ಅಯೋಧ್ಯ ಫೌಂಡೇಶನ್ ನೇತೃತ್ವದಿಂದ ದೇಶಾದ್ಯಂತ ಸಾಮೂಹಿಕ ತರ್ಪಣ ವಿಧಿ ನೆರವೇರಿತು !

ಕಳೆದ ೨ ಸಾವಿರ ವರ್ಷದಲ್ಲಿ ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿರುವ ೮೦ ಕೋಟಿ ಹಿಂದುಗಳಿಗಾಗಿ ಶ್ರದ್ಧಾವಂತ ಹಿಂದುಗಳಿಂದ ವಿಧಿ

ಹರಿದ್ವಾರ (ಉತ್ತರಾಖಂಡ) – ಕಳೆದ ೨ ಸಾವಿರ ವರ್ಷಗಳಲ್ಲಿ ಕ್ರೈಸ್ತ ಮತ್ತು ಇಸ್ಲಾಮಿ ಆಕ್ರಮಣಕಾರಿಗಳ ವಿರುದ್ಧ ಧಾರ್ಮಿಕ ಹೋರಾಟ ಮಾಡುವಾಗ ಪ್ರಾಣತ್ಯಜಿಸಿರುವ ೮೦ ಕೋಟಿ ಹಿಂದುಗಳಿಗೆ (ಸರ್ವಪಿತೃ) ಮಹಾಲಯ ಅಮಾವಾಸ್ಯೆಯ ದಿನ ದೇಶಾದ್ಯಂತ ಸಾಮೂಹಿಕ ತರ್ಪಣ ವಿಧಿ ಆಚರಿಸಲಾಯಿತು. ಅವರ ಕುರಿತು ಕೃತಜ್ಞತೆ ವ್ಯಕ್ತಪಡಿಸುವುದಕ್ಕಾಗಿ ‘ಅಯೋಧ್ಯಾ ಫೌಂಡೇಶನ್’ ಸಂಘಟನೆಯಿಂದ ಸಾಮೂಹಿಕ ತರ್ಪಣದ ಅಭಿಯಾನ ದೇಶದಾದ್ಯಂತ ನಡೆಸಲಾಯಿತು. ಇದರ ಪ್ರಯುಕ್ತ ಸಂಘಟನೆಯ ಸಂಸ್ಥಾಪಕಿ ಮೀನಾಕ್ಷಿ ಶರಣ ಇವರು ಕಳೆದ ೮ ವರ್ಷಗಳಿಂದ ಹರಿದ್ವಾರಕ್ಕೆ ಬರುತ್ತಿದ್ದಾರೆ. ಈ ವರ್ಷ ಕೂಡ ಹರಿದ್ವಾರದ ಚಂಡಿಘಟಕ್ಕೆ ಅವರು ಹಾಗೂ ಅನೇಕ ಹಿಂದುತ್ವನಿಷ್ಠರ ಉಪಸ್ಥಿತಿಯಲ್ಲಿ ತರ್ಪಣ ವಿಧಿ ನೆರವೇರಿಸಲಾಯಿತು.

೧. ಪ್ರತಿವರ್ಷ ಆಗಸ್ಟ್ ೧೫ ಕ್ಕೆ ‘ಶ್ರದ್ಧಾ ಸಂಕಲ್ಪ ದಿನ’ ಎಂದು ಒಂದು ಪವಿತ್ರ ದಾರಾ ಸ್ವೀಕರಿಸಿ ದೇಶವಿದೇಶದಲ್ಲಿನ ಲಕ್ಷಾಂತರ ಹಿಂದುಗಳು ಮಹಾಲಯ ಅಮಾವಾಸ್ಯೆಗೆ ಸಾಮೂಹಿಕ ತರ್ಪಣ ನೀಡುವ ಪ್ರಮಾಣ ಮಾಡುತ್ತಾರೆ.

೨. ಚಂಡಿಘಾಟದಲ್ಲಿ ಮಹಾಲಯ ಅಮಾವಾಸ್ಯೆ ಎಂದರೆ ಅಕ್ಟೋಬರ್ ೨ ರಂದು ೨೫೦ ಹಿಂದುಗಳು ಮತ್ತು ೨೧ ಹುಡುಗ-ಹುಡುಗಿಯರು ಸಾಮೂಹಿಕ ತರ್ಪಣ ನೀಡಿದರು. ಇದರಲ್ಲಿ ಮೀನಾಕ್ಷಿ ಶರಣ, ನಿಶಿಥ ಶರಣ, ಮುಂಬಯಿಯಿಂದ ಶಿವನಿ ಶರಣ್, ಅಶೋಕ್ ವಿಂಡಲಸ, ಕರ್ನಲ್ ಹನಿ ಬಕ್ಷಿ (ನಿವೃತ್ತ), ಕರ್ನಲ್ ದತ್ತ (ನಿವೃತ್ತ), ಡೆಹರಾಡೂನ್ ನಿಂದ ಕರ್ನಲ್ ವಿವೇಕ ಗುಪ್ತ (ನಿವೃತ್ತ), ಡಾ. ಕುಲದೀಪ ದತ್ತ, ಸುಧೀರ್ ಶರ್ಮಾ, ಡಾ. ಪ್ರಾಚೀ ಶರ್ಮ, ದೆಹಲಿಯಿಂದ ನ್ಯಾಯವಾದಿ ಅಮಿತಾ ಸಚದೆವ, ಹಿಂದೂ ಜನ ಜಾಗೃತಿ ಸಮಿತಿಯ ಸಂದೀಪಕೌರ್ ಮುಂಜಾಲ, ಪೂಜಾ ತಿವಾರಿ, ಹಿಮಾಚಲ ಪ್ರದೇಶದಲ್ಲಿನ ಹಿಂದೂ ಜಾಗರಣ ಮಂಚ್‌ನ ಮಾಜಿ ಮಹಾ ಸಚಿವ ಮತ್ತು ಪ್ರಖರ ಹಿಂದುತ್ವನಿಷ್ಠ ಕಮಲ್ ಗೌತಮ, ಮಹೇಂದ್ರ ಠಾಕೂರ್, ಘಡ ಸೇನೆಯ ಸಂಸ್ಥಾಪಕ ವಿಮಲ ಬದೋನಿ ಹಾಗೂ ಚೆನ್ನೈಯಿಂದ ಚಂದ್ರಭಾನ ಸಿಂಹ ಮುಂತಾದವರು ಸಹಕುಟುಂಬ ಸಾಮೂಹಿಕ ತರ್ಪಣೆ ನೀಡಿದರು.

೩. ಈ ಅಭಿಯಾನದ ಉದ್ದೇಶ ಹಿಂದುಗಳಿಗೆ ಅವರ ಶೂರ ಮತ್ತು ಗೌರವಶಾಲಿ ಇತಿಹಾಸದ ನೆನಪು ಮಾಡಿ ಕೊಡುವುದು. ಅವರಿಗೆ ಸ್ವರಕ್ಷಣೆಗಾಗಿ ಶತ್ರುಗಳಿಂದ ಜಾಗೃತಗೊಳಿಸುವುದು ಮತ್ತು ಮುಂದಿನ ಪೀಳಿಗೆಗೆ ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಶಿಕ್ಷಿತಗೊಳಿಸುವುದು ಆಗಿದೆ.

೪. ಇಲ್ಲಿಯವರೆಗೆ ೧೬ ದೇಶ ಮತ್ತು ಭಾರತದಲ್ಲಿನ ಪ್ರತಿಯೊಂದು ಪ್ರಾಂತದಲ್ಲಿನ ಲಕ್ಷಾಂತರ ಹಿಂದುಗಳು ಈ ಅಭಿಯಾನದಲ್ಲಿ ಸಹಭಾಗಿ ಆಗಿದ್ದರು.

ಉತ್ಸಾಹದಿಂದ ಸಹಭಾಗಿ ಆಗಿರುವ ಸಂಘಟನೆಗಳು ಮತ್ತು ಕಂಪನಿಗಳು !

ಹಿಂದೂ ಜಾಗರಣ ಮಂಚ್ (ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ ರಾಜ್ಯಗಳು), ಹಿಂದೂ ಯುವ ಮೋರ್ಚ (ಛತ್ತೀಸ್ಗಡ), ಹಿಂದೂ ರಕ್ಷಕ (ಮಧ್ಯಪ್ರದೇಶ), ಭಾರತ ರಕ್ಷಾ ಮಂಚ (ಉಜ್ಜೈನಿ), ಇಟರ್ನಲ್ ಹಿಂದೂ ಫೌಂಡೇಶನ್ (ದೆಹಲಿ ಮತ್ತು ಮುಂಬಯಿ), ಶಾಶ್ವತ ಭಾರತ ಟ್ರಸ್ಟ್ (ಡೆಹರಾಡೂನ್), ಘಡ ಸೇನಾ (ಉತ್ತರಾಖಂಡ), ಪನೂನ್ ಕಾಶ್ಮೀರ್, ಸಾರಸ್ವತ ಕಾಶ್ಮೀರಿ ಬ್ರಾಹ್ಮಣ ಫೌಂಡೇಶನ್, ಅರುಂಧತಿ ಫೌಂಡೇಶನ್ (ಪುಣೆ), ದೇವದೇವೇಶ್ವರ ಸಂಸ್ಥಾನ (ಪುಣೆ), ಸಂವೇದನಾ ಸಂಸ್ಥಾನ (ಹಿಮಾಚಲ ಪ್ರದೇಶ) ಅಯೋಧ್ಯ ಫೌಂಡೇಶನ್ (ನೈರೋಬಿ, ಕೆನಿಯ), ಸಿದ್ಧ ವಿದ್ಯಾ ಅಸೋಸಿಯೇಟ್ಸ್ (ಮುಂಬಯಿ), ಅಮಿತಾ ಸಚಿದೇವ್ ಅಂಡ್ ಅಸೋಸಿಯೇಟ್ಸ್ (ದೆಹಲಿ) ಮತ್ತು ಹಿಂದೂ ಜನಜಾಗೃತಿ ಸಮಿತಿ.