ಪಠ್ಯಪುಸ್ತಕದಲ್ಲಿ ಮಹಾರಾಣಾ ಪ್ರತಾಪರವರ ಅಪಮಾನಕಾರಕ ಉಲ್ಲೇಖವನ್ನು ತೆಗೆಯಲಾಗುವುದು

ಕಾಂಗ್ರೆಸ್ ಆಡಳಿತದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹಲೋತ್‌ರವರಿಂದ ಮೇವಾಡ್‌ನ ರಾಜಪೂತ್ ಸಮಾಜಕ್ಕೆ ಆಶ್ವಾಸನೆ

ಮೇವಾಡ್ ರಾಜಪೂತ ಸಮಾಜದಿಂದ ಬೇಡಿಕೆ ಬಂದ ಮೇಲೆ ‘ಅಪಮಾನಕಾರಕ ಉಲ್ಲೇಖವನ್ನು ತೆಗೆಯಲಾಗುವುದು ಎಂದು ಹೇಳುವ ಕಾಂಗ್ರೆಸ್ ಸರಕಾರಕ್ಕೆ ಸ್ವತಃ ಅದನ್ನು ತೆಗೆಯಬೇಕೆಂದು ಏಕೆ ಅನಿಸಲಿಲ್ಲ? ಪ್ರತಿ ಸಲ ಯಾರಾದರೂ ದೂರು ನೀಡಿದ ಬಳಿಕ ಅಥವಾ ಒತ್ತಾಯಿಸಿದ ಮೇಲೆ ಕೃತಿ ಮಾಡುವ ಸರಕಾರ, ಆಡಳಿತ ಹಾಗೂ ಪೊಲೀಸರ ಏನು ಪ್ರಯೋಜನ ?

ಜಯಪುರ್ (ರಾಜಸ್ಥಾನ)- ರಾಜಸ್ಥಾನ ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಳಿಯ ಹತ್ತನೇಯ ತರಗತಿಯ ಸಮಾಜ ವಿಜ್ಞಾನದ ಪುಸ್ತಕದಲ್ಲಿ ಮಹಾನ ಸೇನಾನಿ ಮಹಾರಾಣಾ ಪ್ರತಾಪ್‌ರವರನ್ನು ‘ಕಡಿಮೆ ಧೈರ್ಯದ ಸೇನಾನಾಯಕ ಎಂದು ಅವಮಾನವಾಗುವಂತೆ ಉಲ್ಲೇಖ ಮಾಡಲಾಗಿತ್ತು. ಅದೇ ರೀತಿ ಮಹಾರಾಣಾ ಪ್ರತಾಪರು ನಡೆಸಿದ ಸಂಘರ್ಷದ ಇತಿಹಾಸವನ್ನು ಅಡಗಿಸಿಡಲಾಗಿತ್ತು. ಆ ವಿಷಯವಾಗಿ ರಾಜ್ಯದಲ್ಲಿನ ಮೇವಾಡ್ ರಾಜಪೂತ್ ಸಮಾಜದ ಪ್ರತಿನಿಧಿಗಳ ತಂಡವು ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ ಗೆಹಲೋತ್‌ರವರನ್ನು ಭೇಟಿಯಾಗಿ ಆ ವಿಷಯದ ಮೇಲೆ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿತು. ಅದಕ್ಕೆ ಮುಖ್ಯಮಂತ್ರಿ ಗೆಹಲೋತ್‌ರವರು ‘ಅವಮಾನವಾದಂತಹ ಉಲ್ಲೇಖವನ್ನು ತೆಗೆಯಲಾಗುವುದು, ಎಂದು ಭರವಸೆ ನೀಡಿದರು.
ಈ ಬಗ್ಗೆ ರಾಜ್ಯದ ಸಾರಿಗೆ ಸಚಿವರಾದ ಪ್ರತಾಪಸಿಂಹ ಖಾಚರಿಯಾವಾಸ್‌ರವರು ‘ಈ ರೀತಿಯ ಅವಮಾನವಾಗುವಂತಹ ಉಲ್ಲೇಖವು ಭಾಜಪ ಸರಕಾರದ ಸಮಯದಲ್ಲಿ ಮಾಡಲಾಗಿದ್ದು, ಈಗ ಇದರ ಮೇಲೆ ಭಾಜಪವು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.