‘ಹಿಂದೂ’ ಹೆಸರಿನ ಸುಳ್ಳು ಖಾತೆಯಿಂದ ಹಾಸ್ಯನಟಿ ಅಗ್ರಿಮಾ ಜೊಶುವಾಗೆ ಬಲಾತ್ಕಾರದ ಬೆದರಿಕೆಯೊಡ್ಡಿದ ಮತಾಂಧನ ಬಂಧನ

ಅನಗತ್ಯವಾಗಿ ಹಿಂದೂಗಳನ್ನು ದೂಷಿಸಲು ಪ್ರಯತ್ನಿಸುತ್ತಿರುವ ಮತಾಂಧರ ಬೂಟಾಟಿಕೆಯನ್ನು ತಿಳಿಯಿರಿ !

ಮುಂಬಯಿ – ಸಾಮಾಜಿಕ ಮಾಧ್ಯಮಗಳಲ್ಲಿ ‘ಉಮೇಶದಾದಾ’ ಈ ಹೆಸರಿನ ನಕಲಿ ಖಾತೆಯನ್ನು ತೆರೆದು ಅದರಿಂದ ಹಾಸ್ಯನಟಿ ಅಗ್ರಿಮಾ ಜೊಶುವಾಗೆ ಬಲಾತ್ಕಾರದ ಬೆದರಿಕೆಯೊಡ್ಡಿದ ಇಮ್ತಿಯಾಜ ಶೇಖ ಎಂಬ ಮತಾಂಧನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಇಮ್ತಿಯಾಜ ಸಾಮಾಜಿಕ ಮಾಧ್ಯಮಗಳಲ್ಲಿ ‘ಉಮೇಶದಾದಾ’ ಹೆಸರಿನ ಖಾತೆಯಿಂದ ಒಂದು ವಿಡಿಯೋವನ್ನು ಪ್ರಸಾರ ಮಾಡಿದ್ದನು. ಅದರಲ್ಲಿ ಆತ ಅಗ್ರಿಮಾ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾನೆ. ಹಾಸ್ಯನಟಿ ಅಗ್ರಿಮಾ ಜೊಶುವಾರವರು ಒಂದು ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಹಾಸ್ಯಯುಕ್ತ ಟೀಕೆ ಮಾಡಿ ಅವಮಾನಿಸಿದ್ದರು. ಇದರ ಬಗ್ಗೆ ಶಿವಾಜಿಪ್ರೇಮಿಗಳಿಂದ ಅಗ್ರಿಮಾಳ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗುತ್ತಿತ್ತು. ಅದೇರೀತಿ ಸಾಮಾಜಿಕ ಮಾಧ್ಯಮಗಳಿಂದಲೂ ಅಗ್ರಿಮಾಗೆ ಖಂಡಿಸಲಾಗುತ್ತಿದೆ. ಇದನ್ನೇ ದುರುಪಯೋಗಪಡಿಸಿಕೊಂಡು ಇಮ್ತಿಯಾಜ ಈ ಆಕ್ಷೇಪಾರ್ಹ ವಿಡಿಯೋವನ್ನು ಪ್ರಸಾರ ಮಾಡಿದ್ದನು. ಇಮ್ತಿಯಾಜನ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ ಎಂದು ಮುಂಬಯಿ ಪೊಲೀಸರು ‘ಟ್ವೀಟ್’ ಮೂಲಕ ತಿಳಿಸಿದ್ದಾರೆ. ‘ಮಹಿಳೆಯರಿಗೆ ಬೆದರಿಕೆಯೊಡ್ಡಿದರೆ, ಸೆರೆಮನೆಗೆ ಹಾಕುತ್ತೇವೆ’, ಎಂದು ಪೊಲೀಸರು ‘ಟ್ವೀಟ್’ ಮಾಡಿದ್ದಾರೆ.