ಭಾರತೀಯ ಸಮಾಜದ ಭಾವನೆಗಳನ್ನು ನೋಯಿಸುವ ಟಿ.ವಿ. ಧಾರಾವಾಹಿಗಳನ್ನು ನಿಯಂತ್ರಿಸಲು ಕಠಿಣ ಕಾನೂನುಗಳನ್ನು ರೂಪಿಸಿ ! – ಸಂಸ್ಕಾರ ಭಾರತಿ

  • ಹೀಗೇಕೆ ಆಗ್ರಹಿಸಬೇಕಾಗುತ್ತದೆ ? ಸರಕಾರ ತಾನಾಗಿ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?

  • ‘ವೆಬ್ ಸಿರೀಸ್’ಗಳ ಪರಿವೀಕ್ಷಣೆಗೂ ಒತ್ತಾಯ

ನವ ದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ‘ಸಂಸ್ಕೃತ ಭಾರತಿ’ಯ ಅಖಿಲ ಭಾರತ ಪ್ರತಿನಿಧಿ ಕಾರ್ಯನಿರ್ವಾಹಕ ಸಭೆಯು ದೂರದರ್ಶನದಲ್ಲಿನ ಧಾರಾವಾಹಿಯಿಂದ ದ್ವೇಷಪೂರಿತ ಹಿಂಸಾಚಾರ, ಲೈಂಗಿಕತೆ, ನಗ್ನತೆ ಮತ್ತು ಭಾರತೀಯ ಸೈನಿಕರ ಬಗ್ಗೆ ಅವಮಾನಕರ ‘ವಿಡಿಯೋ’ ಮಾಲಿಕೆ (ವೆಬ್ ಸಿರಿಸ್)ಗಳನ್ನು ಪ್ರಸಾರ ಮಾಡುವ ಬಗ್ಗೆ ತೀವ್ರವಾಗಿ ಖಂಡಿಸಿದೆ. ಕಾರ್ಯನಿರ್ವಾಹಕ ಸಭೆಯಲ್ಲಿ ಠರಾವನ್ನು ಜಾರಿಗೊಳಿಸುವ ಮೂಲಕ ಇಂತಹ ಮಾಲಿಕೆಗಳ ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರಕಾರವು ತಕ್ಷಣ ಕಟ್ಟುನಿಟ್ಟಿನ ಕಾನೂನನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದೆ.

೧. ‘ಸಂಸ್ಕಾರ ಭಾರತಿ’ಯು ಸ್ವಚ್ಛ ಮನೋರಂಜನೆಯನ್ನು ವಿರೋಧಿಸುತ್ತಿಲ್ಲ. ಅಪರಾಧ ಮತ್ತು ನಗ್ನತೆಯ ಕುರಿತ ಮಾಲಿಕೆಗಳನ್ನು ನಿರ್ಮಿಸುವ ಬದಲು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವನ್ನು ಪರಿಚಯಿಸುವ ಮಾಲಿಕೆಗಳನ್ನು ನಿರ್ಮಿಸುವಂತೆ ಈ ಸಂಸ್ಥೆಯ ವತಿಯಿಂದ ಮಾಲಿಕೆಯ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮನವಿ ಮಾಡಿದೆ.

೨. ‘ಸಂಸ್ಕಾರ ಭಾರತಿ’ಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ ಚಂದ್ ಇವರು, ‘ವೆಬ್ ಸಿರೀಸ್’ನ ಪರಿವೀಕ್ಷಣೆ ಮಾಡಲು ಸರಕಾರವು ದಳವನ್ನು ರೂಪಿಸಬೇಕು. ಇದರಿಂದ ದೇಶದ ಯುವ ಪೀಳಿಗೆಗೆ ಯೋಗ್ಯವಾದಂತಹ ಮಾಲಿಕೆಗಳ ಪ್ರಸಾರವಾಗುವುದು ಮತ್ತು ಅದೇರೀತಿ ಈ ಮಾಲಿಕೆಗಳಲ್ಲಿ ಭಾಗವಹಿಸುವ ಕಲಾವಿದರು ಕೂಡ ಇದಕ್ಕಾಗಿ ಪ್ರಯತ್ನಿಸಬೇಕು’ ಎಂದು ಸಂಸ್ಕಾರ ಭಾರತಿ ಹೇಳಿದೆ.