ನಟ ಸುಶಾಂತಸಿಂಹ ರಾಜಪುತ್‌ನ ಆತ್ಮಹತ್ಯೆ ಅಲ್ಲ, ಹತ್ಯೆಯಾಗಿದೆ ‘ಪಾರಾನಾರ್ಮಲ್’ ತಜ್ಞರ ಹೇಳಿಕೆ

ನವ ದೆಹಲಿ – ನಟ ಸುಶಾಂತಸಿಂಹ ರಾಜಪುತನು ಜೂನ್ ೧೪ ರಂದು ಮುಂಬಯಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು; ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪರಿಸ್ಥಿತಿಯನ್ನು ನಿರ್ಮಿಸಲಾಗಿತ್ತು, ಎಂದು ಆರೋಪಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗ ಈ ಹಿನ್ನಲೆಯಲ್ಲಿ ಒಂದು ‘ಪಾರಾನಾರ್ಮಲ್’ ಸಂಶೋಧಕರ (ಪಂಚಜ್ಞಾನೇಂದ್ರಿಯ ಆಚೆಗಿನ ಸತ್ಯವನ್ನರಿಲು ಪ್ರಯತ್ನಿಸುವವರು) ಒಂದು ‘ವಿಡಿಯೋ’ವನ್ನು ಸದ್ಯ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. ಅದರಲ್ಲಿ ಅವರು ಸುಶಾಂತ್‌ನ ಆತ್ಮಹತ್ಯೆಯಾಗದೇ ಆತನ ಹತ್ಯೆಯಾಗಿದೆ ಎಂದು ಹೇಳಿದ್ದಾರೆ. ‘ಕಾಸ್ಮೋ ಪಾರಾನಾರ್ಮಲ್ ಆಂಡ್ ಘೋಸ್ಟ್ ಹಂಟಿಂಗ್ ಸೊಸೈಟಿ ಆಫ್ ಇಂಡಿಯಾ-ಯುಕೆ-ಯು.ಎಸ್.ಎ’ಯ ಓರ್ವ ವ್ಯಕ್ತಿಯು ಸುಪ್ರಸಿದ್ಧ ‘ಪಾರಾನಾರ್ಮಲ್’ ತಜ್ಞ ಶಾನ್ ಲಾರ್ಸನ ಹಾಗೂ ಟ್ರಾಸಾ ಲಾರ್ಸನನೊಂದಿಗೆ ಚರ್ಚೆಯನ್ನು ಮಾಡಿದರು. ಈದೇ ಚರ್ಚೆಯ ‘ವಿಡಿಯೋ’ ಆಗಿದೆ.
ಈ ‘ವಿಡಿಯೋ’ದಲ್ಲಿ, ‘ನಾವು ಸುಶಾಂತನ ಆತ್ಮದೊಂದಿಗೆ ಮಾತನಾಡಿದೆವು. ಈ ಸಮಯದಲ್ಲಿ ಸುಶಾಂತ್ ಸ್ವತಃ ತನ್ನ ಹತ್ಯೆ ಆಗಿದೆ ಎಂದು ಹೇಳಿದ್ದಾನೆ, ಸದ್ಯ ಸುಶಾಂತ್‌ನ ಹತ್ಯೆ ಯಾರು ಮಾಡಿದರು ಇದನ್ನು ಹೇಳಲು ಸಾಧ್ಯವಿಲ್ಲ; ಆದರೆ ‘ಸುಶಾಂತ್‌ನನ್ನು ಹತ್ಯೆ ಮಾಡಿರುವ ಹಂತಕ ಪುರುಷನಾಗಿದ್ದು ಹಾಗೂ ಆ ಸಮಯದಲ್ಲಿ ಕಪ್ಪು ಬಣ್ಣದ ಶರ್ಟ್‌ಅನ್ನು ಧರಿಸಿದ್ದನು’, ಇಷ್ಟು ಮಾತ್ರ ನಾವು ಹೇಳಲು ಸಾಧ್ಯವಿದೆ. ನಾವು ಆದಷ್ಟು ಬೇಗನೆ ಸತ್ಯವನ್ನು ಜಗತ್ತಿನ ಮುಂದೆ ಹೇಳಿ ಸುಶಾಂತ ಹಾಗೂ ಅವರ ಅಭಿಮಾನಿಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸುವೆವು’ ಎಂದು ಹೇಳಿದ್ದಾರೆ.