ಮತಾಂತರಿತರ ಶುದ್ಧೀಕರಣದ ಇತಿಹಾಸದಲ್ಲಿನ ಕೆಲವು ದಾಖಲೆಗಳು

ಅ. ‘ಪೈಠಣದ ಬ್ರಾಹ್ಮಣರು ಮೊದಲು ಧರ್ಮಭ್ರಷ್ಟನಾದ ಬಹಿರಭಟ್ಟನನ್ನು ಶುದ್ಧ ಮಾಡಿದ ಸ್ಪಷ್ಟ ಪುರಾವೆ ‘ಭಕ್ತಿವಿಜಯದ ೪೪ ನೇ ಅಧ್ಯಾಯದಲ್ಲಿದೆ.

ಆ. ಛತ್ರಪತಿ ಶಿವಾಜಿ ಮಹಾರಾಜರು ಬಜಾಜೀ ನಿಂಬಾಳ್ಕರನನ್ನು ಶುದ್ಧಗೊಳಿಸಿದರು ಮತ್ತು ಅವನ ಮಗನಿಗೆ ತನ್ನ ಮಗಳು ಸಖುಬಾಯಿಯನ್ನು ಕೊಟ್ಟರು. ಮುಸಲ್ಮಾನ ಆಗಿರುವ ನೇತಾಜಿ ಪಾಲಕರನ್ನು ಪುನಃ ಹಿಂದೂ ಮಾಡಿಕೊಂಡರು.

ಇ. ಬಾಳ ಗಂಗಾಧರ ಜಾಂಭೆಕರರು ಸನಾತನೀ ಹಿಂದೂ ಸಮಾಜದ ವಿರೋಧವನ್ನು ಕಡೆಗಣಿಸಿ ಕ್ರೈಸ್ತರೊಂದಿಗೆ ಇರುತಿದ್ದ ಹಾಗೂ ಊಟ ಮಾಡಿದ್ದ ಶ್ರೀಪತ್ ಶೇಷಾದ್ರಿ ಪರಳೀಕರನನ್ನು ನ್ಯಾಯಾಲಯಕ್ಕೆ ಹೋಗಿ ಪುನಃ ಹಿಂದೂ ಸಮಾಜಕ್ಕೆ ಸೇರಿಸಿಕೊಂಡರು ಹಾಗೂ ಸಮಾಜವು ಹೇರಿದ ಬಹಿಷ್ಕಾರವನ್ನು ಎದುರಿಸಿದರು.

ಈ. ಸ್ವಾಮಿ ಶ್ರದ್ಧಾನಂದ, ವಿನಾಯಕ ಮಹಾರಾಜ ಮತ್ತು ಮಸೂರಕರ್ ಮಹಾರಾಜ ಇವರು ಮಾಡಿದ ಶುದ್ಧಿಕಾರ್ಯವು ಎಲ್ಲರಿಗೂ ತಿಳಿದಿದೆ. – ಪ್ರಭಾಕರ ನೀ. ನವರೆ (ಸ್ವಾತಂತ್ರ್ಯವೀರ, ದೀಪಾವಳಿ ೨೦೧೧)