ಕೊರೋನಾ ರೋಗಕ್ಕೆ ಯೋಗ ಹಾಗೂ ಧ್ಯಾನಧಾರಣೆ ಈ ಪ್ರಾಚೀನ ಭಾರತೀಯ ಚಿಕಿತ್ಸಾಪದ್ದತಿ ಹೆಚ್ಚು ಪರಿಣಾಮಕಾರಿ ! – ಅಂತರರಾಷ್ಟ್ರೀಯ ತಜ್ಞರ ಹೇಳಿಕೆ

ಸಾವಿರಾರು ವರ್ಷಗಳ ಹಿಂದೆ ಭಾರತೀಯ ಋಷಿಮುನಿಗಳಿಗೆ ತಿಳಿದಿದ್ದ ಭಾರತೀಯ ಯೋಗ ಹಾಗೂ ಧ್ಯಾನಧಾರಣೆಯ ಮಹತ್ವವು ವಿದೇಶದಲ್ಲಿನ ತಜ್ಞರಿಗೆ ಈಗಷ್ಟೇ ತಿಳಿಯುತ್ತಿದೆ. ಇದರಿಂದ ಅವರು ಎಷ್ಟು ಹಿಂದೆ ಇದ್ದಾರೆ ಹಾಗೂ ಹಿಂದೂ ಸಂಸ್ಕೃತಿಯು ಎಷ್ಟು ಅಭಿವೃದ್ಧಿ ಹೊಂದಿದೆ, ಎಂಬುದು ಗಮನಕ್ಕೆ ಬರುತ್ತದೆ ! ಆದರೆ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಪಾಶ್ಚಾತ್ಯದ ಅಂಧಾನುಕರಣೆಯಿಂದಾಗಿ ಇಲ್ಲಿಯವರೆಗೆ ತಥಾಕಥಿತ ಪ್ರಗತಿ(ಅಧೋಗತಿ)ಪರರು ಇದನ್ನು ಹೀಯಾಳಿಸಿದ್ದು ಈಗ ಭಾರತೀಯರಿಗೆ ಗಮನಕ್ಕೆ ಬರಲಿದೆ !

ನವ ದೆಹಲಿ – ಕೊರೋನಾ ಪೀಡಿತರ ಮೇಲಿನ ಚಿಕಿತ್ಸೆಗಾಗಿ ಯೋಗ ಹಾಗೂ ಧ್ಯಾನ ಧಾರಣೆ ಈ ೨ ಪ್ರಾಚೀನ ಚಿಕಿತ್ಸಾಪದ್ದತಿಗಳು ಪರಿಣಾಮಕಾರಿಯಾಗಿವೆ ಎಂದು ಅಂತರರಾಷ್ಟ್ರೀಯ ತಜ್ಞರು ಕಂಡುಹಿಡಿದ್ದಾರೆ. ಅಮೇರಿಕಾದ ‘ಮೆಸಾಚ್ಯುಸೆಟ್ಸ್ ಆಫ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಾಜಿ’, ‘ಕ್ಯಾಲಿಫೋರ್ನಿಯಾ ಯುನಿವರ್ಸಿಟಿ’, ‘ಚೋಪಡಾ ಲೈಬ್ರೇರಿ’ ಹಾಗೂ ‘ಹಾವರ್ಡ್ ಯುನಿವರ್ಸಿಟಿ’ಯ ಸಂಶೋಧಕರು ‘ಜರ್ನಲ್ ಆಫ್ ಅಲ್ಟರನೆಟಿವ್ ಆಂಡ್ ಕಾಂಪ್ಲಿಮೆಂಟ್ರಿ ಮೆಡಿಸಿನ್’ನಲ್ಲಿ (‘ಜೆ.ಎ.ಸಿ.ಎಮ್.’ನಲ್ಲಿ) ಪ್ರಕಾಶಿಸಿದ ಲೇಖನದಲ್ಲಿ ‘ಯೋಗ ಹಾಗೂ ಧ್ಯಾನಧಾರಣೆ’ಯ ಉಪಯೋಗಗಳನ್ನು ನೀಡಿದ್ದಾರೆ. ಇವೆರಡೂ ಕೊರೋನಾ ವಿರುದ್ಧ ಹೋರಾಡಲು ಸಹಾಯಕವಾಗಿವೆ ಎಂದು ತಜ್ಞರು ಹೇಳಿದ್ದಾರೆ.


‘ಜೆ.ಎ.ಸಿ.ಎಮ್.’ನ ಮುಖ್ಯ ಸಂಪಾದಕರಾದ ಜಾನ್ ವಿಕ್ಸಿಯವರು ‘ಕೊರೋನಾದಂತಹ ಜಾಗತಿಕ ಸಂಕ್ರಮಣದ ವಿರುದ್ಧ ಹೆಚ್ಚೆಚ್ಚು ನೈಸರ್ಗಿಕ ಪದ್ದತಿಯಿಂದ ಹೇಗೆ ಚಿಕಿತ್ಸೆ ಮಾಡಬಹುದು, ಎಂಬುದರ ಬಗ್ಗೆ ತಜ್ಞರು ವಿಚಾರ ಮಾಡಬೇಕು’, ಎಂದು ಕರೆ ನೀಡಿದ್ದಾರೆ. ಇವೆರಡೂ ಕೊರೋನಾ ವಿರುದ್ಧ ಹೋರಾಡಲು ಸಹಾಯಕವಾಗಿವೆ ಎಂದು ತಜ್ಞರು ಹೇಳಿದ್ದಾರೆ.