ದೆಹಲಿ ಗಲಭೆಯ ಹಿಂದಿನ ಇಸ್ಲಾಮೀ ದೇಶಗಳ ಕುತಂತ್ರವನ್ನು ತಿಳಿಯಿರಿ !

೧. ದೆಹಲಿ ಗಲಭೆಯ ಹಿಂದಿನ ಇಸ್ಲಾಮೀ ದೇಶಗಳ ಕುತಂತ್ರವನ್ನು ತಿಳಿಯಿರಿ !

ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸಲಾಯಿತು. ಅನಂತರ ನಡೆದ ಗಲಭೆಗಾಗಿ ಸಂಯುಕ್ತ ಅರಬ ಅಮಿರಾತ ಮತ್ತು ಓಮಾನ್ ಮಧ್ಯ-ಪೂರ್ವದಲ್ಲಿನ ಇಸ್ಲಾಮೀ ದೇಶಗಳಿಂದ ಹಣ ಪೂರೈಕೆ ಮಾಡಲಾಗಿತ್ತು, ಎಂದು ದೆಹಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ.

೨. ಪಾಕ್‌ನ ಹಿಂದೂಗಳಿಗೆ ಅಲ್ಲಿನ ಮೌಲಾನಾ ನೀಡಿದ ಬೆದರಿಕೆ ತಿಳಿಯಿರಿ !

ಒಂದು ವೇಳೆ ನೀವು (ಹಿಂದೂ) ದೇವಸ್ಥಾನವನ್ನು ಕಟ್ಟಿದರೆ, ಇಲ್ಲಿಯ ಸಮಾಜ ನಿಮ್ಮ ಕುತ್ತಿಗೆ ಕೊಯ್ದು ದೇವಸ್ಥಾನದ ಎದುರಿನ ನಾಯಿಗಳೆದುರು ಹಾಕುವುದು, ಎಂದು ಎಚ್ಚರಿಕೆಯನ್ನು ನೀಡುವ ಪಾಕ್‌ನ ಒಬ್ಬ ಮೌಲ್ವಿಯ ‘ವಿಡಿಯೋ’ವನ್ನು ಕೆನಡಾದ ಪಾಕಿಸ್ತಾನಿ ಮೂಲದ ಲೇಖಕ ತಾರೇಕ ಫತೆಹ ಟ್ವೀಟ್ ಮಾಡಿದ್ದಾರೆ.

೩. ಪಾಕ್‌ನ ಸುಳ್ಳುತನವನ್ನು ತಿಳಿಯಿರಿ !

ಪಾಕ್‌ನ ಬಂಧನದಲ್ಲಿರುವ ಭಾರತದ ಮಾಜಿ ನೌಕದಳ ಅಧಿಕಾರಿ ಕುಲಭೂಷಣ ಜಾಧವ ಇವರು ‘ಕಾನೂನುಪ್ರಕಾರ ಅವರ ಅಧಿಕಾರದ ಬಳಕೆ ಮಾಡಿ ಅವರ ಶಿಕ್ಷೆಯ ವಿರುದ್ಧ ಮರುವಿಚಾರಣಾ ಅರ್ಜಿಯನ್ನು ಸಲ್ಲಿಸಲು ನಿರಾಕರಿಸಿದ್ದಾರೆ’, ಎಂಬ ಮಾಹಿತಿಯನ್ನು ಪಾಕ್ ನೀಡಿದೆ.

೪. ತಮ್ಮನ್ನು ‘ಜಾತ್ಯತೀತರು’ ಎಂದುಕೊಳ್ಳುವವರು ಈಗ ಮಾತನಾಡುವರೇ ?

‘ಮುಸಲ್ಮಾನರ ಬಗ್ಗೆ ಉತ್ತಮ ಭಾವನೆಯುಳ್ಳ ಮುಸಲ್ಮಾನೇತರರು ಮತಾಂತರವಾಗಿ ಇಸ್ಲಾಮ್ ಸ್ವೀಕರಿಸುವುದಿಲ್ಲ. ಆದ್ದರಿಂದ ಅವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ಅವರು ನರಕ ಸೇರುತ್ತಾರೆ’, ಎಂದು ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಡಾ. ಝಾಕೀರ ನಾಯಿಕ್ ಹೇಳಿದ್ದಾನೆ.

೫. ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡುವ ಧಾರಾವಾಹಿಗಳನ್ನು ನಿಷೇಧಿಸಿ !

ಆಸಾಮಿ ಭಾಷೆಯ ‘ರೆಂಗೊನಿ’ ಎಂಬ ಖಾಸಗಿ ದೂರಚಿತ್ರವಾಹಿನಿಯ ‘ಬೇಗಮ್‌ಜಾನ’ ಎಂಬ ಧಾರಾವಾಹಿಯಲ್ಲಿ ‘ಹಿಂದೂ ಬ್ರಾಹ್ಮಣ ಯುವತಿಯು ಒಬ್ಬ ಮುಸಲ್ಮಾನ ಯುವಕನನ್ನು ವಿವಾಹವಾಗುತ್ತಾಳೆ’, ಎಂದು ತೋರಿಸಿ ‘ಲವ್‌ಜಿಹಾದ್’ಗೆ ಪ್ರೋತ್ಸಾಹ ನೀಡಲಾಗಿದೆ. ಹಿಂದೂ ಸಂಘಟನೆಗಳು ಅದನ್ನು ವಿರೋಧಿಸುತ್ತಿವೆ.

೬. ರಾಮಸೇತುವೆಯನ್ನು ಧ್ವಂಸ ಮಾಡುವ ಬೇಡಿಕೆಯನ್ನು ವಿರೋಧಿಸಿ !

ರಾಮಸೇತುವೆಯನ್ನು ಧ್ವಂಸ ಮಾಡಿ ನಿರ್ಮಿಸುತ್ತಿರುವ ‘ಸೇತುಸಮುದ್ರಮ್ ಯೋಜನೆಯನ್ನು ಪುನಃ ಪ್ರಾರಂಭಿಸಬೇಕು, ಎಂದು ತಮಿಳುನಾಡಿನ ದ್ರಮಕ ಪಕ್ಷದ ಲೋಕಸಭೆಯ ಸಂಸದ ಟಿ.ಆರ್. ಬಾಲೂ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

೭. ಮತಾಂಧರ ಹಿಂದೂವಿರೋಧಿ ಕೃತಿಯನ್ನು ತಿಳಿಯಿರಿ !

ಮತಾಂಧರು ಜುಲೈ ೧೦ ರಂದು ಹಿಮಾಚಲಪ್ರದೇಶದ ಕಾಂಗಡಾದಲ್ಲಿ ಒಂದು ಚಿಕ್ಕ ದೇವಸ್ಥಾನವನ್ನು ಧ್ವಂಸ ಮಾಡಿದರು. ಒಂದು ವಾರದ ಹಿಂದೆಯಷ್ಟೇ ಇಲ್ಲಿಯ ಹಿಂದೂಗಳು ಒಟ್ಟಿಗೆ ಸೇರಿ ಚಿಕ್ಕ ದೇವಸ್ಥಾನವನ್ನು ಕಟ್ಟಿದ್ದರು. ಅದಕ್ಕೆ ಇಲ್ಲಿಯ ಅಲ್ಪಸಂಖ್ಯಾತರು ವಿರೋಧಿಸಿದ್ದರು.