ನೇಪಾಳಿ ಪೊಲೀಸರಿಂದ ಭಾರತೀಯ ಮಹಿಳೆ ಹಾಗೂ ಆಕೆಯ ಮಗನನ್ನು ಬಂಧಿಸಿ ಹಲ್ಲೆ

ಗಾಳಿಯಲ್ಲಿ ಗುಂಡು ಹಾರಿಸಿದರು

ಭಾರತೀಯ ನಾಗರಿಕರ ಮೇಲೆ ಹಲ್ಲೆ ಮಾಡುವಷ್ಟು ಮದವೇರಿದ ಗಡಿಯಲ್ಲಿನ ನೇಪಾಳಿ ಪೊಲೀಸರಿಗೆ ಭಾರತವು ಈ ಕೂಡಲೇ ಪಾಠ ಕಲಿಸದಿದ್ದರೆ ನಾಳೆ ಭಾರತೀಯರ ಮೇಲೆ ಇದಕ್ಕಿಂತ ದೊಡ್ಡ ದಾಳಿ ಮಾಡಬಹುದು. ಆದ್ದರಿಂದ ಭಾರತವು ಇಂತಹವರಿಗೆ ಈಗಲೇ ಪಾಠಕಲಿಸುವುದು ಅಪೇಕ್ಷಿತವಿದೆ !

ಪಾಟಲೀಪುತ್ರ – ನೇಪಾಳಿ ಪೊಲೀಸರು ಓರ್ವ ಭಾರತೀಯ ಮಹಿಳೆಯನ್ನು ಹಾಗೂ ಆಕೆಯ ಮಗನನ್ನು ಬಂಧಿಸಿ ಹಲ್ಲೆ ಮಾಡಿರುವ ಖೇದಕರ ಘಟನೆ ನಡೆದಿದೆ. ನೇಪಾಳ ಗಡಿಗೆ ತಾಗಿರುವ ಬಿಹಾರ ರಾಜ್ಯದ ಚಂಪಾರಣದಲ್ಲಿಯ ಖರಸಲಾವಾ ಪ್ರದೇಶದಲ್ಲಿ ಓರ್ವ ಮಹಿಳೆಯು ಆಕೆಯ ಮಗದೊಂದಿಗೆ ಹುಲ್ಲು ತೆಗೆಯಲು ಹೋಗಿದ್ದಳು. ಆಗ ಪೊಲೀಸರು ಆಕೆಯನ್ನು ತಡೆದರು. ಆಗ ಆಕೆಯು ‘ನಾನು ಭಾರತದ ಗಡಿಯಲ್ಲಿದ್ದೇನೆ’, ಎಂದು ನೇಪಾಳಿ ಪೊಲೀಸರಿಗೆ ಹೇಳಿದಳು. ಆಗ ಸಿಟ್ಟಿಗೆದ್ದ ನೇಪಾಳಿ ಪೊಲೀಸರು ಆ ಮಹಿಳೆಗೆ ಹಾಗೂ ಆಕೆ ಮಗನನ್ನು ಬಂಧಿಸಿದರು ಹಾಗೂ ಹಲ್ಲೆ ಮಾಡಿದರು.

ಇದರಿಂದ ಖರಸಲಾವಾ ಪ್ರದೇಶದಲ್ಲಿಯ ಸ್ಥಳೀಯ ನಾಗರಿಕರು ದೊಡ್ಡಪ್ರಮಾಣದಲ್ಲಿ ಒಟ್ಟಾದರು. ಅವರು ಅವರಿಬ್ಬರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಆಗ ನೇಪಾಳಿ ಪೊಲೀಸರ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಿರ್ಮಾಣವಾಯಿತು. ಆಗ ನೇಪಾಳಿ ನಾಗರಿಕರೂ ಅಲ್ಲಿಗೆ ಬಂದರು. ಆಗ ನೇಪಾಳಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಮಾಹಿತಿ ಸಿಕ್ಕಿದಾಕ್ಷಣ ಗಡಿ ಭದ್ರತಾ ಪಡೆಯ ಅನೇಕ ಅಧಿಕಾರಿಗಳು ಘಟನಾಸ್ಥಳಕ್ಕೆ ಧಾವಿಸಿದರು ಹಾಗೂ ಆ ಮಹಿಳೆಗೆ ಹಾಗೂ ಆಕೆಯ ಮಗನನ್ನು ನೇಪಾಳಿ ಪೊಲೀಸರಿಂದ ಬಿಡುಗಡೆ ಮಾಡಿದರು.