ಪಾಕಿಸ್ತಾನದ ಸಿಂಧ್‌ನಲ್ಲಿ ಇಬ್ಬರು ಹಿಂದೂ ಯುವಕರ ಹತ್ಯೆ : ಅರೆಬೆಂದಾವಸ್ಥೆಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನದ ಹಿಂದೂಗಳ ಕರುಣಾಜನಕ ಸ್ಥಿತಿಯು ಭಾರತಸಹಿತ ಜಗತ್ತಿನ ಹೆಚ್ಚಿನ ದೇಶಗಳಿಗೆ ಗೊತ್ತಿದ್ದರೂ ಗಾಂಧಿವಾದಿ ಮೌನ ತಾಳಿದ್ದಾರೆ. ಭಾರತವಾದರೂ ಇದರ ಬಗ್ಗೆ ಧ್ವನಿ ಎತ್ತುವುದು ಅಗತ್ಯವಿದೆ. ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾದ ಮೇಲೆ ಜಗತ್ತಿನ ಯಾವುದೇ ದೇಶದಲ್ಲಿ ಈ ರೀತಿಯಲ್ಲಿ ಆಗಲು ಬಿಡುವುದಿಲ್ಲ !

ಮಿಟಿಯಾರಿ ಹಾಲಾ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳು ನಡೆಯುತ್ತಿವೆ. ಇಲ್ಲಿಯ ಮಿಟಿಯಾರಿ ಹಾಲಾ ಪ್ರದೇಶದಲ್ಲಿ ಮೊಹನ ಬಾಗರಿ ಹೆಸರಿನ ಹಿಂದೂ ಯುವಕನ ಅರೆಬೆಂದ ಮೃತದೇಹವು ಪತ್ತೆಯಾಗಿದೆ. ಇದರ ಮಾಹಿತಿಯನ್ನು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ರಾಹತ ಆಸ್ಟೀನ್ ಇವರು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದ್ದಾರೆ. ನ್ಯಾಯವಾದಿ ಆಸ್ಟೀನ್ ಇವರು ಈ ಬಗ್ಗೆ ಮಾತನಾಡುತ್ತಾ, ‘ಮೋಹನನ ನಾಲಿಗೆ ಕತ್ತರಿಸಲಾಗಿದೆ ನಂತರ ಆತನ ಹತ್ಯೆ ಮಾಡಿ ಬೆಂಕಿ ಹಚ್ಚಿದ್ದಾರೆ, ಎಂದು ಹೇಳಿದ್ದಾರೆ.
ಸಿಂಧ್‌ನಲ್ಲಿಯ ಉಮರಕೋಟ್ ಇಲ್ಲಿಯ ಸುನಿಲ ಕುಮಾರ ಈತನ ಶವವೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆತನನ್ನೂ ಹತ್ಯೆ ಮಾಡಿ ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.