ಕುಖ್ಯಾತ ಗೂಂಡಾ ವಿಕಾಸ ದುಬೆ ಪೊಲೀಸ್ ಚಕಮಕಿಯಲ್ಲಿ ಸಾವು

  • ಕಾನಪುರದ ಹತ್ತಿರ ಪೊಲೀಸರ ವಾಹನ ಅಪಘಾತವಾದಾಗ ಪರಾರಿಯಾಗುವ ಪ್ರಯತ್ನ

  • ೬ ಪೊಲೀಸರಿಗೆ ಗಾಯ

ಕಾನಪುರ (ಉತ್ತರಪ್ರದೇಶ) – ಚೌಬೆಪುರದಲ್ಲಿ ೮ ಪೊಲೀಸರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕುಖ್ಯಾತ ಗೂಂಡಾ ವಿಕಾಸ ದುಬೆನನ್ನು ಪೊಲೀಸರು ಕಾನಪುರದ ಹತ್ತಿರ ಚಕಮಕಿಯಲ್ಲಿ ಹತ್ಯೆಮಾಡಿದ್ದಾರೆ. ವಿಕಾಸ ದುಬೆಯನ್ನು ಮಧ್ಯಪ್ರದೇಶದ ಪೊಲೀಸರು ಜುಲೈ ೯ ರಂದು ಬೆಳಗ್ಗೆ ಉಜ್ಜೈನ್‌ನ ಶ್ರೀ ಮಹಾಕಾಲ ದೇವಸ್ಥಾನದ ಪರಿಸರದಲ್ಲಿ ಬಂಧಿಸಿದ್ದರು. ಆತನನ್ನು ಉತ್ತರಪ್ರದೇಶ ಪೊಲೀಸರ ವಿಶೇಷ ಕೃತಿ ಪಡೆಯು ತಮ್ಮ ವಶಕ್ಕೆ ತೆಗೆದುಕೊಂಡು ಬೆಂಗಾವಲು ವಾಹನದೊಂದಿಗೆ ಕಾನಪುರಕ್ಕೆ ಕರೆತರುತ್ತಿದ್ದರು. ಪೊಲೀಸರ ಬೆಂಗಾವಲು ವಾಹನ ಬೆಳಗ್ಗೆ ೬.೩೦ ಸಮಯದಲ್ಲಿ ಕಾನಪುರದ ಹತ್ತಿರ ತಲುಪಿದ ನಂತರ ಅಲ್ಲಿ ಬರುತ್ತಿದ್ದ ಭಾರಿಮಳೆಯಿಂದ ದುಬೆ ಕುಳಿತ್ತಿದ್ದ ವಾಹನವು ಜಾರಿ ಮುಗುಚಿತು. ಆಗ ದುಬೆಯು ಪೊಲೀಸರ ಬಂದೂಕನ್ನು ಕಸಿದು ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನಿಗೆ ಶರಣಾಗಲು ಹೇಳಿದರು; ಆದರೆ ಆತ ಪೊಲೀಸರ ದಿಕ್ಕಿನತ್ತ ಗುಂಡು ಹಾರಿಸಿದ. ಇದರಿಂದ ಪೊಲೀಸರು ಪ್ರತ್ಯುತ್ತರವಾಗಿ ಮೊದಲನೇ ಗುಂಡು ಆತನ ಕಾಲಿಗೆ ನಂತರ ಸೊಂಟದ ಮೇಲೆ ಗುಂಡು ಹಾರಿಸಿದರು. ಆಗ ಆತ ಗಾಯಗೊಂಡನು ಮತ್ತು ಆತನಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನು ಮೃತ ಪಟ್ಟಿದ್ದಾನೆ ಎಂದು ಘೋಷಿಸಲಾಯಿತು. ಈ ಚಕಮಕಿಯಲ್ಲಿ ಇಬ್ಬರು ಪೊಲೀಸರು ಹಾಗೂ ವಾಹನ ಅಪಘಾತದಲ್ಲಿ ೪ ಪೊಲೀಸರು ಗಾಯಗೊಂಡಿದ್ದು ಅವರ ಚಿಕಿತ್ಸೆ ನಡೆಯುತ್ತಿದೆ.

ಚತುಶ್ಚಕ್ರ ಉರುಳಿದ್ದರಿಂದ ಸರಕಾರ ಉರುಳುವುದು ತಪ್ಪಿತು ! – ಅಖಿಲೇಶ ಯಾದವರ ಆರೋಪ

ನಿಜವಾಗಿ ಈ ವಾಹನ ಉರುಳಲೇ ಇಲ್ಲ. ಮಾಹಿತಿಯೇನಾದರು ಬಹಿರಂಗವಾಗುತ್ತಿದ್ದರೆ ಸರಕಾರ ಉರುಳುವುದನ್ನು ತಪ್ಪಿಸಿದೆ’, ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ ಇವರು ಟ್ವೀಟ್ ಮಾಡಿದ್ದಾರೆ.

ಅಪರಾಧಿಯ ಅಂತ್ಯವಾಯಿತು; ಆದರೆ ಅಪರಾಧಿಗಳನ್ನು ರಕ್ಷಿಸುವವರದ್ದು ಏನು ? – ಪ್ರಿಯಾಂಕಾ ವಾಡ್ರಾರವರ ಪ್ರಶ್ನೆ

ಈ ಘಟನೆಯ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾಡ್ರಾ ಕೂಡ ಟ್ವೀಟ್ ಮಾಡಿ ‘ಅಪರಾಧಿಯ ಅಂತ್ಯ ಆಯಿತು; ಆದರೆ ಅಪರಾಧ ಹಾಗೂ ಅಂತಹವರಿಗೆ ರಕ್ಷಣೆ ನೀಡುಉವರಿಗೆ ಏನು?’, ಎಂಬ ಪ್ರಶ್ನೆಯನ್ನು ಮಾಡಿದ್ದಾರೆ.