ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಗೃಹಬಂಧನದಲ್ಲಿ !

ತೆಲಂಗಾಣದಲ್ಲಿ ಜನಪ್ರತಿನಿಧಿಗಳದ್ದೇ ಈ ರೀತಿ ಬಾಯಿ ಮುಚ್ಚಿಸುತ್ತಾರಾದರೆ, ಜನಸಾಮಾನ್ಯರ ಸ್ಥಿತಿ ಹೇಗಿರಬಹುದು, ಅದರ ಬಗ್ಗೆ ಯೋಚಿಸದಿರುವುದು ಉತ್ತಮ !

  • ತೆಲಂಗಾಣದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಮಂತ್ರಿಯ ಪ್ರಜಾಪ್ರಭುತ್ವ ವಿರೋಧಿ ಕ್ರಮ !

  • ರಾಜ್ಯದಲ್ಲಿ ಕರೋನಾ ಕೈಮೀರಿ ಹೋಗುತ್ತಿರುವ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿ ಭೇಟಿಗೆ ಕೋರಿದ್ದರು

  • ರಾಜಾಸಿಂಗ್ ಅವರಿಂದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ರಾಜೀನಾಮೆಗೆ ಆಗ್ರಹ

ತೆಲಂಗಾಣಾ – ರಾಜ್ಯದಲ್ಲಿ ಕೊರೋನಾ ಕೈ ಮೀರಿ ಹೋಗುತ್ತಿರುವ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿಯವರ ಭೇಟಿಯಾಗಲು ಕೋರಿದ್ದ ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಹಾಗೂ ಬಿಜೆಪಿ ಶಾಸಕ ಶ್ರೀ. ಟಿ. ರಾಜಾ ಸಿಂಗ್ ಅವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದರು.

ಈ ಬಗ್ಗೆ ಶ್ರೀ. ರಾಜಾ ಸಿಂಗ್ ಅವರು ಒಂದು ‘ವಿಡಿಯೋ’ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಮುಂದೆ ಅವರು ಹೇಳಿದರು,

೧. ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ತೆಲಂಗಾಣದ ಏಕೈಕ ಗಾಂಧಿ ಆಸ್ಪತ್ರೆಯ ಕಿರಿಯ ಆಧುನಿಕ ವೈದ್ಯರು (ಡಾಕ್ಟರ್) ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ‘ಮುಖ್ಯಮಂತ್ರಿ ಬಂದು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು’, ಎಂದು ಅವರು ಒತ್ತಾಯಿಸಿದ್ದರು. ಆದರೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ಮನೆಯಲ್ಲಿ ಕುಳಿತಿದ್ದಾರೆ. ಅವರು ತಮ್ಮ ಮಂತ್ರಿಗಳನ್ನೇ ಭೇಟಿಯಾಗುತ್ತಿಲ್ಲ, ಹೀಗಿರುವಾಗ ಅವರು ಈ ಡಾಕ್ಟರರನ್ನೇನು ಭೇಟಿ ಮಾಡುವರು ?

೨. ರಾಜ್ಯದಲ್ಲಿ ಕೊರೋನಾ ಕೈ ಮೀರಿ ಹೋಗುತ್ತಿರುವ ಪರಿಸ್ಥಿತಿಯ ಬಗ್ಗೆ ಗಮನ ಹರಿಸಲು ಇಂದು ಬಿಜೆಪಿ ಪರವಾಗಿ ನಾನು, ಬಿಜೆಪಿಯ ವಿಧಾನಪರಿಷತ್ತಿನ ಶಾಸಕ ರಾಮಚಂದ್ರ ರಾವ್ ಮತ್ತು ನಮ್ಮ ಮಾಜಿ ಅಧ್ಯಕ್ಷ ಲಕ್ಷ್ಮಣ್ ಇವರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅನುಮತಿ ಕೋರಿ ಪತ್ರವನ್ನು ಕಳುಹಿಸಿದ್ದೆವು. ಇದಾದ ಕೂಡಲೇ ೩೦ ರಿಂದ ೪೦ ಪೊಲೀಸರು ನನ್ನ ಮನೆಗೆ ಬಂದು ನನ್ನನ್ನು ಮನೆಯಲ್ಲಿಯೇ ಗೃಹಬಂಧನದಲ್ಲಿರಿಸಿದರು.

೩. ಗಾಂಧಿ ಆಸ್ಪತ್ರೆಯಲ್ಲಿ ಓರ್ವ ರೋಗಿಯ ಶವ ಕಾಣೆಯಾಗಿದೆ. ಅದನ್ನು ಮತ್ತೊಂದು ಕುಟುಂಬವು ತಮ್ಮ ಸಂಬಂಧಿಕರು ಎಂದು ತಿಳಿದು ಆ ಶವದ ಅಂತಿಮಕ್ರಿಯೆ ಮಾಡಿತು. ನರೇಂದ್ರ ಸಿಂಗ್ ಎಂಬ ಓರ್ವ ಕೊರೋನಾ ಪೀಡಿತ ವ್ಯಕ್ತಿಯನ್ನು ಮೇ ೩೦ ರಂದು ಆಸ್ಪತ್ರೆಗೆ ದಾಖಲಿಸಲಾಯಿತು; ಆದರೆ ಅವನ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಗಾಂಧಿ ಆಸ್ಪತ್ರೆಯಲ್ಲಿ ಇಂತಹ ವಿವೇಚನೆಯಿಲ್ಲದ ಚಟುವಟಿಕೆಗಳು ನಡೆಯುತ್ತಿದ್ದು ಈ ವ್ಯವಸ್ಥೆಯು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

೪. ಚಂದ್ರಶೇಖರ್ ರಾವ್ ಇವರು ಇತರ ರಾಜ್ಯದ ಮುಖ್ಯಮಂತ್ರಿಗಳಂತೆ ಹೋಟೆಲ್‌ಗಳು, ದೊಡ್ಡ ಆಟದ ಮೈದಾನಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಕೊರೋನಾ ಪೀಡಿತರಿಗೆ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಬೇಕಿತ್ತು; ಆದರೆ ಅವರು ಮಾಡಲಿಲ್ಲ; ಏಕೆಂದರೆ ಅವರಿಗೆ ನಾಗರಿಕರನ್ನು ಉಳಿಸಬೇಕು ಎಂದು ಅನಿಸುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು.

೫. ಮುಖ್ಯಮಂತ್ರಿಗಳು ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಹದಗೆಡುತ್ತಿರುವ ಪರಿಸ್ಥಿತಿಯನ್ನು ಪರಿಶೀಲಿಸಬೇಕು, ಎಂಬ ಆಗ್ರಹದ ‘ವಿಡಿಯೋ’ವೊಂದನ್ನು ನಿರ್ಮಿಸಿ ಅದು ಎಲ್ಲಾ ಕಡೆ ಪ್ರಸಾರ ಮಾಡಬೇಕು ಎಂದು ರಾಜ್ಯದ ನಾಗರಿಕರಿಗೆ ಕರೆ ನೀಡುತ್ತಿದ್ದೇನೆ.