ಖ್ಯಾತ ದಿವಂಗತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಮ್ ಅವರು ನೆಲ್ಲೂರಿನಲ್ಲಿ ಪೂರ್ವಜರ ವಾಸಸ್ಥಾನವನ್ನು ಕಾಂಚಿ ಕಾಮಕೋಟಿ ಪೀಠಕ್ಕೆ ದಾನ ನೀಡಿದ್ದರು !

ನೆಲ್ಲೂರು (ಆಂಧ್ರಪ್ರದೇಶ) – ಖ್ಯಾತ ಗಾಯಕ ಪದ್ಮಭೂಷಣ ಎಸ್.ಪಿ. ಬಾಲಸುಬ್ರಮಣ್ಯಮ್ ಇವರು ಸೆಪ್ಟೆಂಬರ್ ೨೫ ರಂದು ನಿಧನರಾದರು. ಅವರು ದೇಶದ ಅನೇಕ ಭಾಷೆಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರನ್ನು ಧಾರ್ಮಿಕ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು. ಅವರು ಆಂಧ್ರಪ್ರದೇಶದ ನೆಲ್ಲೂರಿನ ತಿಪ್ಪರಜುವಾರಿ ಸ್ಟ್ರೀಟ್‌ನಲ್ಲಿರುವ ತಮ್ಮ ಪಿತ್ರಾರ್ಜಿತ ಮನೆಯನ್ನು ಕಾಂಚಿ ಕಾಮಕೋಟಿ ಪೀಠಕ್ಕೆ ಇದೇ ವರ್ಷದ ಫೆಬ್ರವರಿಯಂದು ದಾನ ಮಾಡಿದ್ದರು. ಆ ಸ್ಥಳವನ್ನು ಈಗ ವೈದಿಕ ಪಾಠಶಾಲೆಯನ್ನು ನಡೆಸಲು ಬಳಸಲಾಗುವುದು.

ನೆಲ್ಲೂರಿನಲ್ಲಿ ನಡೆದ ಮಹತ್ವದ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ವಿಜಯೇಂದ್ರ ಸರಸ್ವತಿಯವರನ್ನು ಆಹ್ವಾನಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಮ್ ಅವರು ಪವಿತ್ರ ಶ್ಲೋಕಗಳನ್ನು ಪಠಿಸುವ ಮೂಲಕ ವಿಧಿಗಳಲ್ಲಿ ಭಾಗವಹಿಸಿದ್ದರು.