ಚಿತ್ತೂರಿನಲ್ಲಿರುವ ಶಿವನ ದೇವಸ್ಥಾನದ ನಂದಿ ಮೂರ್ತಿ ಧ್ವಂಸ

  • ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲೆ ಮುಂದುವರಿದ ದಾಳಿ !
  • ಕ್ರೈಸ್ತ ಮುಖ್ಯಮಂತ್ರಿ ಜಗನಮೋಹನ್ ರೆಡ್ಡಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಆಂಧ್ರಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ, ಆದ್ದರಿಂದ ಹಿಂದೂಗಳು ಏನೆಂದು ತಿಳಿದುಕೊಳ್ಳಬೇಕು ?
  • ‘ಹಿಂದೂ ರಾಷ್ಟ್ರದಲ್ಲಿ ಇತರ ಧರ್ಮದವರ ಬಗ್ಗೆ ಏನಾಗಬಹುದು ?’ ಎಂದು ಕೇಳುವವರು ಇತರ ಧರ್ಮೀಯರ ಆಡಳಿತಗಾರರ ರಾಜ್ಯಗಳಲ್ಲಿ ಹಿಂದೂಗಳ ಬಗ್ಗೆ ಏನಾಗುತ್ತಿದೆ ಎಂಬುದರ ಬಗ್ಗೆ ಏಕೆ ಮಾತನಾಡುವುದಿಲ್ಲ.

ಮೇಲಿನ ಚಿತ್ರವು ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಮಾಹಿತಿಗಾಗಿ ಈ ಚಿತ್ರವನ್ನು ಪ್ರಕಟಿಸಲಾಗಿದೆ. – ಸಂಪಾದಕರು

ಚಿತ್ತೂರು (ಆಂಧ್ರಪ್ರದೇಶ) – ಇಲ್ಲಿನ ಗಂಗಾಧರ ನೆಲ್ಲೂರು ಪ್ರದೇಶದ ಅಗಾರಾ ಮಂಗಲಮ್ ಗ್ರಾಮದಲ್ಲಿರುವ ಶಿವನ ದೇವಸ್ಥಾನದಲ್ಲಿರುವ ನಂದಿಯ ವಿಗ್ರಹವನ್ನು ರಾತ್ರಿಯ ಸಮಯದಲ್ಲಿ ಅಜ್ಞಾತರು ಧ್ವಂಸ ಮಾಡಿದ್ದಾರೆ. ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದರೂ ದಾಳಿಕೋರರನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗುತ್ತಿದೆ. (ಇತರ ಧರ್ಮಗಳ ಪೂಜಾ ಸ್ಥಳಗಳ ಮೇಲೆ ಇಂತಹ ದಾಳಿಗಳು ನಡೆಯುವುದಿಲ್ಲ ಹಾಗೂ ಒಂದುವೇಳೆ ಹಾಗೆ ಆದರೇ, ಪೊಲೀಸರು ಯಾರನ್ನಾದರೂ ಹಿಡಿದು ಆರೋಪಿಯನ್ನಾಗಿ ಮಾಡುತ್ತಾರೆ; ಆದರೆ ಹಿಂದೂ ದೇವಸ್ಥಾನಗಳ ಮೇಲಿನ ದಾಳಿಯ ಹಿಂದಿನ ಆರೋಪಿಗಳನ್ನು ಬಂಧಿಸಲಾಗುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ರಾಜ್ಯದ ಗೃಹಸಚಿವರು ‘ದೇವಸ್ಥಾನಗಳ ಮೇಲಿನ ದಾಳಿಯ ಹಿಂದೆ ಸಂಚಾಗಿದ್ದು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’, ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ. (ಹಾಗಾದರೆ, ಅಪರಾಧಿಗಳ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ಳುವಿರಿ, ಎಂಬುದು ಅವರು ಹೇಳಬೇಕು ! ಪಿತೂರಿ ನಡೆಯುವವರೆಗೂ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ನಿದ್ದೆ ಮಾಡುತ್ತಿದ್ದರೇ ? ದೇವಸ್ಥಾನಗಳನ್ನು ಧ್ವಂಸ ಮಾಡುವವರನ್ನು ಹಿಡಿಯಲು ಸಾಧ್ಯವಾಗದ ಪೊಲೀಸರಿಗೆ ಭಯೋತ್ಪಾದಕರನ್ನು ಹೇಗೆ ಹಿಡಿಯುತ್ತಾರೆ ? – ಸಂಪಾದಕರು)