ಜುಲೈ ೩೦ ರಿಂದ ಆರಂಭವಾಗಿರುವ ‘೯ ನೆಯ ಅಖಿಲಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಿಮಿತ್ತ …

ಜನಕಲ್ಯಾಣಕಾರಿ ಹಿಂದೂ ರಾಷ್ಟ್ರವೇ ‘ರಾಷ್ಟ್ರಹಿತಕ್ಕಾಗಿ ಎಲ್ಲಕ್ಕಿಂತ ಮಿಗಿಲು ’ !

ಶ್ರೀ. ರಮೇಶ ಶಿಂದೆ

ಭಾರತ ಭೂಮಿಯಷ್ಟು ಪ್ರಾಚೀನ ಹಾಗೂ ಪರಾಕ್ರಮದ ಇತಿಹಾಸವು ಬೇರೆ ಯಾವುದೇ ದೇಶದ ಇತಿಹಾಸದಲ್ಲಿಲ್ಲ. ಈ ಭೂಮಿಯು ರಾಮ-ಕೃಷ್ಣ ಮುಂತಾದ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿಯವರೆಗಿನ ಆದರ್ಶ ರಾಜ್ಯವ್ಯವಸ್ಥೆಯನ್ನು ಕಂಡಿದೆ. ಅನೇಕ ಯಾತನೆಗಳನ್ನು ಸಹಿಸಿದ ನಂತರ ೧೯೪೭ ರಲ್ಲಿ ಪಡೆದ ಸ್ವಾತಂತ್ರ್ಯದ ನಂತರ ಪ್ರತಿಯೊಬ್ಬ ಭಾರತೀಯನಿಗೂ ರಾಮರಾಜ್ಯದ ಅಂದರೆ ಆದರ್ಶ ರಾಷ್ಟ್ರದ ಅಪೇಕ್ಷೆಯಿತ್ತು. ಇಂದಿಗೂ ಆದರ್ಶ ರಾಜ್ಯವೆಂದು ಹೇಳಿದಾಕ್ಷಣ ‘ಪ್ರಭು ಶ್ರೀರಾಮಚಂದ್ರನ ರಾಜ್ಯ’ ಅಥವಾ ‘ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯ’ವೇ ಕಣ್ಣೆದುರು ಬರುತ್ತದೆ. ಇಂದು ಹಿಂದೂಗಳ ದುರವಸ್ಥೆಯನ್ನು ನೋಡುವಾಗ ಭಾರತದ ಗೌರವಶಾಲಿ ಇತಿಹಾಸದ ಪುನರಾವೃತ್ತಿಯ ಅವಶ್ಯಕತೆ ಭಾಸವಾಗುತ್ತದೆ. ಅದಕ್ಕಾಗಿಯೇ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ !

ಇದೆಂತಹ ವಿವೇಕ

ದೇಶದಲ್ಲಿ ಕೊರೋನಾದ ಸ್ಥಿತಿಯನ್ನು ಹದಗೆಡಿಸುವಲ್ಲಿ ತಬ್ಲಿಗಿ ಜಮಾತ್‌ನ ದೊಡ್ಡ ಕೈವಾಡವಿದೆ. ದೇಶ-ವಿದೇಶಗಳಿಂದ ಬಂದಿರುವ ಅನೇಕ ತಬ್ಲಿಗಿಗಳು ಕಾನೂನಿನ ಉಲ್ಲಂಘನೆ ಮಾಡಿದರೆಂದು ಅವರ ವಿರುದ್ಧ ಕೇಂದ್ರ ಸರಕಾರವು ಕ್ರಮಕೈಗೊಳ್ಳುತ್ತಿದೆ. ಇಂತಹ ಘಟನೆಗಳು ಈ ಹಿಂದೆಯೂ ಘಟಿಸಿವೆ. ಕಾಶ್ಮೀರದಿಂದ ನಿರಾಶ್ರಿತರಾದ ನಮ್ಮದೇ ದೇಶದವರಾದ ಕಾಶ್ಮೀರಿ ಹಿಂದೂಗಳನ್ನು ಪುನಃ ಅವರ ಮನೆಗೆ ಕಳುಹಿಸಲು ೩೦ ವರ್ಷಗಳಿಂದ ಯಾವುದೇ ಪ್ರಯತ್ನವಾಗಿಲ್ಲ, ಆದರೆ ಸಾವಿರಾರು ಕಿಲೋಮೀಟರ್ ದೂರದ ಮ್ಯಾನ್ಮಾರದಿಂದ ಹೊರದಬ್ಬಲ್ಪಟ್ಟ ರೋಹಿಂಗ್ಯಾ ಮುಸಲ್ಮಾನರು ಪಕ್ಕದಲ್ಲಿಯೇ ಇರುವ ಬಾಂಗ್ಲಾದೇಶಕ್ಕೆ ಹೋಗದೆ ಭಾರತದ ಜಮ್ಮುವಿಗೆ ಬಂದು ಸದ್ದಿಲ್ಲದೆ ಅಲ್ಲಿ ನೆಲೆಯೂರಿದರು. ನಮಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋದಾಗ ನಮ್ಮಲ್ಲಿ ಹಣವಿಲ್ಲದಿದ್ದರೆ, ನಮ್ಮ ವ್ಯವಸ್ಥೆ ಮಾಡಿಕೊಳ್ಳಲು ನಮಗೆ ಎಷ್ಟು ಕಷ್ಟವಾಗುತ್ತದೆ, ಆದರೆ ಈ ವಿದೇಶಿಗಳು ಅನಧಿಕೃತವಾಗಿ ಭಾರತದೊಳಗೆ ನುಸುಳುತ್ತಾರೆ, ಒಳಗೆ ತನಕ ತಲುಪುತ್ತಾರೆ ಹಾಗೂ ಸುಖ-ಸಮಾಧಾನದಿಂದ ಜೀವನವನ್ನು ಆರಂಭಿಸುತ್ತಾರೆ ! ವಾಸ್ತವದಲ್ಲಿ ಇದು ಭಾರತದ ಮುಂದಿರುವ ಅತ್ಯಂತ ಜಟಿಲ ಸಮಸ್ಯೆಯಾಗಿದೆ. ಉಗ್ರವಾದಿಗಳ ಶವಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ದೇಶದ್ರೋಹಿಗಳಿಗೆ ಮತ್ತು ಇದೇ ದೇಶದಲ್ಲಿ ಜನಿಸಿದ ‘ತುಕಡೆ-ತುಕಡೆ ಗ್ಯಾಂಗ್’ಗಳಿಗೆ ದೇಶದಲ್ಲಿನ ಕೆಲವು ರಾಜಕಾರಣಿಗಳ ಬಹಿರಂಗ ಬೆಂಬಲವಿದೆ. ಇಲ್ಲದಿದ್ದರೆ ಈ ದೇಶದಲ್ಲಿ ಭಾರತವಿರೋಧಿ ಮಾನಸಿಕತೆ ನಿರ್ಮಾಣವಾಗಲು ಸಾಧ್ಯವಿಲ್ಲ. ನಮ್ಮ ಭಾರತೀಯ ಸೈನಿಕರು ಪಾಕಿಸ್ತಾನಕ್ಕೆ ಹೋಗಿ ತೋರಿದ ಪರಾಕ್ರಮದ ಬಗ್ಗೆಯೂ ಸಂಶಯಪಡುವ ಮಹಾಶಯರು ಈ ದೇಶದಲ್ಲಿರುವಾಗ ಇಲ್ಲಿ ಇನ್ನೇನನ್ನು ನಿರೀಕ್ಷಿಸಬಹುದು ?

ಕಾಂಗ್ರೆಸ್ ಅಧಿಕಾರಕ್ಕೇರಿದಾಗ ದೇಶದ ಮತ್ತು ಬಹುಸಂಖ್ಯಾತ ಹಿಂದೂಗಳಿಗೆ ಸಂಬಂಧಿಸಿದ ಕರ್ತವ್ಯಗಳತ್ತ ಉದ್ದೇಶಪೂರ್ವಕ ದುರ್ಲಕ್ಷ ಮಾಡಲಾಯಿತು. ‘ಸಿಎಎ’ ಮತ್ತು ‘ಎನ್.ಆರ್.ಸಿ’ ಯಂತಹ ದೇಶಹಿತಕ್ಕಾಗಿ ಇರುವ ಕಾನೂನುಗಳನ್ನು ವಿರೋಧಿಸುವುದರ ಹಿಂದೆ ಅಲ್ಪಸಂಖ್ಯಾತರ ಓಲೈಕೆಯ ಉದ್ದೇಶವಿದೆ, ಎಂದು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ಇಂದಿರಾ ಗಾಂಧಿಯವರು ೧೯೭೬ ರಲ್ಲಿ ಮೂಲ ಸಂವಿಧಾನದಲ್ಲಿ ತಮಗೆ ಬೇಕಾದ ಹಾಗೆ ಬದಲಾವಣೆ ಮಾಡುತ್ತಾ ಅದರಲ್ಲಿ ‘ಸೆಕ್ಯುಲರ್’ ಪದವನ್ನು ತುರುಕಿಸಿದರು ಹಾಗೂ ಅನಂತರ ಆ ‘ಸೆಕ್ಯುಲರ್ ಶಬ್ದಕ್ಕೆ ಯಾವುದೇ ಅರ್ಥವನ್ನು ಅಧಿಕೃತವಾಗಿ ಸ್ವೀಕರಿಸದೆ ಹಿಂದೂಗಳ ಮೂಲಭೂತ ಅಧಿಕಾರಗಳನ್ನು ಮತ್ತು ದೇಶದ ಹಿತವನ್ನು ಪದೇ ಪದೇ ಬಲಿಕೊಡಲಾಯಿತು. ಇಂದಿಗೂ ಅದು ನಡೆಯುತ್ತಿದೆ. ದೇಶಹಿತಕ್ಕಾಗಿ ಯಾವುದೇ ಕಾನೂನುಗಳನ್ನು ರೂಪಿಸುವಾಗ ದೇಶದಲ್ಲಿ ಗಲಭೆಯಂತಹ ವಾತಾವರಣ ಸೃಷ್ಟಿಯಾಗುತ್ತಿದ್ದರೆ, ಸದ್ಯ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದರೆ ಹಾಗೂ ಚೀನಾಗೆ ಬಹಿರಂಗವಾಗಿ ಬೆಂಬಲಿಸುವ ಪಾಕಿಸ್ತಾನವೂ ಅದರಲ್ಲಿ ಕೈಜೋಡಿಸಿದರೆ, ನಮ್ಮ ಪರಾಕ್ರಮಿ ಸೈನಿಕರು ಗಡಿಯಲ್ಲಿ ಶತ್ರುಗಳನ್ನು ಬಗ್ಗುಬಡಿಯುವರು ಎಂಬುದು ಖಚಿತವಾಗಿದೆ; ಆದರೆ ಪಾಕಿಸ್ತಾನವನ್ನು ಬೆಂಬಲಿಸುವ ದೇಶದ ಒಳಗಿರುವ ಶತ್ರುಗಳನ್ನು ಎದುರಿಸಲು ನಾವು ಎಷ್ಟು ಸಿದ್ಧರಾಗಿದ್ದೇವೆ, ಎಂಬುದನ್ನು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನು ವಿಚಾರ ಮಾಡಬೇಕಾಗಿದೆ. ಐಸಿಸ್‌ನಂತಹ ಉಗ್ರವಾದಿ ಸಂಘಟನೆಗಳಲ್ಲಿ ಸೇರಿಕೊಳ್ಳಲು ಇದೇ ದೇಶದಿಂದ ಹಣ ಮತ್ತು ಸುಶಿಕ್ಷಿತ ಜನರನ್ನು ಪೂರೈಸಲಾಗುತ್ತದೆ, ಇದರಿಂದಲೇ ಎಲ್ಲವೂ ಅರ್ಥವಾಗುತ್ತದೆ.

ಹಿಂದೂದ್ವೇಷಿ ಮತ್ತು ‘ಸೆಕ್ಯುಲರ್’ ಉಗ್ರವಾದ !

ಭಾರತದಲ್ಲಿ ಜನರಿಗಾಗಿ ಸಿದ್ಧಪಡಿಸಿದ ಕಾನೂನು, ನಿಯಮಗಳು ನಮಗಾಗಿ ಅಲ್ಲವೆ ಅಲ್ಲ, ಎನ್ನುವುದು ದೇಶದಲ್ಲಿನ ಕೆಲವು ಪಂಥಾಂಧ ಶಕ್ತಿಗಳ ವಿಚಾರವಾಗಿದೆ. ಬಹುಶಃ ಇಂತಹ ಪಂಥಗಳ ಮೂಲಭೂತ ಬೋಧನೆಯು ‘ಪಂಥವೇ ಸರ್ವೋಚ್ಚವಾಗಿದೆ’ ಎಂದಾಗಿರುವುದರಿಂದ ಅವರಿಂದ ಇನ್ನೇನೂ ಅಪೇಕ್ಷಿಸುವಂತಿಲ್ಲ; ಆದರೆ ಇತರ ದೇಶಗಳಲ್ಲಿ ಆಯಾಯ ದೇಶಗಳ ಕಾನೂನು ಮತ್ತು ನಿಯಮಗಳನ್ನು ಪಾಲಿಸುವ ಈ ಪಂಥಾಂಧರು ಕೇವಲ ಭಾರತದಲ್ಲಿ ಹೆಚ್ಚು ಕಟ್ಟರ್ ಆಗುತ್ತಾರೆ. ಅನೇಕ ವರ್ಷಗಳ ನಂತರ ನ್ಯಾಯಾಲಯವು ರಾಮಮಂದಿರದ ಸಮಸ್ಯೆಯನ್ನು ನಿವಾರಿಸಿದ ನಂತರವೂ ಮಂದಿರದ ಅಡಿಪಾಯ ಹಾಕುವ ವಿಷಯದಲ್ಲಿ ವಿವಾದ ಸೃಷ್ಟಿಯಾಗುತ್ತದೆ.

ಒಂದೆಡೆ ಉಗ್ರವಾದಿಗಳ ಶವಯಾತ್ರೆಯಲ್ಲಿ ಆಗುವ ಜನಸಂದಣಿಗೆ, ಉಗ್ರವಾದಿಗಳ ವಕಾಲತುಪತ್ರ ತೆಗೆದುಕೊಳ್ಳುವಂತಹ ದೇಶಕ್ಕೆ ಮಾರಕವಾಗಿರುವ ಕೃತ್ಯ ಇವುಗಳನ್ನು ಯಾರೂ ವಿರೋಧಿಸುವುದು ಕಾಣಿಸುವು ದಿಲ್ಲ. ಇನ್ನೊಂದೆಡೆ ವಿಭಜನೆಯ ಸಮಯದಲ್ಲಿ ‘ನಮಗೆ ನಮ್ಮ ಪ್ರಾಂತಬೇಕೆಂದು’ ಮುಸಲ್ಮಾನರಿಗೆ ಪಾಕಿಸ್ತಾನವನ್ನು ನೀಡಿದ ನಂತರ ಉಳಿದ ಭೂಮಿಯ ಭಾಗ ಸ್ವಾಭಾವಿಕವಾಗಿ ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳದ್ದೇ ಆಗಿದೆ; ಆದರೆ ‘ಹಿಂದೂ ರಾಷ್ಟ್ರ’ದ ಬೇಡಿಕೆಯನ್ನು ಮಾಡಿದಾಗ ಆಕಾಶ-ಪಾತಾಳ ಒಂದು ಮಾಡಿ ಹಿಂದೂಗಳನ್ನು ‘ಕೋಮುವಾದಿ’ ಎಂದು ಹೀಯಾಳಿಸಲಾಗುತ್ತದೆ. ಎಲ್ಲೆಡೆ ಹಿಂದೂಗಳಿಗೆ ಎಷ್ಟೇ ಅನ್ಯಾಯ ದೌರ್ಜನ್ಯವಾದರೂ ‘ಹಿಂದೂಗಳೇ ಹೊಂದಿಕೊಳ್ಳಬೇಕು, ಏಕೆಂದರೆ, ಅವರು ಸಹಿಷ್ಣುಗಳಾಗಿದ್ದಾರೆ’, ಎನ್ನುವ ಮಾನಸಿಕತೆಯನ್ನು ರೂಪಿಸುವುದರಲ್ಲಿ ರಾಜಕಾರಣಿಗಳು ಯಶಸ್ವಿಯಾಗಿದ್ದಾರೆ.

ಹಿಂದೂಗಳ ಸನಾತನ ಧರ್ಮದಲ್ಲಿ ನೀಡಿದ ಪರಾಕ್ರಮ, ಶೌರ್ಯ, ಚಾತುರ್ಯದ ಪರಂಪರೆಯು ಹಿಂದೂಗಳ ಮನಸ್ಸಿನಿಂದ ಜನ್ಮದಿಂದಲೇ ಅಳಿಸಲ್ಪಡಲು ಬೇಕಾದ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಅಹಿಂಸೆ, ಸಹಿಷ್ಣುತೆ, ಪರೋಪಕಾರ, ತ್ಯಾಗ ಈ ಸಂಜ್ಞೆಯ ಸರಿಯಾದ ಅರ್ಥವನ್ನು ಬದಿಗಿಟ್ಟು ಸ್ವಾರ್ಥಿ ರಾಜಕಾರಣಿಗಳ ಅಪೇಕ್ಷೆಯಂತೆ ಬೇರೆಯೆ ವ್ಯಾಖ್ಯೆಯನ್ನು ಕಲಿಸಿ ಹಿಂದೂಗಳನ್ನು ತಿಳಿಗೇಡಿಗಳೆಂದು ಮಾಡಲಾಯಿತು. ಆದುದರಿಂದ ಇಂದು ಯಾರೆ ಇರಲಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದರೂ, ದೇವತೆಗಳ ನಗ್ನ ಚಿತ್ರಗಳನ್ನು ಬಿಡಿಸಿದರೂ, ನಾಟಕ, ಚಲನಚಿತ್ರ, ಜಾಹೀರಾತು ಇತ್ಯಾದಿಗಳಿಂದ ದೇವತೆಗಳು, ಸಂತರು, ರಾಷ್ಟ್ರಪುರುಷರು ಇವರ ವಿಡಂಬನೆಯಾದರೂ ಹಿಂದೂಗಳು ನಿಷ್ಕ್ರಿಯವಾಗಿಯೇ ಇರುತ್ತಾರೆ. ಆದ್ದರಿಂದ ಹಿಂದೂಗಳ ರಾಷ್ಟ್ರೀಯ ಭಾವನೆಯ ಮೇಲೆಯೂ ಇದರ ಪರಿಣಾಮವಾಯಿತು. ಆದ್ದರಿಂದ ‘ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟಿರಿ’, ‘ರಾಷ್ಟ್ರಗೀತೆ ಮೊಳಗುತ್ತಿರುವಾಗ ಎದ್ದು ನಿಲ್ಲಿ’, ಇಂತಹ ಸಾಮಾನ್ಯ ವಿಷಯಗಳನ್ನು ಸಹ ಹಿಂದೂ ಜನಜಾಗೃತಿ ಸಮಿತಿಯು ಕೆಲವು ವರ್ಷಗಳ ವರೆಗೆ ಸಮಾಜಕ್ಕೆ ಹೋಗಿ ಕಲಿಸಬೇಕಾಯಿತು. ನಮ್ಮ ಧಾರ್ಮಿಕ ಹಾಗೂ ರಾಷ್ಟ್ರೀಯ ಭಾವನೆಯು ೨೪ ಗಂಟೆಯೂ ಜಾಗೃತವಾಗಿರಬೇಕು, ಆಗ ಮಾತ್ರ ರಾಷ್ಟ್ರದ ಅಂದರೆ ಆ ಮೂಲಕ ನಮ್ಮ ಪ್ರಗತಿಯಾಗುತ್ತದೆ, ಎಂಬುದನ್ನು ತಿಳಿದುಕೊಳ್ಳುವ ಸಮಯ ಬಂದಿದೆ. ಇಂದು ಈ ದೇಶದಲ್ಲಿ ದೇಶದ ಹಿತಕ್ಕಾಗಿ ಮಾತನಾಡುವವರನ್ನು ಮತ್ತು ಕಾರ್ಯ ಮಾಡುವವರನ್ನು ‘ಫ್ಯಾಸಿಸ್ಟ್’ ಎಂದು ಹೇಳಲಾಗುತ್ತದೆ. ‘ಹಿಂದೂ ಉಗ್ರವಾದ’ದ ಹುಸಿ ಗುಮ್ಮನನ್ನು ಸೃಷ್ಟಿಸಿ ಹಿಂದೂ ಸಂಘಟನೆಗಳನ್ನು ಮುಗಿಸಿಬಿಡುವ ಸಂಚನ್ನು ರೂಪಿಸಲಾಗುತ್ತದೆ ಮತ್ತು ತದ್ವಿರುದ್ಧ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗಾಗಿ ತಥಾಕಥಿತ ವಿಚಾರವಂತರು ತಮ್ಮ ‘ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಾರೆ. ಈ ಷಡ್ಯಂತ್ರವನ್ನು ನಾವು ತಿಳಿದುಕೊಳ್ಳಬೇಕು.

‘ರಾಷ್ಟ್ರ ಹಿತಕ್ಕಿಂತ ಮಿಗಿಲಾಗಿ ಬೇರೊಂದಿಲ್ಲ |’ ಇಂತಹ ಶ್ರೇಷ್ಠ ಹಾಗೂ ಸಂಪೂರ್ಣ ನಿಷ್ಕಳಂಕ, ನಿಸ್ವಾರ್ಥಿ ಹಾಗೂ ರಾಷ್ಟ್ರನಿಷ್ಠ ವಿಚಾರವುಳ್ಳ ಹಿಂದೂ ಸಮಾಜವು ದೇಶದ ಪ್ರಗತಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದೆ. ಆದ್ದರಿಂದ ಇಂತಹ ಸಮಾಜದ ಹಿತಕ್ಕಾಗಿ ‘ಲೋಕಕಲ್ಯಾಣಕಾರಿ ಹಿಂದೂ ರಾಷ್ಟ್ರ’ ಸ್ಥಾಪನೆ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಇದೇ ಮಾನವತೆ, ವ್ಯವಹಾರ, ತರ್ಕ ಮತ್ತು ವಿಜ್ಞಾನ ಇವೆಲ್ಲ ಸ್ತರಗಳಲ್ಲಿ ಸಮರ್ಪಕವಾಗಿದೆ ಹಾಗೂ ವಾಸ್ತವಿಕತೆಯೂ ಆಗಿದೆ ! ಅಂದರೆ ಹಿಂದೂ ರಾಷ್ಟ್ರದ ಈ ಸಂಕಲ್ಪನೆಯು ಆಧ್ಯಾತ್ಮಿಕಸ್ತರದ್ದಾಗಿರುವುದು ಆವಶ್ಯಕವಾಗಿದೆ. ಆದ್ದರಿಂದಲೇ ನಿಜವಾಗಿಯೂ ಅದರಿಂದ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಮೇಲೆ ಸಕಾರಾತ್ಮಕ ಪರಿಣಾಮವಾಗಲಿಕ್ಕಿದೆ. ಈ ವಿಚಾರವನ್ನು ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು (ಡಾ.) ಜಯಂತ ಆಠವಲೆಯವರು ಎಲ್ಲಕ್ಕಿಂತ ಮೊದಲು ಮಂಡಿಸಿದ್ದಾರೆ. ‘ಹಿಂದೂ ರಾಷ್ಟ್ರ’ ಈ ಶಬ್ದವೇ ಅಸ್ಪೃಶ್ಯ ಆಗಿರುವಾಗ ಇಂದು ಲೋಕಸಭೆಯಲ್ಲಿ ಮತ್ತು ವಿದೇಶದಲ್ಲಿಯೂ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಅನೇಕ ವರ್ಷಗಳಿಂದ ನೆನೆಗುದಿಯಲ್ಲಿರುವ ಧರ್ಮ ಮತ್ತು ರಾಷ್ಟ್ರದ ಮುಂದಿರುವ ಅನೇಕ ಸಮಸ್ಯೆಗಳು ಕಾಲದ ಪ್ರವಾಹದಲ್ಲಿ ನಿರ್ಧರಿಸಲಾಗುತ್ತಿವೆ.

ಈ ಪ್ರಯತ್ನಗಳ ವೇಗವನ್ನು ಹೆಚ್ಚಿಸಲು ಅದಕ್ಕೆ ‘ಆಧ್ಯಾತ್ಮಿಕ ಹಿಂದುತ್ವ’ದ ಬೆಂಬಲ ಲಭಿಸಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇಶ-ವಿದೇಶಗಳಲ್ಲಿನ ಕೃತಿಶೀಲ ಹಿಂದುತ್ವನಿಷ್ಠ ಸಂಘಟನೆಗಳ ಪ್ರಮುಖರು ಕಳೆದ ೮ ವರ್ಷಗಳಿಂದ ಗೋವಾದಲ್ಲಿ ನಡೆಯುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಿಮಿತ್ತ ಒಟ್ಟಾಗುತ್ತಿದ್ದು ಕೃತಿಶೀಲ ಹಾಗೂ ವೈಚಾರಿಕ ಸ್ತರದ ಕೊಡುಕೊಳ್ಳುವಿಕೆಯನ್ನು ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರದ ಸಮಾನ ದಾರವನ್ನು ಹಿಡಿದು ಪ್ರತಿ ತಿಂಗಳು ರಾಷ್ಟ್ರೀಯ ಸಮಸ್ಯೆಗಳ ವಿರುದ್ಧ ಒಟ್ಟಾಗಿ ಕಾನೂನು ಪ್ರಕಾರ ಆಂದೋಲನ ಮಾಡುವುದು, ಧರ್ಮಜಾಗೃತಿ ಸಭೆಗಳನ್ನು ನಡೆಸುವುದು, ನ್ಯಾಯಾಂಗ ಹೋರಾಟ ಮಾಡುವುದು, ಸಂಸ್ಕೃತಿಯನ್ನು ಕಾಪಾಡುವುದು, ಹಿಂದೂಸಂಘಟನೆ ಮಾಡುವುದು ಇತ್ಯಾದಿ ಅನೇಕ ವಿಧದಲ್ಲಿ ಒಟ್ಟಾಗಿ ರಾಷ್ಟ್ರವ್ಯಾಪಿ ಕಾರ್ಯವನ್ನು ಮಾಡಲಾಗುತ್ತಿದೆ. ಅದಕ್ಕೆ ಉತ್ತಮ ರೀತಿಯಲ್ಲಿ ಯಶಸ್ಸು ಕೂಡ ಸಿಗುತ್ತಿದೆ. ಇದನ್ನು ಈ ಅಧಿವೇಶನದ ಫಲಶ್ರುತಿ ಎಂದು ಹೇಳಬಹುದು. ಸದ್ಯ ಕೊರೋನಾದ ಹಿನ್ನೆಲೆಯಲ್ಲಿ ಒಟ್ಟಾಗುವುದು ಸಾಧ್ಯವಿಲ್ಲ; ಆದರೆ ಹಿಂದೂ ರಾಷ್ಟ್ರದ ಆಸಕ್ತಿಯಿಂದ ಪ್ರೇರಣೆಯನ್ನು ಹೊಂದಿರುವ ಇವರೆಲ್ಲ ಹಿಂದೂ ಧರ್ಮಾಭಿಮಾನಿಗಳು ‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಿಮಿತ್ತದಲ್ಲಿ ಹಿಂದೂ ರಾಷ್ಟ್ರವನ್ನು ಜಾಗೃತಗೊಳಿಸಲಿಕ್ಕಿದೆ – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ