ಕಾಂಚೀಪುರಂನ ಪ್ರಾಚೀನ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ ದೊರೆತ ಅರ್ಧ ಕೆಜಿ ಚಿನ್ನ ಸರಕಾರದ ವಶಕ್ಕೆ !

ಕಾಂಚೀಪುರಂನ ಉತಿರಾಮೆರೂರಿನಲ್ಲಿರುವ ಪುರಾತನ ಶಿವ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿರುವಾಗ ಗ್ರಾಮಸ್ಥರಿಗೆ ದೇವಾಲಯದ ಗರ್ಭಗೃಹದ ಮೆಟ್ಟಿಲುಗಳ ಕೆಳಗೆ ೫೬೫ ಗ್ರಾಂ ಚಿನ್ನ ಸಿಕ್ಕಿದೆ. ಸರಕಾರಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ತಿಳಿದಾಗ ಅವರು ಸ್ಥಳಕ್ಕೆ ಧಾವಿಸಿ ಚಿನ್ನದ ಮೇಲೆ ಸರಕಾರದ ಹಕ್ಕಿದೆ ಎಂದು ಹೇಳಿದರು

ಅಯೋಧ್ಯೆಯ ಶ್ರೀ ರಾಮಮಂದಿರವನ್ನು ಭಕ್ತರ ನಿಧಿಯಿಂದ ನಿರ್ಮಿಸಲಾಗುವುದು ! – ಚಂಪತ ರಾಯ, ಪ್ರಧಾನ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಭಕ್ತರ ಆರ್ಥಿಕ ನೆರವಿನೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸಂಕ್ರಾಂತಿಯಿಂದ ನಿಧಿಸಂಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಶ್ರೀ. ಚಂಪತ ರಾಯ್‌ ಅವರು ಡಿಸೆಂಬರ್ ೧೨ ರಂದು ಮುಂಬಯಿ ಮರಾಠಿ ಪತ್ರಕಾರ ಸಂಘದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಮಸೀದಿಗಳು ಮತ್ತು ಮದರಸಾಗಳಿಗೆ ಸಿಗುವ ಸರಕಾರಿ ಅನುದಾನ ರದ್ದುಪಡಿಸಲಾಗುವುದು

ಮಧ್ಯಪ್ರದೇಶ ಸರಕಾರವು ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೊಳಿಸುತ್ತಿದೆ. ಈ ಮಸೂದೆಯನ್ನು ‘ಧರ್ಮ ಸ್ವಾತಂತ್ರ್ಯ’ ಎಂದು ಕರೆಯಲಾಗುವುದು. ಧಾರ್ಮಿಕ ಸಂಘಟನೆಗಳು ಲವ್ ಜಿಹಾದ್ ಮತ್ತು ಮತಾಂತರಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಹಾಗೂ ಇಂತಹ ಸಂಘಟನೆಗಳಿಗೆ ಸರಕಾರದಿಂದ ಸೌಲಭ್ಯಗಳು ಸಿಗುತ್ತಿದ್ದರೆ, ಅವುಗಳನ್ನು ಅನುದಾನದ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಹಿಂದೂ ಹೆಸರು ಇಟ್ಟುಕೊಂಡು ಮತಾಂಧ ಯುವಕನಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಶೋಷಣೆ

ಹಿಂದೂ ಎಂದು ಹೇಳಿ ತನ್ನ ನಿಜವಾದ ಗುರುತನ್ನು ಮರೆಮಾಚಿ ೧೫ ವರ್ಷದ ಹಿಂದೂ ಬಾಲಕಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ಮದುವೆಯ ಭರವಸೆ ನೀಡಿ, ಆಕೆಯನ್ನು ಅಪಹರಿಸಿ ಲೈಂಗಿಕ ಕಿರುಕುಳ ಕೊಟ್ಟು ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ೧೮ ವರ್ಷದ ಶೋಯೆಬ್ ಖಾನ್ ಎಂಬವನನ್ನು ಬಂಧಿಸಿದ್ದಾರೆ.

ಮಲೇಷ್ಯಾದ ರೋಹಿಂಗ್ಯಾಗಳ ಭಯೋತ್ಪಾದಕ ಸಂಘಟನೆಯು ಭಾರತದ ಮೇಲೆ ದಾಳಿ ನಡೆಸುವ ಸಿದ್ಧತೆಯಲ್ಲಿ !

ರೋಹಿಂಗ್ಯಾ ಮುಸ್ಲಿಮರೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಸಂಘಟನೆ ಭಾರತದಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳಿಗೆ ತಿಳಿದುಬಂದಿದೆ. ಮಹಿಳೆಯ ನೇತೃತ್ವದಲ್ಲಿ, ಭಯೋತ್ಪಾದಕ ಸಂಘಟನೆಯು ಮುಂದಿನ ಕೆಲವು ವಾರಗಳಲ್ಲಿ ಭಾರತೀಯ ನಗರಗಳಲ್ಲಿ ದಾಳಿ ನಡೆಸಬಹುದು.

ಹೆಚ್ಚಿನ ಯುವತಿಯರು ಒಮ್ಮತದ ಸಂಬಂಧ ಇಟ್ಟುಕೊಳ್ಳುತ್ತಾರೆ ಹಾಗೂ ಪ್ರೀತಿಭಂಗವಾದಾಗ ಅತ್ಯಾಚಾರದ ಬಗ್ಗೆ ದೂರು ನೀಡುತ್ತಾರೆ ! – ಕಿರಣಮಯಿ ನಾಯಕ, ಛತ್ತೀಸ್‌ಗಡ ಮಹಿಳಾ ಆಯೋಗದ ಅಧ್ಯಕ್ಷೆ

ಹೆಚ್ಚಿನ ಯುವತಿಯರು ಒಮ್ಮತದ ಸಂಬಂಧ ಇಟ್ಟುಕೊಳ್ಳುತ್ತಾರೆ ಹಾಗೂ ಪ್ರೀತಿಭಂಗವಾದಾಗ ಅತ್ಯಾಚಾರವಾಗಿದೆ ಎಂದು ಆರೋಪಿಸುತ್ತಾರೆ ಎಂದು ಛತ್ತೀಸ್‌ಗಡದ ಮಹಿಳಾ ಆಯೋಗದ ಅಧ್ಯಕ್ಷೆ ಕಿರಣಮಯಿ ನಾಯಕ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇವರ ಜಯಂತಿ ನಿಮಿತ್ತ

ಇಂದಿನ ಯುವ ಪೀಳಿಗೆಯು ಸ್ವೇಚ್ಛಾಚಾರದ ಹೆಸರಿನಲ್ಲಿ ತಮ್ಮನ್ನು ತಾವು ಗುಲಾಮಗಿರಿಯಲ್ಲಿ ಸಿಲುಕಿಸುತ್ತಿದ್ದಾರೆ. ಇಂದಿನ ಜಾತ್ಯತೀತ ಶಿಕ್ಷಣ ಪದ್ಧತಿ ಮತ್ತು ಪಾಶ್ಚಾತ್ಯ ಅಂಧಾನುಕರಣೆಗಳಿಂದ ಅನೇಕ ಯುವತಿಯರು ‘ಲವ್ ಜಿಹಾದ್’ ನಂತಹ ಸಂಚಿನಲ್ಲಿ ಸಿಲುಕಿ ದೇಶದ್ರೋಹದ ಕೃತ್ಯವನ್ನು ಮಾಡುತ್ತಿದ್ದಾರೆ.

ಹಿಂದುತ್ವವು ಅವಸಾನವಾಗುತ್ತಿರುವಾಗ ನಿದ್ದೆಯಲ್ಲಿರುವ ಕೇರಳದ ಹಿಂದೂಗಳು !

೧೯೨೧ ನೇ ಇಸವಿಯಲ್ಲಾದ ಮೋಪಲಾ ಗಲಭೆಯ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಾರೆ. ಈ ಗಲಭೆಯಲ್ಲಿ ಜಿಹಾದಿಗಳು ಸಾವಿರಾರು ಹಿಂದೂಗಳ ಹತ್ಯೆ ಮಾಡಿದ್ದರು, ನೂರಾರು ಹಿಂದೂ ಮಹಿಳೆಯರ ಬಲಾತ್ಕಾರ ಮಾಡಿದ್ದರು, ನೂರಾರು ಹಿಂದೂ ಮಹಿಳೆಯರನ್ನು ಮತಾಂತರಿಸಿದ್ದರು, ಆದರೆ ಅದೆಲ್ಲ ಭೂತಕಾಲದ ವಿಷಯವಾಗಿದೆ ಎಂದು ಹಿಂದೂಗಳು ಹೇಳುತ್ತಾರೆ.

ಮಂಗಳೂರಿನ ಯೂತ್ ಆಫ್ ಜಿ.ಎಸ್.ಬಿ.ಯುಟ್ಯೂಬ್ ಚಾನೆಲ್‌ನಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂಬ ಕೊಂಕಣಿ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ

ಇಂದಿನ ಸಮಾಜದಲ್ಲಿ ಹಿಂದೂಗಳು ಧರ್ಮಶಿಕ್ಷಣದ ಅಭಾವದಿಂದ ಧರ್ಮಾಚರಣೆಯಿಂದ ದೂರ ಹೋಗಿರುವುದು ಗಮನಕ್ಕೆ ಬರುತ್ತದೆ, ಜಾತ್ಯತೀತ ಆಡಳಿತ ಪದ್ಧತಿಯಿಂದ ನಮ್ಮ ವಿದ್ಯಾಭ್ಯಾಸ ಪದ್ಧತಿಯಿಂದ ಧರ್ಮವನ್ನು ತೆಗೆದುಹಾಕಲಾಗಿದೆ. ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಕೊಡುವ ವ್ಯವಸ್ಥೆ ಇಲ್ಲದಿರುವುದರಿಂದ ಇಡೀ ಹಿಂದೂ ಸಮಾಜ ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ, ಎಂದು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈಯವರು ಪ್ರತಿಪಾದಿಸಿದ್ದಾರೆ.

ಗೌರಿಗದ್ದೆಯ ಅವಧೂತ ವಿನಯಗುರುಜಿಯವರ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಭೇಟಿ !

ಗೌರಿಗದ್ದೆಯ ಅವಧೂತ ವಿನಯಗುರುಜಿಯವರು ಇತ್ತೀಚೆಗೆ ಇಲ್ಲಿನ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಸನಾತನ ಸಂಸ್ಥೆ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಈ ಸಂಸ್ಥೆಗಳ ಕಾರ್ಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಸನಾತನದ ಸಂತರಾದ ಪೂ. ಪದ್ಮಾಕರ ಹೊನಪ ಇವರು ಅವಧೂತ ವಿನಯಗುರುಜಿಯವರಿಗೆ ಪುಷ್ಪಹಾರ, ಶಾಲು, ಶ್ರೀಫಲ ಮತ್ತು ಉಡುಗೊರೆಯನ್ನು ನೀಡಿ ಸನ್ಮಾನ ಮಾಡಿದರು.