ್ಯತೀತಕ್ಕೆ ಧಕ್ಕೆಯಾಗಬಹುದು’ ಎಂದು ಹೇಳಿದೆ.
ಪುರೋಹಿತ ಮಹಾಸಂಘದ ಅರ್ಜಿಯಲ್ಲಿ, ‘ನಾವು ‘ಪ್ಲೇಸಸ್ ಆಫ್ ವರ್ಶಿಪ್’ನಲ್ಲಿ ಸಂಪೂರ್ಣ ಕಾಯ್ದೆಯನ್ನು ಪ್ರಶ್ನಿಸದೇ, ಕೇವಲ ಅದರಲ್ಲಿಯ ೪ ನೇ ಕಲಂಯನ್ನು ಮಾತ್ರ ಪ್ರಶ್ನಿಸಿದ್ದೇವೆ. ಅದರಲ್ಲಿ, ಭಾರತೀಯ ಸಂಸತ್ತು ಹಿಂದೂಗಳಿಗೆ ನ್ಯಾಯಾಂಗದ ಮೂಲಕ ಅವರ ಧಾರ್ಮಿಕ ಸ್ಥಳವನ್ನು ಪುನಃ ಹಿಂಪಡೆದುಕೊಳ್ಳಲು ತಡೆಯಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ’, ಎನ್ನಲಾಗಿದೆ