ಶ್ರೀಕೃಷ್ಣ ಜನ್ಮಭೂಮಿಯ ಮೇಲೆ ಶಾಹಿ ಈದ್ಗಾ ಮಸೀದಿಯಿಂದಾಗಿರುವ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಅರ್ಜಿ ಮಥುರಾ ನ್ಯಾಯಾಲಯದಿಂದ ತಿರಸ್ಕೃತ

ಮಥುರಾದ ಶ್ರೀಕೃಷ್ಣ ಜನ್ಮಭೂಮಿಗೆ ಸೇರಿದ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಈದ್ಗಾ ಮಸೀದಿಯಿಂದಾಗಿರುವ ಅತಿಕ್ರಮಣ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸೆಪ್ಟೆಂಬರ್ ೩೦ ರಂದು ಮಥುರಾ ನ್ಯಾಯಾಲಯ ತಿರಸ್ಕರಿಸಿದೆ. ಭಗವಾನ್ ಕೃಷ್ಣ ವಿರಾಜಮಾನ್, ಕಟರಾ ಕೇಶವ ದೇವ ಖೇವಾಟ್, ರಂಜನಾ ಅಗ್ನಿಹೋತ್ರಿ ಸೇರಿದಂತೆ ಒಟ್ಟು ಆರು ಮಂದಿ ಅರ್ಜಿ ಸಲ್ಲಿಸಿದ್ದರು.

‘ಐಕಿಯಾ’ ಸಂಸ್ಥೆಯು ಯೋಗಾಸನ ಅಭಿಯಾನವನ್ನು ಕೀಳಾಗಿ ತೋರಿಸುವ ವೀಡಿಯೋವನ್ನು ಹಿಂಪಡೆದು ಕ್ಷಮೆಯಾಚಿಸಬೇಕು ! – ಅಮೇರಿಕಾದಲ್ಲಿ ಆಕ್ರೋಶಗೊಂಡ ಹಿಂದೂಗಳ ಆಗ್ರಹ

ಮೇಜು, ಖುರ್ಚಿ, ಕಪಾಟುಗಳು ಇತ್ಯಾದಿ ಪೀಠೋಪಕರಣಗಳನ್ನು ತಯಾರಿಸುವ ಬಹುರಾಷ್ಟ್ರೀಯ ವ್ಯಾಪಾರಿ ಸಂಸ್ಥೆ ‘ಐಕಿಯಾ’ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ ‘ಐಕಿಯಾ ಪ್ರಾಡಕ್ಟ್ಸ’ ವೀಡಿಯೋದಲ್ಲಿ ಯೋಗಾಸನದ ಅಭಿಯಾನವನ್ನು ಕೀಳಾಗಿ ತೋರಿಸಲಾಗಿದೆ. ಈ ವೀಡಿಯೋವನ್ನು ತಕ್ಷಣ ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು, ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದಲ್ಲಿ ಎಲ್ಲ ೩೨ ಆರೋಪಿಗಳು ನಿರ್ದೋಷಿ

೧೯೯೨ ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಣಪುರಿಯ ಸಿಬಿಐನ ವಿಶೇಷ ನ್ಯಾಯಾಲಯವು ಭಾಜಪದ ಹಿರಿಯ ಮುಖಂಡರಾದ ಲಾಲಕೃಷ್ಣ ಅಡವಾಣಿ, ಮುರಳಿ ಮನೋಹರ ಜೋಶಿ, ವಿನಯ ಕಟಿಯಾರ್, ಉಮಾ ಭಾರತಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಹ, ಸಾಧ್ವಿ ಋತಂಭರಾ ಇವರೊಂದಿಗೆ ಎಲ್ಲ ೩೨ ಆರೋಪಿಗಳನ್ನು ನಿದೋರ್ಷಿಗಳೆಂದು ತೀರ್ಪು ನೀಡಿದೆ.

ನಿಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ‘ಅಪ್‌ಲೋಡ್ ಮಾಡುವಾಗ ಜಾಗರೂಕರಾಗಿರಿ ! – ಸೈಬರ್ ಪೊಲೀಸ್

ಪ್ರಸ್ತುತ ‘ಫೇಸ್‌ಬುಕ್ ಈ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ‘ಕಪಲ ಚ್ಯಾಲೆಂಜ್ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಅನೇಕ ದಂಪತಿಗಳು ತಮ್ಮ ಫೋಟೋಗಳನ್ನು ‘ಅಪ್‌ಲೋಡ್ ಮಾಡಿದ್ದಾರೆ. ತಮ್ಮ ಛಾಯಾಚಿತ್ರವನ್ನು ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವಾಗ ಬಹಳ ಜಾಗರೂಕರಾಗಿರಬೇಕು.

ತಮಿಳುನಾಡಿನಲ್ಲಿ ಹಿಂದೂ ವಿರೋಧಿ ನಾಯಕ ದಿವಂಗತ ಪೆರಿಯಾರ್ ಅವರ ಪ್ರತಿಮೆಯ ಮೇಲೆ ಕೇಸರಿ ಬಣ್ಣ ಎರಚಲಾಯಿತು

ತಮಿಳುನಾಡಿನ ಹಿಂದೂ ವಿರೋಧಿ ನಾಯಕ ದಿವಂಗತ ಇ.ವಿ. ರಾಮಸ್ವಾಮಿ ‘ಪೆರಿಯಾರ್’ ಪ್ರತಿಮೆಯ ಮೇಲೆ ಅಜ್ಞಾತರು ಕೇಸರಿ ಬಣ್ಣ ಹಾಗೂ ಚಪ್ಪಲಿಗಳನ್ನು ಹಾಕಿರುವ ಘಟನೆ ನಡೆದಿದೆ. ಈ ಪ್ರತಿಮೆ ಇನಾಮಕುಲಾತೂರನ ಸಮತುವಾಪುರಮ್ ಕಾಲೋನಿಯಲ್ಲಿದೆ.

ಕರ್ಣಾವತಿ (ಗುಜರಾತ್) ನ ಆರ್ಚರ್ ಆರ್ಟ್ ಗ್ಯಾಲರಿಯಿಂದ ಹಿಂದೂ ವಿರೋಧಿ ಚಿತ್ರಕಾರ ಎಂ.ಎಫ್. ಹುಸೇನ್ ಅವರ ಚಿತ್ರಗಳ ಆನ್‌ಲೈನ್ ಮಾರಾಟ

ಗುಜರಾತ್‌ನ ಕರ್ಣಾವತಿಯಲ್ಲಿನ ಆರ್ಚರ್ ಆರ್ಟ್ ಗ್ಯಾಲರಿ ಇವರಿಂದ ಚಿತ್ರಗಾರರ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ. ಈ ಗ್ಯಾಲರಿಯ ಜಾಲತಾಣದಿಂದ ಕೆಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇವರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಇವರ ಕೆಲವು ಚಿತ್ರಗಳು ಒಳಗೊಂಡಿದೆ.

ಚಿತ್ತೂರಿನಲ್ಲಿರುವ ಶಿವನ ದೇವಸ್ಥಾನದ ನಂದಿ ಮೂರ್ತಿ ಧ್ವಂಸ

ಇಲ್ಲಿನ ಗಂಗಾಧರ ನೆಲ್ಲೂರು ಪ್ರದೇಶದ ಅಗಾರಾ ಮಂಗಲಮ್ ಗ್ರಾಮದಲ್ಲಿರುವ ಶಿವನ ದೇವಸ್ಥಾನದಲ್ಲಿರುವ ನಂದಿಯ ವಿಗ್ರಹವನ್ನು ರಾತ್ರಿಯ ಸಮಯದಲ್ಲಿ ಅಜ್ಞಾತರು ಧ್ವಂಸ ಮಾಡಿದ್ದಾರೆ. ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದರೂ ದಾಳಿಕೋರರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.

ಖ್ಯಾತ ದಿವಂಗತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಮ್ ಅವರು ನೆಲ್ಲೂರಿನಲ್ಲಿ ಪೂರ್ವಜರ ವಾಸಸ್ಥಾನವನ್ನು ಕಾಂಚಿ ಕಾಮಕೋಟಿ ಪೀಠಕ್ಕೆ ದಾನ ನೀಡಿದ್ದರು !

ಖ್ಯಾತ ಗಾಯಕ ಪದ್ಮಭೂಷಣ ಎಸ್.ಪಿ. ಬಾಲಸುಬ್ರಮಣ್ಯಮ್ ಇವರು ಸೆಪ್ಟೆಂಬರ್ ೨೫ ರಂದು ನಿಧನರಾದರು. ಅವರು ದೇಶದ ಅನೇಕ ಭಾಷೆಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರನ್ನು ಧಾರ್ಮಿಕ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. ಅವರು ಆಂಧ್ರಪ್ರದೇಶದ ನೆಲ್ಲೂರಿನ ತಿಪ್ಪರಜುವಾರಿ ಸ್ಟ್ರೀಟ್‌ನಲ್ಲಿರುವ ತಮ್ಮ ಪಿತ್ರಾರ್ಜಿತ ಮನೆಯನ್ನು ಕಾಂಚಿ ಕಾಮಕೋಟಿ ಪೀಠಕ್ಕೆ ಇದೇ ವರ್ಷದ ಫೆಬ್ರವರಿಯಂದು ದಾನ ಮಾಡಿದ್ದರು.

ಫಾರುಕ ಅಬ್ದುಲ್ಲಾರಂತಹ ಪ್ರತ್ಯೇಕತಾವಾದಿ ಹಾಗೂ ದೇಶವಿರೋಧಿ ಪ್ರವೃತ್ತಿಯನ್ನು ಪೋಷಿಸುವ ನಮ್ಮ ವ್ಯವಸ್ಥೆಯಲ್ಲಿಯೇ ಲೋಪದೋಷಗಳಿವೆ ! – ಶ್ರೀ. ಸುಶೀಲ ಪಂಡಿತ್, ಸಂಸ್ಥಾಪಕರು, ರೂಟ್ಸ್ ಇನ್ ಕಶ್ಮೀರ್

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್‌ನ ಸಂಸದ ಡಾ. ಫಾರುಕ ಅಬ್ದುಲ್ಲಾ ಇವರ ಕಾಲದಲ್ಲಿ ಸಾವಿರಾರು ಹಿಂದೂಗಳ ನರಮೇಧವಾಯಿತು, ಚಕಮಕಿಯಲ್ಲಿ ಸಾವಿಗೀಡಾದ ಭಯೋತ್ಪಾದಕರ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಜಾರಿಯಾಯಿತು, ಕಾಶ್ಮೀರದಲ್ಲಿಯ ಜನರು ಭಾರತದಲ್ಲಿ ಇರಬೇಕೋ ಇಲ್ಲವೋ ಇದರ ಬಗ್ಗೆ ಜನಾಭಿಪ್ರಾಯ ಕೇಳಬೇಕೆಂದು ಒತ್ತಾಯಿಸಲಾಯಿತು,

ಸೋವಿಯತ್ ರಷ್ಯಾದಿಂದ ಸ್ವತಂತ್ರವಾಗಿದ್ದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಎರಡರಲ್ಲೂ ಯುದ್ಧ ಪ್ರಾರಂಭ

ಭಾರತ ಮತ್ತು ಚೀನಾ ನಡುವೆ ಯುದ್ಧವಾಗುವ ಸಾಧ್ಯತೆಯ ನಡುವೆಯೇ ಸೋವಿಯತ್ ರಷ್ಯಾದಿಂದ ಬೇರ್ಪಟ್ಟ ಎರಡು ದೇಶಗಳಾದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಗಡಿ ವಿವಾದದಿಂದ ಯುದ್ಧ ಆರಂಭವಾಗಿದೆ.