ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ನಾಯಕ ಸಹಿತ ಅವರ ತಂದೆ ಹಾಗೂ ಸಹೋದರನ ಹತ್ಯೆ

ಘಟನೆಯ ಸಮಯದಲ್ಲಿ ಸುರಕ್ಷಾರಕ್ಷಕರ ಅನುಪಸ್ಥಿತಿ

ಕಾಶ್ಮೀರದಲ್ಲಿ ರಕ್ಷಣಾಪಡೆಗಳು ಸತತವಾಗಿ ಜಿಹಾದಿ ಭಯೋತ್ಪಾದಕರ ಹತ್ಯೆ ಮಾಡುತ್ತಿದ್ದರೂ, ಅಲ್ಲಿನ ಭಯೋತ್ಪಾದನೆ ನಾಶವಾಗಿಲ್ಲ, ಎಂಬುದೇ ಈ ಘಟನೆಯಿಂದ ಸ್ಪಷ್ಟವಾಗುತ್ತಿದೆ. ಎಲ್ಲಿಯವರೆಗೆ ಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕ್‌ನ ನಾಶವಾಗುವುದಿಲ್ಲವೋ, ಅಲ್ಲಿಯವರೆಗೂ ಜಿಹಾದಿ ಭಯೋತ್ಪಾದಕರು ನಾಶವಾಗುವ ಸಾಧ್ಯತೆ ಕಡಿಮೆ ಎಂದು ಹೇಳಬಹುದು !

ಬಾಂದಿಪೋರಾ (ಜಮ್ಮು- ಕಾಶ್ಮೀರ) –  ಜಿಹಾದಿ ಭಯೋತ್ಪಾದಕರು ಇಲ್ಲಿನ ಭಾಜಪದ ಮುಖಂಡ ಶೇಖ್ ವಸೀಮ್ ಬಾರೀ, ಅವರ ತಂದೆ ಬಶೀರ್ ಅಹಮದ್ ಹಾಗೂ ಅವರ ಸಹೋದರ ಉಮರ್ ಬಶೀರ್‌ರವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯು ಜುಲೈ ೮ರಂದು ರಾತ್ರಿ ನಡೆದಿದೆ. ಗುಂಡುಹಾರಾಟದಲ್ಲಿ ಈ ಮೂವರು ಗಾಯಗೊಂಡಿದ್ದರು. ಅವರನ್ನು ನಂತರ ಆಸ್ಪತ್ರೆಗೆ ಕೊಂಡೊಯ್ಯುವಾಗ ಸಾವಿಗೀಡಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದರು. ಈ ಘಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಬಾರಿ ಕುಟುಂಬದವರಿಗೆ ಕರೆ ಮಾಡಿ ಅವರಿಗೆ ಸಂತಾಪ ವ್ಯಕ್ತಪಡಿಸಿದರು. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರವರು ಈ ಘಟನೆಯನ್ನು ಖಂಡಿಸಿದ್ದಾರೆ.

 

ಶೇಖ್ ವಾಸಿಮ್‌ರವರು ಭಾಜಪದ ಜಿಲ್ಲಾಧ್ಯಕ್ಷರಾಗಿದ್ದರು. ಅವರು ತಮ್ಮ ಕುಟುಂಬದವರೊಂದಿಗೆ ಒಂದು ಅಂಗಡಿಯ ಬಳಿ ಕುಳಿತುಕೊಂಡಿದ್ದರು. ಆಗ ಆಕಸ್ಮಿಕವಾಗಿ ಬಂದ ಭಯೋತ್ಪಾದಕರು ಅವರ ಮೇಲೆ ಗುಂಡುಹಾರಾಟ ಮಾಡಿದರು. ವಸೀಮ್‌ರವರಿಗೆ ೮ ಸುರಕ್ಷಾರಕ್ಷಕರ ಭದ್ರತೆಯನ್ನು ಪೂರೈಸಲಾಗಿತ್ತು; ಆದರೆ ಈ ಘಟನೆಯ ಸಮಯದಲ್ಲಿ ಒಬ್ಬ ಸುರಕ್ಷಾರಕ್ಷಕನು ಕೂಡ ಅಲ್ಲಿ ಇರಲಿಲ್ಲ. ಈ ಪ್ರಕರಣದಲ್ಲಿ ಖಾಸಗಿ ಸುರಕ್ಷಾರಕ್ಷಕರು ಸರಿಯಾಗಿ ಸುರಕ್ಷೆ ನೀಡಲಿಲ್ಲವೆಂದು ಅವರನ್ನು ಬಂಧಿಸಿ ವಶಕ್ಕೆ ಪಡೆದುಕೊಳ್ಳಲಾಗುವುದು, ಎಂದು ಪೋಲೀಸರು ಹೇಳಿದ್ದಾರೆ. (ಈ ರೀತಿಯ ನಿರ್ಲಕ್ಷ್ಯ ಬೇರೆ ಎಲ್ಲಿ ಆಗುತ್ತದೆಯೇ, ಎಂಬುದನ್ನು ಕೂಡ ಪೊಲೀಸರು ಕಂಡು ಹಿಡಿಯಬೇಕು ! – ಸಂಪಾದಕರು)