ಅಸ್ಸಾಮ್‌ನಲ್ಲಿ ‘ಬೇಗಮ್ ಜಾನ್ ಈ ಧಾರಾವಾಹಿಯಲ್ಲಿ ‘ಲವ್ ಜಿಹಾದ್ ಗೆ ಪ್ರೋತ್ಸಾಹ ಸಿಗುತ್ತಿರುವುದರಿಂದ ಅದನ್ನು ನಿಲ್ಲಿಸುವಂತೆ ಹಿಂದುತ್ವನಿಷ್ಠ ಸಂಘಟನೆಯ ಆಗ್ರಹ

  • ಹಿಂದೂ ಬ್ರಾಹ್ಮಣ ಯುವತಿಯು ಮುಸಲ್ಮಾನ ಯುವಕನೊಂದಿಗೆ ವಿವಾಹವಾಗುವ ಕಥೆ

  • ಹಿಂದೂ ಯುವಕ ಹಾಗೂ ಮುಸಲ್ಮಾನ ಯುವತಿಯ ಬಗ್ಗೆ ಈ ರೀತಿಯ ಕಥೆಯನ್ನು ತೋರಿಸಿದರೆ ಮತಾಂಧರು ಹಿಂಸಾತ್ಮಕವಾಗಿ ವಿರೋಧವಾಗುತ್ತದೆ, ಆದ್ದರಿಂದ ಅಂತಹ ಕಥೆಗಳನ್ನು ತೋರಿಸುವುದಿಲ್ಲ; ಆದರೆ ಹಿಂದೂ ಯುವತಿ ಹಾಗೂ ಮುಸಲ್ಮಾನ ಯುವಕನ ಕಥೆಯನ್ನು ಹಿಂದೂಗಳು ಕಾನೂನುಮಾರ್ಗವಾಗಿ ವಿರೋಧಿಸುವುದಿಲ್ಲ. ಆದ್ದರಿಂದ ಆ ರೀತಿ ತೋರಿಸಲು ಧೈರ್ಯ ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ !

ಗೌಹಾಟಿ (ಅಸ್ಸಾಮ್)- ಇಲ್ಲಿನ ಆಸಾಮೀ ಭಾಷೆಯಲ್ಲಿ ಖಾಸಗಿ ದೂರದರ್ಶನವಾಹಿನಿಗಳಲ್ಲಿ ‘ರೆಂಗೋನಿಯ ಮೇಲೆ ಪ್ರಸಾರಗೊಳ್ಳುತ್ತಿರುವ ‘ಬೇಗಮ್ ಜಾನ್ ಎಂಬ ಹೆಸರಿನ ಧಾರಾವಾಹಿಯಲ್ಲಿ ‘ಲವ್ ಜಿಹಾದ್ಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅದಕ್ಕೆ ಹಿಂದೂಗಳು ವಿರೋಧಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ಈ ಧಾರಾವಾಹಿಯ ನಿರ್ಮಾಪಕರು ಹಾಗೂ ನಟ ಇವರ ವಿರುದ್ಧ ದೂರನ್ನು ದಾಖಲಿಸಲಾಗುತ್ತಿದೆ. ಅಸ್ಸಾಮ್‌ನಲ್ಲಿ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಈ ಧಾರಾವಾಹಿಯನ್ನು ನಿಷೇಧಿಸುವಂತೆ ಆಗ್ರಹಿಸಲಾಗಿದೆ, ಅದೇ ರೀತಿ ಈ ಧಾರಾವಾಹಿಯಿಂದ ಕಾನೂನು ಹಾಗೂ ಸುವ್ಯವಸ್ಥೆಯ ಹದಗೆಡಬಹುದು, ಎಂಬ ಆತಂಕವನ್ನು ಕೂಡ ವ್ಯಕ್ತಪಡಿಸಲಾಗುತ್ತಿದೆ. ‘ಈ ಸರಣಿಯಲ್ಲಿ ಹಿಂದೂ ಬ್ರಾಹ್ಮಣ ಯುವತಿಯು ಓರ್ವ ಮುಸಲ್ಮಾನ ಯುವಕನನ್ನು ವಿವಾಹವಾಗುತ್ತಾಳೆ. ಆದ್ದರಿಂದ ಯುವತಿಯ ಕುಟುಂಬದವರು ಹಾಗೂ ಸಮಾಜವು ಅವರ ವಿವಾಹವನ್ನು ವಿರೋಧಿಸುತ್ತಾರೆ’, ಎಂದು ತೋರಿಸಲಾಗಿದೆ.