ಕುಲಗಾಮನಲ್ಲಿ ೩ ಭಯೋತ್ಪಾದಕರ ಹತ್ಯೆ

ಇಲ್ಲಿ ಜುಲೈ ೧೭ ರಂದು ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಗಳು ೩ ಭಯೋತ್ಪಾದಕರ ಹತ್ಯೆ ಮಾಡಿದ್ದಾರೆ. ಇದರಲ್ಲಿ ೩ ಸೈನಿಕರೂ ಗಾಯಗೊಂಡಿದ್ದಾರೆ. ಈ ಚಕಮಕಿ ಸಂಜೆಯ ತನಕ ನಡೆಯುತ್ತಿತ್ತು. ಈ ಹಿಂದೆ ಜುಲೈ ೧೬ ರಂದು ಕುಪವಾಡಾದ ಕೆರನ ಸೆಕ್ಟರ್‌ನಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದ ಓರ್ವ ಭಯೋತ್ಪಾದಕನ ಹತ್ಯೆ ಮಾಡಲಾಗಿದೆ.

ಸೀತಾಪುರ (ಉತ್ತರಪ್ರದೇಶ) ಇಲ್ಲಿ ಮತಾಂಧರಿಂದ ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರಿಂದ ಸ್ಥಿತಿ ಉದ್ವಿಗ್ನ

ಇಲ್ಲಿಯ ಪಕರಿಯಾ ಗ್ರಾಮದಲ್ಲಿ ಜಾಹಿದ, ರಾಶಿದ ಹಾಗೂ ಸಾಹಿರ ಈ ಮೂವರು ೧೨ ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಪೀಡಿತೆಯ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದಾದ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ.

ಪಾಕಿಸ್ತಾನದ ಸಿಂಧ್‌ನಲ್ಲಿ ಇಬ್ಬರು ಹಿಂದೂ ಯುವಕರ ಹತ್ಯೆ : ಅರೆಬೆಂದಾವಸ್ಥೆಯಲ್ಲಿ ಮೃತದೇಹ ಪತ್ತೆ

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳು ನಡೆಯುತ್ತಿವೆ. ಇಲ್ಲಿಯ ಮಿಟಿಯಾರಿ ಹಾಲಾ ಪ್ರದೇಶದಲ್ಲಿ ಮೊಹನ ಬಾಗರಿ ಹೆಸರಿನ ಹಿಂದೂ ಯುವಕನ ಅರೆಬೆಂದ ಮೃತದೇಹವು ಪತ್ತೆಯಾಗಿದೆ. ಇದರ ಮಾಹಿತಿಯನ್ನು ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ರಾಹತ ಆಸ್ಟೀನ್ ಇವರು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡಿದ್ದಾರೆ.

ಸ್ಥಿರ ಆಸ್ತಿಗಳನ್ನು ಮಾರಾಟ ಮಾಡುವ ಇಚ್ಛೆಯಿರುವ ಸಾಧಕರಿಗೆ ಮಹತ್ವದ ಸೂಚನೆ !

ವಾಸ್ತು ಅಥವಾ ಭೂಮಿ ಇವುಗಳಿಗೆ ಅಪೇಕ್ಷಿತ ಬೆಲೆಯನ್ನು ದೊರಕಿಸಿಕೊಳ್ಳಲು ಆಯಾ ಭಾಗದಲ್ಲಿನ ಆಸ್ತಿಗಳ ನಡೆಯುತ್ತಿರುವ ಬೆಲೆಗಳ ಅಧ್ಯಯನ ಮಾಡಬೇಕು ಮತ್ತು ತದನಂತರ ‘ನಮಗೆ ಎಷ್ಟು ಬೆಲೆ ಬರುವುದು ಅಪೇಕ್ಷಿತವಿದೆ ?’, ಎಂಬುದನ್ನು ನಿರ್ಧರಿಸಬೇಕು. ಅಪೇಕ್ಷಿತ ಬೆಲೆ ಸಿಗುತ್ತಿದ್ದರೆ ಮಾರಾಟದ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕು.

ದೆಹಲಿ ಗಲಭೆಯ ಹಿಂದಿನ ಇಸ್ಲಾಮೀ ದೇಶಗಳ ಕುತಂತ್ರವನ್ನು ತಿಳಿಯಿರಿ !

ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಲಾಯಿತು. ಅನಂತರ ನಡೆದ ಗಲಭೆಗಾಗಿ ಸಂಯುಕ್ತ ಅರಬ ಅಮಿರಾತ ಮತ್ತು ಓಮಾನ್ ಮಧ್ಯ-ಪೂರ್ವದಲ್ಲಿನ ಇಸ್ಲಾಮೀ ದೇಶಗಳಿಂದ ಹಣ ಪೂರೈಕೆ ಮಾಡಲಾಗಿತ್ತು, ಎಂದು ದೆಹಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಬುದ್ಧಿಜೀವಿಗಳೇ ಮತ್ತು ವಿಜ್ಞಾನಿಗಳೇ ‘ವಿಜ್ಞಾನವನ್ನು ಹುಡುಕಲು ಬುದ್ಧಿ ಯಾರು ನೀಡಿದರು ?, ಇದರ ಬಗ್ಗೆ ಎಂದಾದರೂ ವಿಚಾರ ಮಾಡಿದ್ದೀರಾ ? ಆ ಬುದ್ಧಿಯನ್ನು ಈಶ್ವರನು ನೀಡಿದ್ದಾನೆ. ಹೀಗಿರುವಾಗಲೂ ‘ಈಶ್ವರನು ಇಲ್ಲ ಎಂದು ಯಾರಾದರೂ ನಿಜವಾದ ಬುದ್ಧಿವಂತರೆಂದು ಹೇಳಲು ಸಾಧ್ಯವೇ ?

‘ಹಿಂದೂ’ ಹೆಸರಿನ ಸುಳ್ಳು ಖಾತೆಯಿಂದ ಹಾಸ್ಯನಟಿ ಅಗ್ರಿಮಾ ಜೊಶುವಾಗೆ ಬಲಾತ್ಕಾರದ ಬೆದರಿಕೆಯೊಡ್ಡಿದ ಮತಾಂಧನ ಬಂಧನ

ಸಾಮಾಜಿಕ ಮಾಧ್ಯಮಗಳಲ್ಲಿ ‘ಉಮೇಶದಾದಾ’ ಈ ಹೆಸರಿನ ನಕಲಿ ಖಾತೆಯನ್ನು ತೆರೆದು ಅದರಿಂದ ಹಾಸ್ಯನಟಿ ಅಗ್ರಿಮಾ ಜೊಶುವಾಗೆ ಬಲಾತ್ಕಾರದ ಬೆದರಿಕೆಯೊಡ್ಡಿದ ಇಮ್ತಿಯಾಜ ಶೇಖ ಎಂಬ ಮತಾಂಧನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಗೋಪಾಲಗಂಜ(ಬಿಹಾರ)ನಲ್ಲಿ ೨೬೪ ಕೋಟಿ ಖರ್ಚು ಮಾಡಿ ನಿರ್ಮಿಸಿದ ಸೇತುವೆ ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿಹೋಯಿತು !

ಇಲ್ಲಿ ೨೬೪ ಕೋಟಿ ಖರ್ಚು ಮಾಡಿ ಗಂಧಕ ನದಿಯ ಮೇಲೆ ಕಟ್ಟಿದ್ದ ಸತ್ತರಘಾಟ ಸೇತುವೆಯು ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಇದರಿಂದ ಲಾಲಛಾಪಾರ, ಮುಜಫ್ಫರಪುರ, ಮೋತಿಹಾರಿ ಹಾಗೂ ಬೇತಿಯಾ ಈ ಊರುಗಳ ಸಂಪರ್ಕ ಕಡಿತಗೊಂಡಿದೆ. ೨೯ ದಿನಗಳ ಹಿಂದೆ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಈ ಸೇತುವೆಯನ್ನು ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಉದ್ಘಾಟಿಸಿದ್ದರು.

ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ೩೫ ಲಕ್ಷ ರೋಗಿಗಳಾಗಬಹುದು ! – ‘ಭಾರತೀಯ ವಿಜ್ಞಾನ ಸಂಸ್ಥೆ’ಯ ಅಂದಾಜು

ಬೆಂಗಳೂರು – ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ಪೀಡಿತರ ಸಂಖ್ಯೆ ೩೫ ಲಕ್ಷಕ್ಕಿಂತಲೂ ಹೆಚ್ಚಾಗಬಹುದು ಹಾಗೂ ೧೦ ಲಕ್ಷ ಸಕ್ರಿಯ ರೋಗಿಗಳೂ (ಎಕ್ಟಿವ್ ಕೇಸಸ್) ಆಗುವರು ಎಂದು ‘ಭಾರತೀಯ ವಿಜ್ಞಾನ ಸಂಸ್ಥೆ’ಯು ಅಂದರೆ ‘ಐ.ಐ.ಎಸ್.ಸಿ.’ನ ಪ್ರಾಧ್ಯಾಪಕರಾದ ಶಶಿಕುಮಾರ ಜಿ., ಪ್ರಾಧ್ಯಾಪಕ ದೀಪಕ ಎಸ್. ಹಾಗೂ ಅವರ ಸರಕಾರಿಗಳು ಅಂದಾಜಿಸಿದ್ದಾರೆ. (ಸೌಜನ್ಯ : NEWS9 live) ಈ ಸಂಸ್ಥೆಯ ಅಧ್ಯಯನದ ಪ್ರಕಾರ, ೧. ಸಪ್ಟೆಂಬರ ೧ ರ ತನಕ ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ … Read more

ನಟ ಸುಶಾಂತ್ ರಾಜಪುತನ ಆತ್ಮಹತ್ಯೆಯ ತನಿಖೆಯನ್ನು ಸಿಬಿಐಗೆ ನೀಡಿ ! – ಡಾ. ಸುಬ್ರಮಣಿಯನ್ ಸ್ವಾಮಿಯಿಂದ ಮೋದಿಗೆ ಪತ್ರ

ನಟ ಸುಶಾಂತ ಸಿಂಹ ರಾಜಪುತ ಇವರ ಆತ್ಮಹತ್ಯೆಯ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಬೇಕು, ಎಂದು ಭಾಜಪದ ಹಿರಿಯ ನಾಯಕ ಹಾಗೂ ಶಾಸಕ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಪತ್ರದ ಮೂಲಕ ಪ್ರಧಾನಿ ಮೋದಿಯವರಿಗೆ ಆಗ್ರಹಿಸಿದ್ದಾರೆ. ‘ಹಿಂದಿ ಚಿತ್ರರಂಗದ ದೊಡ್ಡ ವ್ಯಕ್ತಿಗಳು ಈ ಬಗ್ಗೆ ಒತ್ತಡವನ್ನು ತರಲು ದುಬೈಯ ಕುಖ್ಯಾತ ಗೂಂಡಾಗಳ ಸಂಪರ್ಕದಲ್ಲಿದ್ದಾರೆ’, ಎಂದೂ ಅವರು ಈ ಪತ್ರದಲ್ಲಿ ಹೇಳಿದ್ದಾರೆ.