ದೇಶದ 22 ಸ್ಥಳಗಳಲ್ಲಿ NIA ದಾಳಿ

  • ಅನೇಕ ಮತಾಂಧರು ವಶ !

  • ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕೆ!

ನವದೆಹಲಿ – ರಾಷ್ಟ್ರೀಯ ತನಿಖಾ ದಳವು (NIA) ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಅಸ್ಸಾಂ, ದೆಹಲಿ ಮತ್ತು ಮಹಾರಾಷ್ಟ್ರದ 22 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಉಗ್ರರ ದಾಳಿ ಸಂಚಿನ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರು ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಎನ್ಐಎ ಆತಂಕ ವ್ಯಕ್ತಪಡಿಸಿದೆ. ಬಂಧಿತರಲ್ಲಿ 4 ಮಂದಿ ಮಹಾರಾಷ್ಟ್ರದವರಾಗಿದ್ದಾರೆ.

1. ಎನ್.ಐ.ಎ. ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ, ಜಾಲನಾ ಮತ್ತು ಮಾಲೆಗಾಂವ್‌ನಲ್ಲಿ ದಾಳಿ ನಡೆಸಿತು. ಮಾಲೆಗಾಂವ್‌ನ ಹೋಮಿಯೋಪತಿ ಚಿಕಿತ್ಸಾಲಯದಿಂದ 3 ಜನರನ್ನು ಕರೆದೊಯ್ಯಲಾಗಿದ್ದು, ಒಬ್ಬ ವ್ಯಕ್ತಿಯನ್ನು ಜಾಲನಾದಿಂದ ಕರೆದೊಯ್ಯಲಾಗಿದೆ. ಛತ್ರಪತಿ ಸಂಭಾಜಿನಗರದ ಕಿರಾಡಪುಡ್ಯ ಸಮೀಪದ ಆಜಾದ್ ಚೌಕ್ ಪ್ರದೇಶದಲ್ಲಿ 3 ಜನರನ್ನು ಬಂಧಿಸಲಾಗಿದೆ. ಇವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯುವಕರನ್ನು ವಶಕ್ಕೆ ಪಡೆದ ಮೂರೂ ಕಡೆ ಪಂಚನಾಮ ನಡೆಯುತ್ತಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ, ಜಾಲನಾ ಮತ್ತು ಮಾಲೆಗಾಂವ್‌ನಲ್ಲಿ ಎನ್‌ಐಎ ದಾಳಿ ನಡೆಸಿತ್ತು.

2. ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಇಕ್ಬಾಲ್ ಭಟ್ ಮನೆ ಮೇಲೆ ದಾಳಿ ನಡೆದಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಅವನ ಮೇಲಿದೆ. ಇದಲ್ಲದೇ ಕಾಶ್ಮೀರದ ಇತರೆಡೆಯೂ ದಾಳಿ ನಡೆಸಲಾಗಿದೆ.

ಸಂಪಾದಕೀಯ ನಿಲುವು

ದೇಶದಲ್ಲಿದ್ದು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗೆ ಸಹಾಯ ಮಾಡುವ ಮತಾಂಧರಿಗೆ ಕಠಿಣ ಶಿಕ್ಷೆಯನ್ನು ನೀಡುವುದು ಅಗತ್ಯವಾಗಿದೆ !