- ಬಕ್ರೀದ್‌ದಂದು ಪ್ರಾಣಿಗಳನ್ನು ಕೊಲ್ಲುವುದು ವೈಜ್ಞಾನಿಕವೇ? ‘ಬಕ್ರೀದ್’ಗೆ ‘ಕುರ್ಬಾನಿ’ ನೀಡದೇ ಆ ದಿನ ಶಾಕಾಹಾರ ಮಾಡಿ’, ಎಂದು ಮುಸಲ್ಮಾನರಿಗೆ ಸಲಹೆ ನೀಡುವ ಧೈರ್ಯ ಕಾಂಗ್ರೆಸ್‌ನವರಿಗೆ ಇದೆಯೇ ? ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ, ಹಿಂದೂಗಳಿಗೆ ಇಂತಹ ಪುಕ್ಕಟೆ ಸಲಹೆಗಳನ್ನು ನೀಡುವ ಕಾಂಗ್ರೆಸ್ಸಿಗರನ್ನು ಹಿಂದೂಗಳು ನ್ಯಾಯಸಮ್ಮತವಾಗಿ ವಿರೋಧಿಸಬೇಕು!
- ‘ಕಾಂಗ್ರೆಸ್ಸಿಗರು ಅಧಿಕಾರದಲ್ಲಿದ್ದಾಗ ಬಡತನವನ್ನು ನಿರ್ಮೂಲನೆ ಮಾಡಲು ಏನು ಮಾಡಿದರು? ಕಾಂಗ್ರೆಸ್ಸಿನ ಜನವಿರೋಧಿ ಆಡಳಿತದಿಂದಾಗಿ ಭಾರತದಲ್ಲಿ ಬಡತನ ಇನ್ನೂ ಇದೆ’ ಎಂದು ಹೇಳುವುದರಲ್ಲಿ ತಪ್ಪೇನಿದೆ ?
- ವಿಜ್ಞಾನವು ಈಗ ಸಾವಿರಾರು ವರ್ಷಗಳ ಹಿಂದೆ ಹಿಂದೂ ಧರ್ಮ ಹೇಳಿದ ಕೆಲವು ವಿಷಯಗಳನ್ನು ಮಾತ್ರ ತಿಳಿದುಕೊಳ್ಳಲು ಪ್ರಾರಂಭಿಸಿದೆ. ಹಿಂದೂ ಹಬ್ಬಗಳ ಹಿಂದಿನ ವಿಜ್ಞಾನವನ್ನು ತಿಳಿದುಕೊಳ್ಳಲು ಹಿಂದೂ ಧರ್ಮಕ್ಕನುಸಾರ ಸಾಧನೆ ಮಾಡುವುದು ಅವಶ್ಯಕವಾಗಿದೆ. ರಾಜಕಾರಣಿಗಳು ಮತ್ತು ಕಾಂಗ್ರೆಸ್ ನಾಯಕರು ಕೂಡ ಹಿಂದೂ ಧರ್ಮವನ್ನು ದ್ವೇಷಿಸುತ್ತಾರೆ, ಆದ್ದರಿಂದ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ !
ಬೆಂಗಳೂರು – ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವುದು ಅವೈಜ್ಞಾನಿಕವಾಗಿದೆ. ಅದರ ಬದಲು ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಬೇಕು, ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ ೪೦ ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ; ಹಾಗಾಗಿ ಅಂತಹವರಿಗೆ ಹಾಲು ನೀಡಿ, ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಪುಕ್ಕಟೆ ಸಲಹೆ ನೀಡಿದ್ದಾರೆ. ಆ ಬಗ್ಗೆ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ. ಅದನ್ನು ಹಿಂದೂ ಧರ್ಮಪ್ರೇಮಿಗಳು ವಿರೋಧಿಸುತ್ತಿದ್ದಾರೆ.
ಹಾಲಿನ ಕಲಬೆರಕೆ ಮತ್ತು ರಸ್ತೆಗೆ ಎಸೆಯುವ ಹಾಲಿನ ಬಗ್ಗೆ ಪ್ರಗತಿ (ಅಧೋಗತಿ)ಪರರು ಏಕೆ ಸುಮ್ಮನಿರುತ್ತಾರೆ ? – ಹಿಂದೂ ಜನಜಾಗೃತಿ ಸಮಿತಿ
शिवलिंग पे दूध न बहाएं – यह ज्ञान बांटनेवाले वामपंथी देखे,
महाराष्ट्र में सेक्युलर दल दूध आंदोलन के नाम पर कैसे दुध बहा रहे है !@_dharam_vir @ReclaimTemples @VikasSaraswat @HinduJagrutiOrg pic.twitter.com/PcmrNYGna3— 🚩 Ramesh Shinde 🇮🇳 (@Ramesh_hjs) July 23, 2020
ಹಾಲಿನ ಬೆಲೆ ಹೆಚ್ಚಿಸಲು ಪ್ರತಿಭಟನೆ ಹೆಸರಿನಲ್ಲಿ ಲಕ್ಷಗಟ್ಟಲೆ ಲೀಟರ್ ಹಾಲು ಬೀದಿಯಲ್ಲಿ ಸುರಿಯುವಾಗ ಹೀಗೆ ಕರೆ ನೀಡುವವರು ಏಕೆ ಮೌನವಾಗಿರುತ್ತಾರೆ ? ಅದಲ್ಲದೇ ಶೇಕಡಾ ೮೦ ರಷ್ಟು ಹಾಲನ್ನು ಕಲಬೆರಕೆ ಮಾಡಿ ಮಾರಾಟ ಮಾಡುವ ಮೂಲಕ ಲಕ್ಷಾಂತರ ಮಕ್ಕಳ ಜೀವನ ಹಾಳು ಮಾಡುತ್ತಿರುವ ಸಮಸ್ಯೆಯ ಬಗ್ಗೆ ಏಕೆ ಮಾತನಾಡುವುದಿಲ್ಲ ?, ಎಂದು ಹಿಂದೂ ಜನಜಾಗೃತಿ ಸಮಿತಿಯು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಸತೀಶ ಜಾರಕಿಹೊಳಿಯವರನ್ನು ಪ್ರಶ್ನಿಸಿದೆ.
ಈ ಪತ್ರಿಕಾಪ್ರಕಟಣೆಯಲ್ಲಿ ಮುಂದಿನಂತೆ ಹೇಳಲಾಗಿದೆ.
೧. ಭಾರತೀಯ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕನ್ನು ನೀಡಿದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ.
೨. ಅಪೌಷ್ಟಿಕತೆಯಿಂದ ಸಾಯುತ್ತಿರುವ ಬಡ ಮಕ್ಕಳಿಗೆ ಹಾಲು ಸಿಗದಿರಲು ಸರ್ಕಾರ ಅವರಿಗೆ ಸರಿಯಾದ ಸೌಲಭ್ಯ ಮತ್ತು ಪರಿಹಾರಗಳ ತಲುಪದಿರುವುದರ ಪರಿಣಾಮವಾಗಿದೆ. ಈ ರೀತಿ ಮೂಲ ಸಮಸ್ಯೆಯನ್ನು ಪರಿಹರಿಸದೆ ಕೇವಲ ಮೇಲುಮೇಲಿನ ಉಪಾಯವೆಂದು ನಾಗಪಂಚಮಿ ಅಥವಾ ಮಹಾಶಿವರಾತ್ರಿಯ ಕೇವಲ ಒಂದು ದಿನದ ಹಾಲನ್ನು ನೀಡುವ ಮೂಲಕ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಬಹುದೇ?
೩. ಎಲ್ಲ ಹಿಂದೂಗಳು ಇದನ್ನು ಸಂವಿಧಾನದ ಮಾರ್ಗದಿಂದ ವಿರೋಧಿಸಬೇಕು ಹಾಗೂ ಜಾರಕಿಹೊಳಿಯವರು ಈ ಹೇಳಿಕೆ ಬಗ್ಗೆ ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು, ಎಂದೂ ಸಮಿತಿಯು ಕರೆ ನೀಡಿದೆ.