ಗೋಪಾಲಗಂಜ(ಬಿಹಾರ)ನಲ್ಲಿ ೨೬೪ ಕೋಟಿ ಖರ್ಚು ಮಾಡಿ ನಿರ್ಮಿಸಿದ ಸೇತುವೆ ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿಹೋಯಿತು !

ಈ ರೀತಿಯ ಕಳಪೆ ಕಾಮಗಾರಿ ಮಾಡಿ ಜನರ ಹಣವನ್ನು ಪೋಲು ಮಾಡುವವರನ್ನು ಸರಕಾರವು ಜೀವಾವಧಿ ಸೆರೆಮನೆಗೆ ಅಟ್ಟಬೇಕು !

ಗೋಪಾಲಗಂಜ (ಬಿಹಾರ) – ಇಲ್ಲಿ ೨೬೪ ಕೋಟಿ ಖರ್ಚು ಮಾಡಿ ಗಂಧಕ ನದಿಯ ಮೇಲೆ ಕಟ್ಟಿದ್ದ ಸತ್ತರಘಾಟ ಸೇತುವೆಯು ಅತೀವೃಷ್ಟಿಯಿಂದಾಗಿ ೨೯ ದಿನಗಳಲ್ಲೇ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಇದರಿಂದ ಲಾಲಛಾಪಾರ, ಮುಜಫ್ಫರಪುರ, ಮೋತಿಹಾರಿ ಹಾಗೂ ಬೇತಿಯಾ ಈ ಊರುಗಳ ಸಂಪರ್ಕ ಕಡಿತಗೊಂಡಿದೆ. ೨೯ ದಿನಗಳ ಹಿಂದೆ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಈ ಸೇತುವೆಯನ್ನು ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಉದ್ಘಾಟಿಸಿದ್ದರು.
ಅತೀವೃಷ್ಟಿಯಿಂದಾಗಿ ಸದ್ಯ ಬಿಹಾರದಲ್ಲಿ ಎಲ್ಲ ಕಡೆಗಳಲ್ಲಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಗೋಪಾಲಗಂಜನಲ್ಲಿ ಜುಲೈ ೧೫ ರಂದು ೩ ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರಿನ ಪ್ರವಾಹ ಇತ್ತು. ಈ ಪ್ರವಾಹದಿಂದಾಗಿ ಸೇತುವೆ ಕೊಚ್ಚಿ ಹೋಯಿತು ಎಂದು ಹೇಳಲಾಗುತ್ತಿದೆ. ಈ ಸೇತುವೆ ೨೦೧೨ ರಲ್ಲಿ ಕಟ್ಟಲಾಗಿದ್ದು ೨೯ ದಿನಗಳ ಹಿಂದೆ ಇದರ ಉದ್ಘಾಟನೆಯನ್ನು ಮಾಡಲಾಗಿತ್ತು.

ಇದನ್ನು ಯಾರಾದರೂ ಭ್ರಷ್ಟಾಚಾರ ಎಂದು ಹೇಳಿದರೆ ಹುಷಾರ್… ! – ರಾಷ್ಟ್ರೀಯ ಜನತಾ ದಳದಿಂದ ನಿತೀಶ ಇವರ ಮೇಲೆ ವ್ಯಂಗ್ಯಾತ್ಮಕ ಟೀಕೆ

ಈ ಘಟನೆಯ ಮೇಲೆ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವೀ ಯಾದವ ಇವರು ಮುಖ್ಯಮಂತ್ರಿ ನಿತೀಶ ಕುಮಾರ ಮೇಲೆ ವ್ಯಂಗ್ಯವಾಗಿ ಟೀಕಿಸಿದ್ದಾರೆ. ಅವರು, ‘೮ ವರ್ಷಗಳಲ್ಲಿ ೨೬೩.೪೭ ಕೋಟಿ ಖರ್ಚು ಮಾಡಿ ನಿರ್ಮಿಸಲಾದ ಸೇತುವೆಯನ್ನು ಮುಖ್ಯಮಂತ್ರಿ ನಿತೀಶ ಕುಮಾರ ಇವರು ೧೬ ಜೂನ್ ೨೦೨೦ ರಂದು ಉದ್ಘಾಟನೆ ಮಾಡಿದ್ದರು. ಆ ಸೇತುವೆ ೨೯ ದಿನಗಳಲ್ಲೇ ಕೊಚ್ಚಿ ಹೋಯಿತು. ಯಾರಾದರು ಭ್ರಷ್ಟಾಚಾರ ಅಂತ ಹೇಳಿದರೆ ಹುಷಾರ್ ! ೨೬೩ ಕೋಟಿ ರೂಪಾಯಿಯ ಮಾಧ್ಯಮದಿಂದ ಉತ್ತಮ ಆಡಳಿತವನ್ನು ತೋರಿಸಿದ್ದಾರೆ. ಅವರಲ್ಲಿರುವ ಇಲಿಯು ಇಷ್ಟು ರೂಪಾಯಿಯ ಸರಾಯಿ ಕುಡಿಯುತ್ತದೆ” ಎಂದು ಹೇಳಿದ್ದಾರೆ.