ನಟ ಸುಶಾಂತ್ ರಾಜಪುತನ ಆತ್ಮಹತ್ಯೆಯ ತನಿಖೆಯನ್ನು ಸಿಬಿಐಗೆ ನೀಡಿ ! – ಡಾ. ಸುಬ್ರಮಣಿಯನ್ ಸ್ವಾಮಿಯಿಂದ ಮೋದಿಗೆ ಪತ್ರ

ಚಿತ್ರರಂಗದ ದೊಡ್ಡವ್ಯಕ್ತಿಗಳು ದುಬೈನ ‘ಡಾನ್’ ಮೂಲಕ ಪೊಲೀಸರ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೇಳಿದ್ದಾರೆ

ದುಬೈನಲ್ಲಿಯ ಗೂಂಡಾಗಳೊಂದಿಗೆ ಚಿತ್ರರಂಗದವರು ಯಾರೆಲ್ಲ ಇದ್ದಾರೆ, ಎಂಬುದು ಜನರಿಗೆ ತಿಳಿಯಬೇಕು. ಅದಕ್ಕಾಗಿ ಸರಕಾರವು ಈ ಪ್ರಕರಣದ ತನಿಖೆಯನ್ನು ಮಾಡಿ ಸತ್ಯವನ್ನು ಜನರೆದುರು ತರಬೇಕು !

ನವ ದೆಹಲಿ – ನಟ ಸುಶಾಂತ ಸಿಂಹ ರಾಜಪುತ ಇವರ ಆತ್ಮಹತ್ಯೆಯ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಬೇಕು, ಎಂದು ಭಾಜಪದ ಹಿರಿಯ ನಾಯಕ ಹಾಗೂ ಶಾಸಕ ಡಾ. ಸುಬ್ರಮಣಿಯನ್ ಸ್ವಾಮಿ ಇವರು ಪತ್ರದ ಮೂಲಕ ಪ್ರಧಾನಿ ಮೋದಿಯವರಿಗೆ ಆಗ್ರಹಿಸಿದ್ದಾರೆ. ‘ಹಿಂದಿ ಚಿತ್ರರಂಗದ ದೊಡ್ಡ ವ್ಯಕ್ತಿಗಳು ಈ ಬಗ್ಗೆ ಒತ್ತಡವನ್ನು ತರಲು ದುಬೈಯ ಕುಖ್ಯಾತ ಗೂಂಡಾಗಳ ಸಂಪರ್ಕದಲ್ಲಿದ್ದಾರೆ’, ಎಂದೂ ಅವರು ಈ ಪತ್ರದಲ್ಲಿ ಹೇಳಿದ್ದಾರೆ.

ಡಾ. ಸ್ವಾಮಿಯವರು ಈ ಪತ್ರದಲ್ಲಿ, ‘ನನಗೆ ನನ್ನ ಮೂಲಗಳಿಂದ ತಿಳಿದ ಮಾಹಿತಿಗನುಸಾರ, ಚಿತ್ರರಂಗದ ಅನೇಕ ದೊಡ್ಡ ವ್ಯಕ್ತಿಗಳು ದುಬೈಯ ‘ಡಾನ್’ನ ಸಂಪರ್ಕದಲ್ಲಿದ್ದವರು ಸುಶಾಂತನ ಮೃತ್ಯು ‘ಆತ್ಮಹತ್ಯೆ’ ಆಗಿದೆ ಎಂಬುದನ್ನು ತೋರಿಸಲು ಪೊಲೀಸರ ಮೇಲೆ ಒತ್ತಡವನ್ನು ತರುತ್ತಿದ್ದಾರೆ. ತಾವು ಮಹಾರಾಷ್ಟ್ರದ ಮುಖ್ಯಮಂತ್ರಿಯವರಿಗೆ, ಸುಶಾಂತ್‌ನ ಆತ್ಮಹತ್ಯೆಯ ತನಿಖೆಯನ್ನು ಸಿಬಿಐಗೆ ನೀಡಲು ಸಿದ್ಧರಾಗಿ ಎಂಬ ಸಲಹೆಯನ್ನು ನೀಡಬೇಕು ಎಂದು ಹೇಳಿದ್ದಾರೆ. ಜನರ ನಂಬಿಕೆಯನ್ನು ಶಾಶ್ವತವಾಗಿರಿಸಲು ಈ ಪ್ರಕರಣವು ಸಿಬಿಐನಿಂದ ತನಿಖೆ ಆಗುವುದು ಅಗತ್ಯವಿದೆ. ಮುಂಬಯಿ ಪೊಲೀಸರು ಸದ್ಯ ಕೊರೋನಾದಿಂದ ಬಳಲುತ್ತಿದ್ದರಿಂದ ಈ ತನಿಖೆಯನ್ನು ಸಿಬಿಐಗೆ ನೀಡಬೇಕು. ನಿಮ್ಮ ಸಲಹೆಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಸಿಬಿಐ ಕಡೆ ತನಿಖೆಗಾಗಿ ಸಿದ್ಧರಾಗುವರು’ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.