ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ೩೫ ಲಕ್ಷ ರೋಗಿಗಳಾಗಬಹುದು ! – ‘ಭಾರತೀಯ ವಿಜ್ಞಾನ ಸಂಸ್ಥೆ’ಯ ಅಂದಾಜು

ಬೆಂಗಳೂರು – ದೇಶದಲ್ಲಿ ಸಪ್ಟೆಂಬರ್ ೧ ರ ತನಕ ಕೊರೋನಾ ಪೀಡಿತರ ಸಂಖ್ಯೆ ೩೫ ಲಕ್ಷಕ್ಕಿಂತಲೂ ಹೆಚ್ಚಾಗಬಹುದು ಹಾಗೂ ೧೦ ಲಕ್ಷ ಸಕ್ರಿಯ ರೋಗಿಗಳೂ (ಎಕ್ಟಿವ್ ಕೇಸಸ್) ಆಗುವರು ಎಂದು ‘ಭಾರತೀಯ ವಿಜ್ಞಾನ ಸಂಸ್ಥೆ’ಯು ಅಂದರೆ ‘ಐ.ಐ.ಎಸ್.ಸಿ.’ನ ಪ್ರಾಧ್ಯಾಪಕರಾದ ಶಶಿಕುಮಾರ ಜಿ., ಪ್ರಾಧ್ಯಾಪಕ ದೀಪಕ ಎಸ್. ಹಾಗೂ ಅವರ ಸರಕಾರಿಗಳು ಅಂದಾಜಿಸಿದ್ದಾರೆ.

(ಸೌಜನ್ಯ : NEWS9 live)

ಈ ಸಂಸ್ಥೆಯ ಅಧ್ಯಯನದ ಪ್ರಕಾರ,

೧. ಸಪ್ಟೆಂಬರ ೧ ರ ತನಕ ಮಹಾರಾಷ್ಟ್ರದಲ್ಲಿ ರೋಗಿಗಳ ಸಂಖ್ಯೆ ೬ ಲಕ್ಷ ೩೦ ಸಾವಿರ, ದೆಹಲಿಯ ರೋಗಿಗಳ ಸಂಖ್ಯೆ ೨ ಲಕ್ಷ ೪೦ ಸಾವಿರ, ತಮಿಳುನಾಡಿನ ರೋಗಿಗಳ ಸಂಖ್ಯೆ ೧ ಲಕ್ಷ ೬೦ ಸಾವಿರ ಹಾಗೂ ಗುಜರಾತ್‌ನ ಕೊರೋನಾ ಪೀಡಿತರ ಸಂಖ್ಯೆ ೧ ಲಕ್ಷ ೮೦ ಸಾವಿರದ ತನಕ ತಲುಪಬಹುದು.

೨. ೧ ನವೆಂಬರ್ ತನಕ ದೇಶದಲ್ಲಿ ೧ ಕೋಟಿ ಕೊರೋನಾ ರೋಗಿಗಳು ಇರಬಹುದು, ಜನವರಿ ೨೦೨೧ ರ ತನಕ ದೇಶದಲ್ಲಿ ಕಡಿಮೆ ಪಕ್ಷ ೧೦ ಲಕ್ಷ ಜನರ ಜೀವ ಹೋಗಬಹುದು.

೩. ಒಂದುವೇಳೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ, ಮಾರ್ಚ್ ಕೊನೆಯ ತನಕ ಭಾರತದಲ್ಲಿ ಕೊರೋನಾದ ೬ ಕೋಟಿ ೨೦ ಲಕ್ಷ ಪ್ರಕರಣಗಳು ಇರಬಹುದು. ಆ ಕಾಲಾವಧಿಯಲ್ಲಿ ದೇಶದಲ್ಲಿ ೮೨ ಲಕ್ಷ ಸಕ್ರಿಯ ಪ್ರಕರಣಗಳು ಇರಬಹುದು ಹಾಗೂ ೨೮ ಲಕ್ಷ ಜನರು ಮೃತಪಡಬಹುದು.

ದೇಶದಲ್ಲಿ ೨೪ ಗಂಟೆಯಲ್ಲಿ ೩೨ ಸಾವಿರ ೬೯೪ ಹೊಸ ರೋಗಿಗಳು ಪತ್ತೆ

ಕಳೆದ ೨೪ ಗಂಟೆಗಳಲ್ಲಿ ಅತೀ ಹೆಚ್ಚು ಅಂದರೆ ೩೨ ಸಾವಿರದ ೬೯೪ ಹೊಸ ರೋಗಿಗಳು ಪತ್ತೆಯಾಗಿದ್ದು ಇಲ್ಲಿಯವರೆಗೆ ಒಂದೇ ದಿನದಲ್ಲಿ ಸಿಕ್ಕಿದ ರೋಗಿಗಳ ಸಂಖ್ಯೆಯಲ್ಲಿ ಇದು ಅತೀಹೆಚ್ಚು ಆಗಿದೆ. ಕಳೆದ ೨೪ ಗಂಟೆಗಳಲ್ಲಿ ೬೦೬ ರೋಗಿಗಳು ಮೃತಪಟ್ಟಿದ್ದಾರೆ. ದೇಶದಲ್ಲಿ ಕೊರೋನಾ ಪೀಡಿತರ ಒಟ್ಟು ಸಂಖ್ಯೆ ಸದ್ಯ ೯ ಲಕ್ಷದ ೬೮ ಸಾವಿರದ ೮೭೩ ರಷ್ಟಿದೆ.