ಎಲ್ಲೆಡೆಯ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಆಪತ್ಕಾಲದ ಪೂರ್ವತಯಾರಿಯೆಂದು ಸನಾತನದ ಧರ್ಮಪ್ರಸಾರ ಕಾರ್ಯಕ್ಕಾಗಿ ಕನಿಷ್ಟ ೧ ಸಾವಿರ ಸೈಕಲ್‌ಗಳ ಆವಶ್ಯಕತೆಯಿದ್ದು ಅವುಗಳ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಿರಿ ಅಥವಾ ಸುಸ್ಥಿತಿಯಲ್ಲಿರುವ ಸೈಕಲ್‌ಗಳನ್ನು ಅರ್ಪಿಸಿ !

‘ಆಪತ್ಕಾಲದಲ್ಲಿ ಪೆಟ್ರೋಲ್, ಡಿಝೆಲ್ ಮುಂತಾದ ಇಂಧನಗಳ ಕೊರತೆಯಾಗಬಹುದು. ಇನ್ನು ಮುಂದಿನ ದಿನಗಳು ಕಳೆದಂತೆ ಇಂಧನವೂ ಸಿಗಲಾರದು. ಆಗ ಇಂತಹ ಇಂಧನಗಳಿಂದ ನಡೆಯುವ ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಲ್ಲಿ ಉಪಯೋಗವಾಗುವುದಿಲ್ಲ. ಇಂತಹ ಸಮಯದಲ್ಲಿ ಪ್ರವಾಸ ಮಾಡುವುದು, ರೋಗಿಯನ್ನು ವೈದ್ಯರಲ್ಲಿಗೆ ಕರೆದೊಯ್ಯುವುದು, ಸಾಮಾನುಗಳನ್ನು ತರುವುದು ಇತ್ಯಾದಿ ಕಾರಣಗಳಿಗಾಗಿ ಸೈಕಲ್ ಉಪಯುಕ್ತವಾಗುವುದು. ‘ಸೈಕಲ್’ ಇಂಧನವಿಲ್ಲದೇ ನಡೆಯುವ ಸಾರಿಗೆಯ ಏಕೈಕ ಸಾಧನವಾಗಿದೆ. ಸೈಕಲ್‌ಗಳ ನಿರ್ವಹಣೆಗಾಗಿ (ಮೆಂಟೆನೆನ್ಸ್‌ಗಾಗಿ) ಇತರ ವಾಹನಗಳ ತುಲನೆಯಲ್ಲಿ ಅತಿ ಕಡಿಮೆ ಖರ್ಚು ಬರುತ್ತದೆ. ‘ಸೈಕಲ್‌ಗಳ ನಿರ್ವಹಣೆಯನ್ನು ಹೇಗೆ ಮಾಡಬೇಕು ?’, ಎಂದು ಕಲಿತರೆ ಅದನ್ನು ಯಾರಿಗಾದರೂ ಮಾಡಲು ಬರುತ್ತದೆ. ಕಡಿಮೆ ದೂರದ ಪ್ರವಾಸ ಮತ್ತು ಹೆಚ್ಚುಕಡಿಮೆ ಸರಕುಸಾಗಾಣಿಕೆ ಮಾಡಲು ಸೈಕಲ್ ಉಪಯೋಗಿಸುವುದು ಅನುಕೂಲಕರವಾಗಿದೆ.

೧. ಧರ್ಮಪ್ರಸಾರದ ಕಾರ್ಯಕ್ಕಾಗಿ ಕನಿಷ್ಟ ೧ ಸಾವಿರ ಸೈಕಲ್‌ಗಳ ಆವಶ್ಯಕತೆ !

‘ಆಪತ್ಕಾಲದ ಸ್ಥಿತಿಯು ಯಾವಾಗ ಉದ್ಭವಿಸುವುದು ?’, ಎಂದು ಹೇಳಲು ಆಗುವುದಿಲ್ಲ. ಆದುದರಿಂದ ಆಪತ್ಕಾಲದ ಪೂರ್ವ ತಯಾರಿಯೆಂದು ಸನಾತನದ ಧರ್ಮಪ್ರಸಾರ ಕಾರ್ಯಕ್ಕಾಗಿ ಸೈಕಲ್ ಲಭ್ಯವಾಗುವುದು ಆವಶ್ಯಕವಾಗಿದೆ. ಒಟ್ಟು ಸಾಧಕರ ಸಂಖ್ಯೆಯ ಬಗ್ಗೆ ವಿಚಾರ ಮಾಡಿದರೆ ಸದ್ಯ ಪುರುಷರಿಗಾಗಿ ಉಪಯೋಗಕ್ಕೆ ಬರುವ ೪೦೦ ಮತ್ತು ಮಹಿಳೆಯರು ಉಪಯೋಗಿಸುವಂತಹ ೬೦೦ ಹೀಗೆ ಒಟ್ಟು ೧ ಸಾವಿರ ಸೈಕಲ್‌ಗಳ ಆವಶ್ಯಕತೆಯಿದೆ. ಒಂದು ಸೈಕಲ್‌ನ ಅಂದಾಜು ಬೆಲೆ ೫ ಸಾವಿರ ರೂಪಾಯಿಗಳಿವೆ. ೧ ಸಾವಿರ ಸೈಕಲ್‌ಗಳ ಖರೀದಿಗಾಗಿ ೫೦ ಲಕ್ಷ ರೂಪಾಯಿಗಳ ಖರ್ಚಿದೆ. ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳ ಬಳಿ ಸುಸ್ಥಿತಿಯಲ್ಲಿರುವ ಸೈಕಲ್‌ಗಳಿದ್ದರೆ ಅವುಗಳನ್ನು ಅರ್ಪಣೆ ಸ್ವರೂಪದಲ್ಲಿ ನೀಡಬಹುದು. ‘ಗೇರ್’ನ ಆಧುನಿಕ ಪ್ರಕಾರದ ಸೈಕಲ್ ಇದ್ದರೆ ಅದನ್ನೂ ಅರ್ಪಣೆ ನೀಡಬಹುದು.

೨. ಸೈಕಲ್‌ನ ಬಿಡಿ ಭಾಗಗಳು ಸಹ ಬೇಕಿವೆ !

ಸೈಕಲ್‌ನೊಂದಿಗೆ ಅದರ ಟಯರ್, ಟ್ಯೂಬ್, ಗಾಳಿಯನ್ನು ತುಂಬಿಸುವ ಪಂಪ್, ಪಂಕ್ಚರ್ ತೆಗೆಯುವ ಕಿಟ್ (ಸೊಲ್ಯೂಶನ್, ಟ್ಯೂಬ್, ಪಂಕ್ಚರ್ ಪ್ಯಾಚ್), ‘ರಿಮ್’ (ಚಕ್ರದ ಹೊರಗಿನ ಗೋಲಾಕಾರ ಅಂಚು), ‘ಸ್ಪೋಕ್ಸ್’ (ಸೈಕಲ್‌ನ ಚಕ್ರಗಳಿಗೆ ಜೋಡಿಸುವ ತಂತಿಗಳು), ಬಾಲ್ಸ್, ಡೈನಮೋ (ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಲ್ಲಿ ರೂಪಾಂತರ ಮಾಡುವ ಯಂತ್ರ (ಸೈಕಲ್ ಓಡುತ್ತಿರುವಾಗ ಡೈನಮೋದಿಂದಾಗಿ ಸೈಕಲ್‌ನ ದೀಪವು ತನ್ನಿಂದ ತಾನೆ ಹತ್ತಿಕೊಳ್ಳುತ್ತದೆ.) ದೀಪಗಳು, ಬಲ್ಬ್, ಸ್ಟ್ಯಾಂಡ್, ಕ್ಯಾರಿಯರ್ (ಸಾಹಿತ್ಯಗಳನ್ನಿಡಲು ಮತ್ತು ಕುಳಿತುಕೊಳ್ಳಲು ಸೈಕಲ್‌ನ ಹಿಂದಿನ ಚಕ್ರದ ಮೇಲಿರುವ ಜಾಗ), ಘಂಟೆ, ಬೀಗ, ಫ್ರಂಟ್ ಬಕೆಟ್ (ಸಾಹಿತ್ಯಗಳನ್ನಿಡಲು ಸೈಕಲ್‌ಗೆ ಮುಂದೆ ಇರುವ ಬುಟ್ಟಿ (ಬಾಸ್ಕೆಟ್)) ಇತ್ಯಾದಿ ಬಿಡಿ ಭಾಗಗಳು ಸಹ ಬೇಕಿದೆ.

ಹೊಸ ಸೈಕಲ್‌ಗಳನ್ನು ಅರ್ಪಣೆಯ ಸ್ವರೂಪದಲ್ಲಿ ಕೊಡಲು ಇಚ್ಛಿಸುವ ಸೈಕಲ್ ಮಾರಾಟಗಾರರು, ಹಾಗೆಯೇ ಸೈಕಲ್ ಖರೀದಿಗಾಗಿ ಧನರೂಪದಲ್ಲಿ ಸಹಾಯ ಮಾಡಲು ಅಥವಾ ತಮ್ಮಲ್ಲಿ ಸುಸ್ಥಿತಿಯಲ್ಲಿರುವ ಸೈಕಲ್‌ನ್ನು ನೀಡಲು ಇಚ್ಛಿಸುವವರು, ಅರ್ಪಣೆದಾರರು, ಕೆಳಗಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು. ಸೈಕಲ್‌ನ ಬಿಡಿ ಭಾಗಗಳನ್ನು ಅರ್ಪಿಸುವುದಿದ್ದಲ್ಲಿ ಆ ರೀತಿಯೂ ತಿಳಿಸಬಹುದು.

ಹೆಸರು ಮತ್ತು ಸಂಪರ್ಕ ಕ್ರಮಾಂಕ

ಸೌ. ಭಾಗ್ಯಶ್ರೀ ಸಾವಂತ 7058885610

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401

ಇದಕ್ಕಾಗಿ ಧನಾದೇಶವನ್ನು ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆ’ಯ ಹೆಸರಿಗೆ ಕೊಡಬೇಕು.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ತರು, ಸನಾತನ ಸಂಸ್ಥೆ. (೩೦.೭.೨೦೨೦)