-
ಚೀನಾದಿಂದ ರಾಖಿ ಹಾಗೂ ಅದರ ವಸ್ತುಗಳನ್ನು ಆಮದು ಮಾಡಿಕೊಳ್ಳದಿರಲು ನಿರ್ಧಾರ
-
ಚೀನಾಗೆ ೪ ಸಾವಿರ ಕೋಟಿ ರೂಪಾಯಿಯ ಪೆಟ್ಟು ಬೀಳುವ ಸಾಧ್ಯತೆ
ವ್ಯಾಪಾರಿ ಸಂಘಟನೆಯು ಈ ರೀತಿಯ ಕರೆ ನೀಡುವುದಕ್ಕಿಂತ ಕೇಂದ್ರ ಸರಕಾರವೇ ನೇರವಾಗಿ ಚೀನಾದಿಂದ ಬರುವ ಎಲ್ಲ ವಸ್ತುಗಳ ಆಮದಿನ ಮೇಲೆ ನಿರ್ಬಂಧ ಹೇರಬೇಕು !
ನವ ದೆಹಲಿ – ಆಗಸ್ಟ್ ೩ ರಂದು ಇರುವ ರಕ್ಷಾಬಂಧನಕ್ಕಾಗಿ ಯಾರೂ ಚೀನಾ ಸಾಹಿತ್ಯದಿಂದ ನಿರ್ಮಿಸಿದ ರಾಖಿಗಳನ್ನು ಉಪಯೋಗಿಸಬಾರದು, ಎಂದು ದೇಶದ ಎಲ್ಲಕ್ಕಿಂತ ದೊಡ್ಡದಾದ ವ್ಯಾಪಾರಿ ಸಂಘಟನೆಯಾದ ‘ಕನ್ಫೇಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ’ (‘ಕ್ಯಾಟ್’ವು) ಕರೆ ನೀಡಿದೆ. ಜೂನ್ ೧೦ ರಿಂದ ‘ಕ್ಯಾಟ್’ನಿಂದ ‘ಭಾರತೀಯ ವಸ್ತು ನಮ್ಮ ಅಭಿಮಾನ’ ಈ ಅಭಿಯಾನದ ಅಂತರ್ಗತ ಚೀನಾದ ವಸ್ತುವಿನ ಮೇಲೆ ಬಹಿಷ್ಕಾರ ಹಾಕಲು ಆರಂಭಿಸಲಾಗಿದೆ. ಈ ಅಭಿಯಾನದಲ್ಲಿ ರಕ್ಷಾಬಂಧನ ಇದೊಂದು ದೊಡ್ಡ ಹಬ್ಬವಾಗಿದೆ, ಈ ಮೂಲಕ ಚೀನಾದ ವಸ್ತುಗಳನ್ನು ಬಹಿಷ್ಕರಿಸಲಾಗುತ್ತಿದೆ. ‘ಕ್ಯಾಟ್’ವು ವ್ಯಕ್ತ ಪಡಿಸಿದ ಅಂದಾಜಿಗನುಸಾರ ಈ ಸಲ ಚೀನಾದ ರಾಖಿಗಳ ಮೇಲೆ ನಿರ್ಬಂಧ ಹೇರಿದರೆ ಚೀನಾಗೆ ೪ ಸಾವಿರ ಕೋಟಿ ರೂಪಾಯಿಯ ಹಾನಿಯಾಗಲಿದೆ ಎಂದು ಹೇಳಿದ್ದಾರೆ.
चीनी वस्तुओं के बहिष्कार को लेकर @CAITIndia द्वारा घोषित *हिंदुस्तानी राखी * अभियान देश भर में ज़ोरों पर। अवश्य सुने CAIT राष्ट्रीय महामंत्री श्री प्रवीण खण्डेलवाल जी @praveendel का वक्तव्य ।#HindustaniRakhi #BoycottChina @BCBHARTIA @sumitagarwal_82 @BRIJMOHANAGRA12 🇮🇳 pic.twitter.com/nsjiHhEk0A
— Confederation of All India Traders (CAIT) (@CAITIndia) July 16, 2020
೧. ಒಂದು ಅಂಕಿಅಂಶಕ್ಕನುಸಾರ, ‘ದೇಶದಲ್ಲಿ ರಕ್ಷಾಬಂಧನದ ಹಿನ್ನೆಲೆಯಲ್ಲಿ ರಾಖಿ ಉದ್ಯೋಗದಲ್ಲಿ ೬ ಸಾವಿರ ಕೋಟಿ ರೂಪಾಯಿಯ ಆರ್ಥಿಕ ವಾಹಿವಾಟು ಆಗಲಿದೆ. ಅದರಲ್ಲಿ ಮಾರುಕಟ್ಟೆಯಲ್ಲಿ ಕೇವಲ ಚೀನಾದ ರಾಖಿಯ ವಹಿವಾಟು ೪ ಸಾವಿರ ಕೋಟಿ ರೂಪಾಯಿಯದ್ದಾಗಿದೆ.’
೨. ರಾಖಿಗಾಗಿ ಫೋಮ್, ಕಾಗದ, ದಾರ, ಮುತ್ತು ಹಾಗೂ ರಾಖಿಯ ಮೇಲಿನ ಅಲಂಕಾರದ ವಿವಿಧ ವಸ್ತುಗಳು, ಅದೇರೀತಿ ತಯಾರಾದ ರಾಖಿಯು ಚೀನಾದಿಂದ ಆಮದು ಆಗುತ್ತದೆ; ಆದರೆ ಈ ಬಾರಿ ಭಾರತ ಹಾಗೂ ಚೀನಾದ ಸಂಘರ್ಷದ ಹಿನ್ನೆಲೆಯಲ್ಲಿ ಈ ಆಮದನ್ನು ಮಾಡದಿರಲು ‘ಕ್ಯಾಟ್’ ನಿರ್ಧರಿಸಿದೆ.
೩. ದೆಹಲಿ ವಿಭಾಗದ ‘ಕ್ಯಾಟ್’ನ ಸುಶೀಲ ಕುಮಾರ ಜೈನ್ ಇವರು, ‘ಕ್ಯಾಟ್’ ಬೇರೆ ಬೇರೆ ರಾಜ್ಯಗಳಲ್ಲಿಯ ತಮ್ಮ ಸದಸ್ಯರಿಗೆ ಪಟ್ಟಣಗಳಲ್ಲಿಯ ಸ್ವಯಂಉದ್ಯೋಗ ನಿರ್ಮಿಸುವ ಸಂಸ್ಥೆಗಳು, ಮಹಿಳಾ ಸ್ವ-ಸಹಾಯ ಗುಂಪುಗಳು, ಅಂಗನವಾಡಿಯಲ್ಲಿ ಕೆಲಸ ಮಾಡುವ ಮಹಿಳೆಯರ ಸಹಾಯದಿಂದ ರಾಖಿಯನ್ನು ತಯಾರಿಸಲು ಮುಂದಾಳತ್ವವನ್ನು ತೆಗೆದುಕೊಳ್ಳಲು ಕರೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿದೆ ಹಾಗೂ ಸಂಪೂರ್ಣವಾಗಿ ಭಾರತೀಯ ರಾಖಿ ನಿರ್ಮಿಸುವ ಉದ್ದೇಶವೂ ಈಡೇರುವುದು’ ಎಂದು ಹೇಳಿದ್ದಾರೆ.