ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಸತಪಾಲ್ ಮಹಾರಾಜರು ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್‌ರವರಿಗೆ ಉಡುಗೊರೆಯಾಗಿ ರಾಮಾಯಣ ನೀಡಿದರು !

ವಿಸ್ತಾರವಾದಿ ರಾವಣನ ಸ್ಥಿತಿ ಏನಾಯಿತು ?, ಎಂಬುದನ್ನು ವಿಸ್ತಾರವಾದಿ ಚೀನಾಗೆ ಹೇಳುವ ಪ್ರಯತ್ನ !

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದ ಪ್ರವಾಸೋದ್ಯಮ ಸಚಿವರಾದ ಸತಪಾಲ್ ಮಾಹಾರಜರವರು ಚೀನಾದ ರಾಷ್ಟ್ರಪತಿ ಶೀ ಜಿನಪಿಂಗ್‌ರವರಿಗೆ ರಾಮಾಯಣ ಗ್ರಂಥದ ಆಂಗ್ಲ ಭಾಷೆಯ ಪ್ರತಿಯನ್ನು ಕಳುಹಿಸಿದ್ದಾರೆ. ಸತಪಾಲ್ ಮಹಾರಾಜರು, ‘ಗಲ್ವಾನ್ ಕಣಿವೆಯಲ್ಲಿ ವಿಸ್ತಾರವಾದಿ ಚೀನಾದ ಸೈನಿಕರು ನಿಶಸ್ತ್ರ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿದ್ದು ಖಂಡನೀಯವಾಗಿದೆ. ಜಿನಪಿಂಗ್‌ರವರಿಗೆ ರಾಮಾಯಣವನ್ನು ಕಳುಹಿಸಿ ಅವರಿಗೆ ಹೇಳಲು ಇಚ್ಛಿಸುತ್ತೇನೆ, ವಿಸ್ತಾರವಾದಿ ರಾವಣ ಸ್ಥಿತಿ ಏನಾಯಿತು?, ಎಂಬುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು. ನನ್ನ ಆಶಯವೆಂದರೆ, ಜಿನಪಿಂಗ್‌ರವರು ಇದರಿಂದ ಯೋಗ್ಯ ಬೋಧನೆ ಪಡೆದುಕೊಳ್ಳಲಿ. ಭಾರತವು ಎಂದಿಗೂ ವಿಸ್ತಾರವಾದದ ನಿಲುವನ್ನು ತೆಗೆದುಕೊಳ್ಳಲಿಲ್ಲ.

ಭಾರತವು ಬಾಂಗ್ಲಾದೇಶವನ್ನು ಗೆದ್ದ ಬಳಿಕ ಅದರ ಮೇಲೆ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟಿತು. (ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸ್ಥಿತಿಯನ್ನು ನೋಡಿದರೆ ಅದು ಭಾರತದ ಮೂರ್ಖತನವಾಗಿತ್ತು, ಎಂಬುದು ಗಮನಕ್ಕೆ ಬರುತ್ತದೆ. ಬಾಂಗ್ಲಾದೇಶವು ಹಿಂದೆ ಭಾರತದ ಭಾಗವೇ ಆಗಿತ್ತು. ಆದ್ದರಿಂದ ಅದನ್ನು ಭಾರತಕ್ಕೆ ಸೇರಿಸಿಕೊಳ್ಳಬೇಕಾಯಿತು. ಇದರಲ್ಲಿ ಯಾವುದೇ ರೀತಿಯ ವಿಸ್ತಾರವಾದಿ ವೃತ್ತಿ ಕಾಣಿಸುವುದಿಲ್ಲ; ಆದರೆ ತಥಾಕಥಿತ ಗಾಂಧಿವಾದಿ ನಿಲುವಿನಿಂದ ಹಿಂದೂವಿರೋಧಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. – ಸಂಪಾದಕರು)