ವಾಶಿಂಗ್ಟನ್ (ಅಮೇರಿಕಾ) – ಚೀನಾಗೆ ಗಡಿವಿವಾದವನ್ನು ಕೆರಳಿಸಲು ತುಂಬಾ ಒಲವಿದೆ. ಜಗತ್ತು ಇದಕ್ಕೆ ಅವಕಾಶ ಮಾಡಿಕೊಡಬಾರದು. ಚೀನಾದ ಅಕ್ರಮಣಕಾರಿವೃತ್ತಿ ಬಗ್ಗೆ ನಾನು ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರರವರನ್ನು ಹಲವಾರು ಬಾರಿ ಸಂಪರ್ಕಿಸಿದ್ದೇನೆ. ಚೀನಾವು ಅನೇಕ ಬಾರಿ ಅಕ್ರಮಣಕಾರಿ ಚಟುವಟಿಕೆ ನಡೆಸುತ್ತದೆ; ಆದರೆ ಭಾರತವು ಕೂಡ ಅದಕ್ಕೆ ತಕ್ಕ ಉತ್ತರ ನೀಡಿತು, ಎಂದು ಅಮೇರಿಕಾದ ವಿದೇಶಾಂಗ ಸಚಿವ ಮಾಯಿಕ್ ಪಾಂಪಿಒರವರು ಗೌರವೋದ್ಗಾರವಾಗಿ ಹೇಳಿದರು. ಲಡಾಖ್‌ನಲ್ಲಿ ಚೀನಾವು ನಡೆಸಿದ ನುಸುಳುವಿಕೆಯ ಬಗ್ಗೆ ಪಾಂಪಿಯೊರಿಗೆ ಪ್ರಶ್ನಿಸಿದಾಗ ಈ ಸಮಯದಲ್ಲಿ ಅವರು ಮಾತನಾಡಿದರು.
ಪಾಂಪಿಯೋರವರು ಮುಂದೆ ಮಾತನಾಡುತ್ತಾ, ‘ಇತ್ತೀಚೆಗಷ್ಟೇ ನಡೆದ ‘ಗ್ಲೋಬಲ್ ಎನ್‌ವೈರ್‌ಮೆಂಟರ್ ಫೆಸಿಲಿಟ್ನ ಸಭೆಯಲ್ಲಿ ಭೂತಾನ್‌ದ ಅಭಯಾರಣ್ಯವನ್ನೂ ಚೀನಾವು ತನ್ನದೆಂದು ಹೇಳಿಕೊಂಡಿತ್ತು. ಚೀನಾಗೆ ಹಿಮಾಲಯದಲ್ಲಿನ ಪರ್ವತ ಶ್ರೇಣಿಯಿಂದ ಹಿಡಿದು ವಿಯೆಟ್ನಾಮ್‌ನಲ್ಲಿನ ವಿಶೇಷ ಕ್ಷೇತ್ರದ ‘ವಾಟರ್ ಝೋನ್ ಹಾಗೂ ದ್ವೀಪಸಮೂಹದವರೆಗೂ ಗಡಿವಾದವನ್ನು ಕೆರಳಿಸುವುದು ಚೀನಾದ ಪ್ರವೃತ್ತಿಯಿದೆ. ಜಗತ್ತು ಅದಕ್ಕೆ ಗೂಂಡಾಗಿರಿ ಮಾಡಲು ಅವಕಾಶ ನೀಡಬಾರದು. ಜಗತ್ತು ಒಗ್ಗಟ್ಟಾಗಿ ಚೀನಾದ ಕಮ್ಯೂನಿಸ್ಟ್ ಪಕ್ಷದ ಈ ಕೃತ್ಯಗಳಿಗೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.