ಕರ್ಣಾವತಿ (ಗುಜರಾತ್) ನ ಆರ್ಚರ್ ಆರ್ಟ್ ಗ್ಯಾಲರಿಯಿಂದ ಹಿಂದೂ ವಿರೋಧಿ ಚಿತ್ರಕಾರ ಎಂ.ಎಫ್. ಹುಸೇನ್ ಅವರ ಚಿತ್ರಗಳ ಆನ್‌ಲೈನ್ ಮಾರಾಟ

ಹಿಂದೂ ಜನಜಾಗೃತಿ ಸಮಿತಿಯಿಂದ ಪತ್ರ ಬರೆಯುವ ಮೂಲಕ ವಿರೋಧ

ಮುಂಬಯಿ – ಗುಜರಾತ್‌ನ ಕರ್ಣಾವತಿಯಲ್ಲಿನ ಆರ್ಚರ್ ಆರ್ಟ್ ಗ್ಯಾಲರಿ ಇವರಿಂದ ಚಿತ್ರಗಾರರ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ. ಈ ಗ್ಯಾಲರಿಯ ಜಾಲತಾಣದಿಂದ ಕೆಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇವರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಇವರ ಕೆಲವು ಚಿತ್ರಗಳು ಒಳಗೊಂಡಿದೆ. ಈ ಚಿತ್ರಗಳನ್ನು ‘archerindia.com/m-f-husain’ ಲಿಂಕ್‌ನಲ್ಲಿಯೂ ಇಡಲಾಗಿದೆ. ಈ ಮಾಹಿತಿಯು ಧರ್ಮಪ್ರೇಮಿಯಿಂದ ಸಿಕ್ಕಿದ ನಂತರ ಹಿಂದೂ ಜನಜಾಗೃತಿ ಸಮಿತಿಯು ಈ ಗ್ಯಾಲರಿಗೆ ಪತ್ರವೊಂದನ್ನು ಕಳುಹಿಸಿದೆ. ಈ ಮೂಲಕ ಹುಸೇನ್ ಅವರು ಬಿಡಿಸಿದ ಚಿತ್ರಗಳನ್ನು ತೆಗೆದುಹಾಕುವಂತೆ ಹಾಗೂ ಅವರನ್ನು ಹೊಗಳುವುದನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.
‘ಹುಸೇನ್ ಹಿಂದೂ ದೇವತೆಗಳ ಮತ್ತು ಭಾರತ ಮಾತೆಯ ನಗ್ನ ಚಿತ್ರಗಳನ್ನು ಬಿಡಿಸಿ ಅದನ್ನು ಹರಾಜು ಮಾಡಿದ್ದಾರೆ. ಇದರಿಂದ ಲಕ್ಷಾಂತರ ಹಿಂದೂಗಳ ಧಾರ್ಮಿಕ ಮತ್ತು ರಾಷ್ಟ್ರೀಯ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ಈ ಪತ್ರದಲ್ಲಿ ಹೇಳಿದೆ. ಈ ಪತ್ರಕ್ಕೆ ಇನ್ನೂ ಯಾವುದೇ ಉತ್ತರ ಬಂದಿಲ್ಲ.

ಹಿಂದೂ ಧರ್ಮಾಭಿಮಾನಿಗಳು ಮುಂದಿನ ಸಂಪರ್ಕಸಂಖ್ಯೆಯಲ್ಲಿ ಕಾನೂನು ರೀತಿಯಲ್ಲಿ ಖಂಡಿಸುತ್ತಿದ್ದಾರೆ.

ವಿ. ಅಂಚೆ : [email protected]

ದೂರವಾಣಿ ಕರೆ : ೭೯೪೦೦೬೭೬೪೧ / ೭೯೨೭೪೧೩೮೭೨

ರಾಷ್ಟ್ರದ್ರೋಹಿ ಹಾಗೂ ಹಿಂದೂದ್ರೋಹಿ ಘಟನೆಗಳನ್ನು ಸಂಯಮದಿಂದ ನಿಷೇಧಿಸಿರಿ !

ಹಿಂದೂದ್ರೋಹಿಗಳನ್ನು ನಿಷೇಧಿಸುವ ಮುಖ್ಯ ಉದ್ದೇಶವೆಂದರೆ ಅದರ ಸೈದ್ಧಾಂತಿಕವಾಗಿ ಬದಲಾವಣೆ ಮಾಡುವುದಾಗಿದೆ. ಆದ್ದರಿಂದ ಯಾರೇ ನಿಷೇಧ ಮಾಡಿದರೂ ಸೈದ್ಧಾಂತಿಕ ಸೂತ್ರಗಳ ಆಧಾರದ ಮೇಲೆ ಮಾಡಿರಿ ! ತಪ್ಪು ಮಾಡುವ ವ್ಯಕ್ತಿಗೆ ತಪ್ಪನ್ನು ತೋರಿಸಿ ಯೋಗ್ಯ ಮಾರ್ಗಕ್ಕೆ ತರುವುದು, ಈ ವ್ಯಾಪಕ ದೃಷ್ಟಿಕೋನದಿಂದ ಖಂಡಿಸಲಾಗುತ್ತಿದ್ದೇವೆ ಎಂದಿರಬೇಕು !