ಕೊರೋನಾದ ಮೇಲೆ ಲಸಿಕೆ ತಯಾರಿಸಲು ಹಾಗೂ ಅದನ್ನು ಜಗತ್ತಿಗೆ ಪೂರೈಸುವ ಕ್ಷಮತೆ ಭಾರತಕ್ಕೆ ಇದೆ ! – ಬಿಲ್ ಗೆಟ್ಸ್

ನ್ಯೂಯಾರ್ಕ್ (ಅಮೇರಿಕಾ) – ಭಾರತವು ದೊಡ್ಡ ಆಕಾರದ ಹಾಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಆದ್ದರಿಂದ ಭಾರತವು ಕೊರೊನಾ ದೊಡ್ಡ ಸವಾಲವನ್ನು ಎದುರಿಸಬೇಕಾಗುತ್ತಿದೆ. ಭಾರತದ ಔಷಧಿ ಉದ್ಯಮಕ್ಕೆ ಕೇವಲ ಸ್ವಂತಕ್ಕಾಗಿ ಅಲ್ಲ, ಸಂಪೂರ್ಣ ಜಗತ್ತಿಗೆ ಕೊರೋನಾ ಮೇಲಿನ ಲಸಿಕೆಯನ್ನು ತಯಾರಿಸುವ ಕ್ಷಮತೆ ಇದೆ. ಜಗತ್ತಿನ ತುಲನೆಯಲ್ಲಿ ಭಾರತದಲ್ಲಿ ಅತೀ ಹೆಚ್ಚು ಲಸಿಕೆಯನ್ನು ನಿರ್ಮಿಸಲಾಗುತ್ತಿದೆ, ಎಂಬುದು ನಮಗೆಲ್ಲರಿಗೆ ತಿಳಿದಿದೆ. ‘ಸಿರಮ ಇನ್‌ಸ್ಟಿಟ್ಯುಟ್’ ಇದರಲ್ಲಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕೊರೋನಾದ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಭಾರತೀಯ ಔಷಧ ಸಂಸ್ಥೆಗಳು ಒಂದು ಮಹತ್ವಪೂರ್ಣ ಕಾರ್ಯವನ್ನು ಮಾಡುತ್ತಿವೆ, ಎಂದು ‘ಮೈಕ್ರೊಸಾಫ್ಟ್’ ಈ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿಯ ವಿಶ್ವವಿಖ್ಯಾತ ಸಂಸ್ಥೆಯ ಸಹ-ಸಂಸ್ಥಾಪಕರಾದ ಬಿಲ್ ಗೆಟ್ಸ್ ಇವರು ಹೊಗಳಿದ್ದಾರೆ. ಅವರು ವಾಹಿನಿಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.