ಜಗದ್ಗುರು ಭಗವಾನ ಶ್ರೀಕೃಷ್ಣನ ಜೀವನದ ವೈಶಿಷ್ಟ್ಯಪೂರ್ಣ ಅಂಗಗಳು !

೧. ಶ್ರೀಕೃಷ್ಣನ ಕುಟುಂಬ

ಅ. ‘ಶ್ರೀಕೃಷ್ಣನ ಸಾಕು ತಂದೆ ನಂದ ಇವರು ‘ಆಭೀರ’ ಜಾತಿಯವರಾಗಿದ್ದರು. ಪ್ರಸ್ತುತ ಅವರನ್ನು ‘ಅಹೀರ’ ಈ ಹೆಸರಿನಿಂದ ಗುರುತಿಸಲಾಗುತ್ತದೆ. ಶ್ರೀಕೃಷ್ಣನಿಗೆ ಜನ್ಮ ನೀಡಿದ ತಂದೆಯ ಹೆಸರು ವಸುದೇವ ಎಂದಿತ್ತು. ಅವರು ಆರ್ಯರ ಪ್ರಸಿದ್ಧ ‘ಪಂಚಜನ’ರಲ್ಲಿನ ಒಂದಾದ ‘ಯದು’ ಗಣ ಕ್ಷತ್ರೀಯನಾಗಿದ್ದರು. ಆ ಸಮಯದಲ್ಲಿ ಅವರನ್ನು ‘ಯಾದವ’ ಎಂದು ಸಂಬೋಧಿಸಲಾಗುತ್ತಿತ್ತು.

ಆ. ಶ್ರೀಕೃಷ್ಣನ ಮುತ್ತಜ್ಜಿ ‘ಮಾರಿಷಾ’ ಮತ್ತು ಮಲತಾಯಿ ರೋಹಿಣಿ (ಬಲರಾಮನ ತಾಯಿ) ‘ನಾಗ’ ಪಂಗಡದವರಾಗಿದ್ದರು.

ಇ. ವಸುದೇವನು ಶ್ರೀಕೃಷ್ಣನ ಜನ್ಮವಾದ ನಂತರ ಅವನನ್ನು ಗೋಕುಲದಲ್ಲಿ ನಂದನ ಬಳಿ ತಲುಪಿಸಿದನು ಮತ್ತು ಯಶೋದೆಯು ಜನ್ಮ ನೀಡಿದ ಹೆಣ್ಣು ಮಗುವನ್ನು ಅವನು ಮಥುರೆಗೆ ತಂದನು. ಈ ಯಶೋದಾ ಪುತ್ರಿಯ ಹೆಸರು ‘ಎಕಾನಂಶಾ’ ಎಂದಿತ್ತು. ಅವಳನ್ನು ಇಂದಿಗೂ ‘ವಿಂಧ್ಯವಾಸಿನಿ ದೇವಿ’ ಎಂಬ ಹೆಸರಿನಿಂದ ಪೂಜಿಸಲಾಗುತ್ತಿದೆ.

ಈ. ಜೈನ ಪರಂಪರೆಗನುಸಾರ ಶ್ರೀಕೃಷ್ಣನ ಮಲಸಹೋದರನ ಮಗನ ಹೆಸರು ತೀರ್ಥಂಕರ ನೇಮಿನಾಥ ಎಂದಿತ್ತು. ಅವರು ಹಿಂದೂ ಪರಂಪರೆಯಲ್ಲಿ ‘ಘೋರ ಅಂಗಿರಸ’ ಈ ಹೆಸರಿನಿಂದ ಪ್ರಸಿದ್ಧರಾಗಿದ್ದರು.

೨. ರಾಧಾ

ಶ್ರೀಕೃಷ್ಣನ ರಾಧೆಯ ಉಲ್ಲೇಖ ಮಹಾಭಾರತ, ಹರಿವಂಶಪುರಾಣ, ವಿಷ್ಣುಪುರಾಣ ಮತ್ತು ಭಾಗವತಪುರಾಣದಲ್ಲಿ ರಾಧೆಯ ಉಲ್ಲೇಖವಿಲ್ಲ. ಬ್ರಹ್ಮವೈವರ್ತ ಪುರಾಣ, ಗೀತ ಗೋವಿಂದ ಮತ್ತು ಜನಶ್ರುತಿ ಇವುಗಳಲ್ಲಿ ಅವರ ಉಲ್ಲೇಖವಿದೆ.

೩. ಶ್ರೀಕೃಷ್ಣನ ದೇಹದ ವೈಶಿಷ್ಟ್ಯಗಳು

೩ ಅ. ದೇಹಕ್ಕೆ ಸುಗಂಧ ಬರುವುದು : ಶ್ರೀಕೃಷ್ಣನ ಬಣ್ಣ ಮೇಘಶ್ಯಾಮಲವಾಗಿತ್ತು. ಅವನ ದೇಹದಿಂದ ಒಂದು ರೀತಿಯ ಮೋಹಕ ಗಂಧ ಹೊರಸೂಸುತ್ತಿತ್ತು. ಆದುದರಿಂದ ರಹಸ್ಯ ಅಭಿಯಾನದ ಸಮಯದಲ್ಲಿ ಉದಾ. ಜರಾಸಂಧನ ಆಕ್ರಮಣದ ಸಮಯದಲ್ಲಿ ಶ್ರೀಕೃಷ್ಣನಿಗೆ ಈ ಗಂಧವನ್ನು ಅಡಗಿಸಲು ಪ್ರಯತ್ನ ಮಾಡಬೇಕಾಯಿತು.

ದ್ರೌಪದಿಯಲ್ಲಿಯೂ ಈ ವೈಶಿಷ್ಟ್ಯವಿತ್ತು. ಅವಳು ಅಜ್ಞಾನವಾಸದಲ್ಲಿ ಸೈರಂಧ್ರೀಯ ಕಾರ್ಯವನ್ನು ಆರಿಸಿಕೊಂಡಳು. ಇದರಿಂದ ಚಂದನ, ಉಟಣೆ, ಅತ್ತರ ಇತ್ಯಾದಿಗಳಲ್ಲಿ ಅವಳ ಶರೀರದಿಂದ ಹೊರಸೂಸುವ ಗಂಧವು ಅಡಗಿಹೋಗುತ್ತಿತ್ತು.

೩ ಆ. ನಮ್ಯತೆ (ಫ್ಲೆಕ್ಸಿಬಲಿಟಿ) : ಶ್ರೀಕೃಷ್ಣನ ಸ್ನಾಯುವು (ಮಾಂಸ ಖಂಡ) ಮೃದುವಾಗಿತ್ತು; ಆದರೆ ಯುದ್ಧದ ಸಮಯದಲ್ಲಿ ಅದು ಸಡಿಲಗೊಂಡು ಪ್ರಸರಣವಾಗುತ್ತಿತ್ತು. ಇದರಿಂದ ಸಾಮಾನ್ಯವಾಗಿ ಹೆಣ್ಣುಮಕ್ಕಳಂತೆ ಕಂಡು ಬರುವ ಅವನ ಲಾವಣ್ಯಮಯ ಶರೀರ ಯುದ್ಧದ ಸಮಯದಲ್ಲಿ ಅತಿಶಯ ಕಠೋರವಾಗಿ ಕಂಡು ಬರುತ್ತಿತ್ತು. ಈ ದೃಷ್ಟಿಯಿಂದ ಕರ್ಣ, ದ್ರೌಪದಿ ಮತ್ತು ಶ್ರೀಕೃಷ್ಣ ಇವರ ಶರೀರ ‘ಮ್ಯೂಟೆಂಟ್’ (ಅತಿಮಾನವೀಯ) ಆಗಿತ್ತು.

೪. ಶಿಕ್ಷಣ ಮತ್ತು ಸಾಧನೆ

ಅ. ಶ್ರೀಕೃಷ್ಣನು ಔಪಚಾರಿಕ ಶಿಕ್ಷಣವನ್ನು ಕೆಲವೇ ತಿಂಗಳೊಳಗೆ ಪೂರ್ಣಗೊಳಿಸಿದನು.

ಆ. ‘ಘೋರ ಅಂಗಿರಸವೆಂದರೆ ನೇಮಿನಾಥರ ಬಳಿ ಶ್ರೀಕೃಷ್ಣನು ಸಾಧನೆಯನ್ನು ಮಾಡಿದ್ದನು’, ಎಂದು ತಿಳಿಯಲಾಗುತ್ತದೆ.

೫. ಆಧುನಿಕ ‘ಮಾರ್ಶಲ್ ಆರ್ಟ್’ ಈ ವಿಧದ ಜನಕ

ಅ. ‘ಅನುಶ್ರುತಿ’ಗನುಸಾರ ಶ್ರೀಕೃಷ್ಣನು ‘ಮಾರ್ಶಲ್ ಆರ್ಟ್’ನ ವಿಕಾಸವನ್ನು ಬ್ರಜ ಕ್ಷೇತ್ರದ ವನಗಳಲ್ಲಿ ಮಾಡಿದ್ದನು. ದಾಂಡಿಯಾ ರಾಸ ಇದು ಅದರದ್ದೇ ರೂಪವಾಗಿದೆ. ಶ್ರೀಕೃಷ್ಣನಿಗೆ ‘ಕಲಾರಿಪಾಯಟ್ಟು’ ದ (ಕೇರಳದ ಒಂದು ಪ್ರಾಚೀನ ಯುದ್ಧವಿದ್ಯೆ) ಮೊದಲ ಆಚಾರ್ಯನೆಂದು ತಿಳಿಯಲಾಗುತ್ತದೆ. ಆದುದರಿಂದ ‘ನಾರಾಯಣಿ ಸೇನಾ’ ಭಾರತದಲ್ಲಿನ ಎಲ್ಲಕ್ಕಿಂತ ಘೋರ ಸಂಹಾರಕ ಸೇನೆಯಾಗಿತ್ತು.

ಆ. ಶ್ರೀಕೃಷ್ಣನು ‘ಕಲಾರಿಪಾಯಟ್ಟೂ’ ದ ಬುನಾದಿಯನ್ನು ಹಾಕಿದನು. ನಂತರ ಬೋಧಿಧರ್ಮನ ಮಾರ್ಗಕ್ರಮಣ ಮಾಡುತ್ತಾ ಇಂದಿನ ಮಾರ್ಶಲ್ ಆರ್ಟದ ರೂಪದಲ್ಲಿ ಈ ಶಾಸ್ತ್ರವು ವಿಕಸಿತವಾಯಿತು.

೬. ಶ್ರೀಕೃಷ್ಣನು ವಾಸ್ತವ್ಯವಿದ್ದ ನಗರ

ಶ್ರೀಕೃಷ್ಣನು ೨ ನಗರಗಳನ್ನು ಸ್ಥಾಪಿಸಿದ್ದನು – ದ್ವಾರಕಾ (ಮೊದಲಿನ ಕುಶಾವತಿ) ಮತ್ತು ಪಾಂಡವ ಪುತ್ರರ ಮಾಧ್ಯಮದಿಂದ ಇಂದ್ರಪ್ರಸ್ಥ (ಮೊದಲಿನ ಖಾಂಡವಪ್ರಸ್ಥ)

೭. ಶ್ರೀಕೃಷ್ಣನ ರಥ ಮತ್ತು ಅಶ್ವ

ಶ್ರೀಕೃಷ್ಣನ ರಥದ ಹೆಸರು ‘ಜೈತ್ರ’ ಎಂದಿತ್ತು ಮತ್ತು ಅವನ ಸಾರಥಿಯ ಹೆಸರು ದಾರುಕ/ಬಾಹುಕ ಎಂದಿತ್ತು. ಶೈವ್ಯ, ಸುಗ್ರೀವ, ಮೇಘಪುಷ್ಪ ಮತ್ತು ಬಲಾಹಕ ಇವು ಅವನ ಅಶ್ವಗಳ ಹೆಸರಾಗಿತ್ತು.

೮. ಶ್ರೀಕೃಷ್ಣನ ಆಯುಧಗಳು

ಅ. ಶ್ರೀಕೃಷ್ಣನ ಧನುಷ್ಯದ ಹೆಸರು ‘ಶಾರಂಗ’ ಮತ್ತು ಮುಖ್ಯ ಆಯುಧವಾದ ಚಕ್ರದ ಹೆಸರು ‘ಸುದರ್ಶನ’ ಎಂದಿತ್ತು. ಈ ಚಕ್ರವು ಲೌಕಿಕ, ದಿವ್ಯಾಸ್ತ್ರ ಮತ್ತು ದೇವಾಸ್ತ್ರ, ಹೀಗೆ ಮೂರು ರೂಪಗಳಲ್ಲಿ ಕಾರ್ಯವನ್ನು ಮಾಡಬಹುದಾಗಿತ್ತು. ಅವನ ಯೋಗ್ಯತೆಗೆ ಸಮವಿದ್ದ ೨ ವಿಧ್ವಂಸಕ ಅಸ್ತ್ರಗಳಿದ್ದವು – ಪಾಶುಪತಾಸ್ತ್ರ (ಶಿವ, ಶ್ರೀಕೃಷ್ಣ ಮತ್ತು ಅರ್ಜುನರ ಕಡೆಗಿದ್ದವು.) ಮತ್ತು ಪ್ರಸ್ವಪಾಸ್ತ್ರ. (ಶಿವ, ವಸುಗಣ, ಭೀಷ್ಮ ಮತ್ತು ಶ್ರೀಕೃಷ್ಣ ಇವರ ಕಡೆಗಿದ್ದವು.)

ಆ. ಕೃಷ್ಣನ ಖಡ್ಗದ ಹೆಸರು ‘ನಂದಕ’, ಗಧೆಯ ಹೆಸರು ‘ಕೌಮೌದಕಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು. ಅದು ಗುಲಾಬಿ ಬಣ್ಣದಾಗಿತ್ತು.

೯. ಸರ್ವಶ್ರೇಷ್ಠ ಧನುರ್ಧರ

‘ಅರ್ಜುನನು ಸರ್ವಶ್ರೇಷ್ಠ ಧನುರ್ಧರನಾಗಿದ್ದನು’, ಎಂದು ತಿಳಿಯಲಾಗುತ್ತದೆ; ಆದರೆ ವಾಸ್ತವದಲ್ಲಿ ಶ್ರೀಕೃಷ್ಣನು ಈ ವಿದ್ಯೆಯಲ್ಲಿ ಸರ್ವಶ್ರೇಷ್ಠನಾಗಿದ್ದನು ಮತ್ತು ಅದು ಸಿದ್ಧವೂ ಆಗಿತ್ತು. ಮದ್ರ ರಾಜಕುಮಾರಿ ಲಕ್ಷ್ಮಣಾ ಇವಳ ಸ್ವಯಂವರದಲ್ಲಿನ ಪ್ರತಿಜ್ಞೆಯು ದ್ರೌಪದಿಯ ಸ್ವಯಂವರದಲ್ಲಿನ ಪ್ರತಿಜ್ಞೆಗಿಂತಲೂ ಕಠಿಣವಾಗಿತ್ತು. ಆಗ ಕರ್ಣ ಮತ್ತು ಅರ್ಜುನರಿಬ್ಬರೂ ವಿಫಲಗಿದ್ದರು. ಆಗ ಶ್ರೀಕೃಷ್ಣನು ಗುರಿಯನ್ನು ಭೇದಿಸಿ ಲಕ್ಷ್ಮಣಾಳ ಇಚ್ಛೆಯನ್ನು ಪೂರ್ಣಗೊಳಿಸಿದನು. ಲಕ್ಷ್ಮಣಾಳು ಸಹ ಶ್ರೀಕೃಷ್ಣನನ್ನು ಮೊದಲೇ ಪತಿಯೆಂದು ನಂಬಿದ್ದಳು.

೧೦. ಶ್ರೀಕೃಷ್ಣನು ಮಾಡಿದ ಯುದ್ಧಗಳು

ಅ. ಶ್ರೀಕೃಷ್ಣನು ಅನೇಕ ಯುದ್ಧಗಳ ಸಂಚಾಲನೆಯನ್ನು ಮಾಡಿದನು; ಆದರೆ ಅವುಗಳಲ್ಲಿನ ೩ ಎಲ್ಲಕ್ಕಿಂತ ಹೆಚ್ಚಿನ ಭಯಂಕರ ಯುದ್ಧಗಳಾಗಿದ್ದವು – ಮಹಾಭಾರತ, ಜರಾಸಂಧ ಮತ್ತು ಕಾಲಯವನ ಇವರುಗಳ ವಿರುದ್ಧ, ಹಾಗೆಯೇ ನರಕಾಸುರನ ವಿರುದ್ಧ

ಆ. ಶ್ರೀಕೃಷ್ಣನ ಜೀವನದಲ್ಲಿ ಎಲ್ಲಕ್ಕಿಂತ ಭಯಾನಕ ದ್ವಂದ್ವ ಯುದ್ಧ ಸುಭದ್ರೆಯ ಪ್ರತಿಜ್ಞೆಯಿಂದಾಗಿ ಅರ್ಜುನನೊಂದಿಗೆಯಾಯಿತು. ಅದರಲ್ಲಿ ಇಬ್ಬರೂ ಕ್ರಮವಾಗಿ ಎಲ್ಲಕ್ಕಿಂತ ವಿನಾಶಕ ಶಸ್ತ್ರಗಳಾದ ಸುದರ್ಶನಚಕ್ರ ಮತ್ತು ಪಾಶುಪತಾಸ್ತ್ರ ಉಪಯೋಗಿಸಿದ್ದರು. ನಂತರ ದೇವತೆಗಳ ಮಧ್ಯಸ್ಥಿಕೆಯಿಂದ ಇಬ್ಬರೂ ಶಾಂತರಾದರು.

೧೧. ಶ್ರೀಕೃಷ್ಣನು ಮಾಡಿದ ರಾಕ್ಷಸರ ವಧೆ

ಅ. ಶ್ರೀಕೃಷ್ಣ ೧೬ ವರ್ಷದವನಿದ್ದಾಗ ಅವನು ವಿಶ್ವಪ್ರಸಿದ್ಧ ಚಾಣೂರ ಮತ್ತು ಮುಷ್ಟಿಕರಂತಹ ಮಲ್ಲರ ವಧೆಯನ್ನು ಮಾಡಿದನು.

ಆ. ಅವನು ಮಥುರೆಯಲ್ಲಿ ದುಷ್ಟ ರಜಕನ ತಲೆಯನ್ನು ಕೈಯಿಂದ ಪ್ರಹಾರ ಮಾಡಿ ಕತ್ತರಿಸಿದ್ದನು.

ಇ. ಶ್ರೀಕೃಷ್ಣನು ಆಸಾಮದಲ್ಲಿ ಬಾಣಾಸುರನೊಂದಿಗೆ ಯುದ್ಧವನ್ನು ಮಾಡಿದನು. ಆಗ ಭಗವಾನ ಶಿವನೊಂದಿಗೆ ಯುದ್ಧವನ್ನು ಮಾಡುವಾಗ ‘ಮಾಹೇಶ್ವರ ಜ್ವರಾ’ನ ವಿರುದ್ಧ ‘ವೈಷ್ಣವ ಜ್ವರಾ’ ದ ಪ್ರಯೋಗ ಮಾಡಿ ವಿಶ್ವದಲ್ಲಿ ಮೊದಲ ‘ಜೈವಿಕ ಯುದ್ಧ’ವನ್ನು ಮಾಡಿದ್ದನು.

೧೨. ಶ್ರೀಕೃಷ್ಣನ ಕೊನೆಯ ದಿನಗಳು

ಅ. ಕೊನೆಯ ವರ್ಷಗಳನ್ನು ಬಿಟ್ಟರೆ ಶ್ರೀಕೃಷ್ಣನು ದ್ವಾರಕೆಯಲ್ಲಿ ೬ ತಿಂಗಳಿಗಿಂತ ಹೆಚ್ಚು ಸಮಯ ಎಂದಿಗೂ ಇರಲಿಲ್ಲ.

ಆ. ಶ್ರೀಕೃಷ್ಣನು ಪರಮಧಾಮಕ್ಕೆ ಹೋಗುವ ವೇಳೆ ಅವನ ಒಂದೂ ಕೂದಲು ಬೆಳ್ಳಗಾಗಿರಲಿಲ್ಲ, ಹಾಗೆಯೇ ಅವನ ದೇಹದಲ್ಲಿ ಒಂದೂ ನೆರಿಗೆ ಇರಲಿಲ್ಲ.

ಇ. ಶ್ರೀಕೃಷ್ಣನ ಜನ್ಮದ ಸಮಯ ಮತ್ತು ಅವನ ವಯಸ್ಸಿನ ಬಗ್ಗೆ ಪುರಾಣಗಳು ಮತ್ತು ಆಧುನಿಕ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಅವನ ಆಯುಷ್ಯ ೧೨೫ ವರ್ಷಗಳಿತ್ತು, ಎಂದರೆ ಕೆಲವು ಜನರು ೧೧೦ ವರ್ಷಗಳಿದ್ದವು ಎಂದು ಹೇಳುತ್ತಾರೆ. ಎರಡನೆಯ ಅಭಿಪ್ರಾಯ ಹೆಚ್ಚು ಯೋಗ್ಯವೆನಿಸುತ್ತದೆ.

೧೩. ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆಯ ರೂಪದಲ್ಲಿ ಆಧ್ಯಾತ್ಮಿಕತೆಯ ವೈಜ್ಞಾನಿಕ ವ್ಯಾಖ್ಯೆಯನ್ನು ಎಲ್ಲರೆದುರು ಇಟ್ಟಿದ್ದಾನೆ. ಅದು ಮಾನವತೆಗಾಗಿ ಆಶೆಯ ಎಲ್ಲಕ್ಕಿಂತ ದೊಡ್ಡ ಸಂದೇಶವಾಗಿದೆ.’

(ಆಧಾರ : ಜಾಲತಾಣ)

ಭಗವಾನ ಶ್ರೀಕೃಷ್ಣನು ಏಕೆ ಅವತಾರ ತಾಳಿದನು ?

೧. ಯದುಕುಲದ ಕೀರ್ತಿಯನ್ನು ವೃದ್ಧಿಸಲು

೨. ಪೂರ್ವಜನ್ಮದಲ್ಲಿ ದೇವಕಿ ಮತ್ತು ವಸುದೇವ (ಸುತಪಾ ಮತ್ತು ಪೃಶ್ನಿ) ಇವರಿಗೆ ನಿಮ್ಮ ಉದರದಲ್ಲಿ ಜನಿಸುವೆನು, ಎಂದು ವರ ನೀಡಿದ್ದನು.

೩. ಜಗತ್ತಿನ ಕಲ್ಯಾಣ ಮಾಡುವುದು

೪. ದುಷ್ಟರ ಮರ್ದನ ಮತ್ತು ಸಾಧುಗಳ ರಕ್ಷಣೆ ಮಾಡುವುದು

೫. ಧರ್ಮಸಂಸ್ಥಾಪನೆ – ಧರ್ಮಾಚರಣೆ ಮಾಡಲು ಪ್ರವೃತ್ತಿ ನಿರ್ಮಿಸುವುದು

೬. ಲೀಲೆ ಮಾಡಿ ಲೋಕಗಳಲ್ಲಿ ಭಕ್ತಿಭಾವ ನಿರ್ಮಿಸುವುದು

೭. ಭಕ್ತರ ಗುಣಗಳನ್ನು ಸ್ತುತಿಸುವುದು

೮. ಭಕ್ತರ ಸದ್ಗುಣಗಳನ್ನು ವೃದ್ಧಿಸುವುದು

೯. ನಾಮಸ್ಮರಣೆಯಾಗಬೇಕೆಂದು ಜನರಿಗೆ ನಾಮರೂಪ ನೀಡುವುದು

೧೦. ಭಕ್ತರಿಗೆ ಸಂಕಟದಲ್ಲಿ ದರ್ಶನ ನೀಡಿದ್ದರಿಂದ ಭಗವಂತಪ್ರೀತಿಯು ಪ್ರತಿಕ್ಷಣ ವೃದ್ಧಿಸುವುದು (ನಾರದ ಒಬ್ಬನಿಗೆ ದರ್ಶನ ನೀಡಿದನು.)

ಸಾಮಾನ್ಯವಾಗಿ ನಿರಾಕಾರ ನಿರ್ಗುಣ ಸ್ವರೂಪದ ಜ್ಞಾನ ಮತ್ತು ಶ್ರದ್ಧೆ ನಿರ್ಮಾಣವಾಗುವುದು ಕಠಿಣವಿರುತ್ತದೆ; ಆದ್ದರಿಂದ ಭಗವಂತನು ಅವತರಿಸುತ್ತಾನೆ. – ಏಕನಾಥಿ ಭಾಗವತ