ನ್ಯೂಯಾರ್ಕ್ ದ ಆಕಾಶದಲ್ಲಿ ವಿಮಾನದ ಮೂಲಕ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂಬ ಫಲಕ ಹಾರಾಟ

ಬಾಂಗ್ಲಾದೇಶ ಬಟ್ಟೆಗಳನ್ನು ಬಹಿಷ್ಕರಿಸಲು ಆಗ್ರಹ

ನ್ಯೂಯಾರ್ಕ್ (ಅಮೆರಿಕ) – ಇಲ್ಲಿ ಬೆಳಿಗ್ಗೆ ಹಾಡಸನ್ ನದಿಯ ಪರಿಸರದಲ್ಲಿ ಮತ್ತು ವಿಶ್ವವಿಖ್ಯಾತ ಸ್ಟ್ಯಾಚ್ಯು ಆಫ್ ಲಿಬರ್ಟಿಯ ಪರಿಸರದಲ್ಲಿ ‘ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ಹಿಂಸಾಚಾರ ನಿಲ್ಲಬೇಕು’, ಎಂದು ಬರೆದಿರುವ ಫಲಕ ಆಕಾಶದಲ್ಲಿ ವಿಮಾನದ ಮೂಲಕ ಹಾರಿಸಿರುವುದು ಕಂಡುಬಂದಿತು. ಈ ಫಲಕ ಬಾಂಗ್ಲಾದೇಶ ಮೂಲದ ಹಿಂದೂಗಳಿಂದ ಹಾರಿಸಲಾಗಿತ್ತು. ಬಾಂಗ್ಲಾದೇಶದ ಹಿಂದುಗಳ ಸಮಸ್ಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಫಲಕ ಹಾರಿಸಲಾಯಿತು ಎಂದು ಅವರಿಂದ ಹೇಳಲಾಯಿತು.

೧. ಇದರ ಕುರಿತು ಪಂಕಜ್ ಮೆಹತಾ ಇವರು ಮಾತನಾಡಿ, ಮಾನವ ಹಕ್ಕುಗಳ ಪರಿಷತ್ತು ರಾಜಕಾರಣ ಪಕ್ಕಕ್ಕಿಟ್ಟು ೧೯೭೧ ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿರುವ ನರಸಂಹಾರವನ್ನು ಒಪ್ಪಿಕೊಳ್ಳಬೇಕು. ಎರಡನೆಯ ಮಹಾಯುದ್ಧದ ನಂತರ ಇದು ಎಲ್ಲಕ್ಕಿಂತ ದೊಡ್ಡ ನರಸಂಹಾರವಾಗಿತ್ತು. ಅಮೇರಿಕಾದ ೩ ಸಂಘಟನೆಗಳಿಂದ ಈ ನರಸಂಹಾರಕ್ಕೆ ಮೊದಲೇ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಪಾಕಿಸ್ತಾನದ ಸುರಕ್ಷಾ ದಳದಿಂದ ಜಿಹಾದಿಗಳ ಮೂಲಕ ಅಲ್ಪಸಂಖ್ಯಾತ ಹಿಂದುಗಳನ್ನು ಗುರಿ ಮಾಡಲಾಗಿತ್ತು.

೨. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ಹಿಂಸಾಚಾರ ನಿಲ್ಲುವವರೆಗೆ ಬಾಂಗ್ಲಾದೇಶದ ಬಟ್ಟೆಯ ಮೇಲೆ ಬಹಿಷ್ಕಾರ ಹೇರಲು ಬಾಂಗ್ಲಾದೇಶ ಮೂಲದ ಜನರಿಂದ ಅಮೆರಿಕಾದಲ್ಲಿನ ಜನರಿಗೆ ಕರೆ ನೀಡಲಾಯಿತು. ಬಾಂಗ್ಲಾದೇಶದ ಒಟ್ಟು ರಫ್ತಿನಲ್ಲಿ ಶೇಕಡ ೮೫ ರಷ್ಟು ಬಟ್ಟೆ ಅಮೇರಿಕಾಗೆ ರಫ್ತಾಗುತ್ತದೆ.

ಸಂಪಾದಕೀಯ ನಿಲುವು

ಅಮೇರಿಕಾದಲ್ಲಿನ ಹಿಂದೂ ಈ ರೀತಿ ಕೃತಿ ಮಾಡಿ ಏನಾದರೂ ಮಾಡುವ ಪ್ರಯತ್ನ ಮಾಡುತ್ತಾರೆ, ಇದು ಶ್ಲಾಘನೀಯವಾಗಿದೆ. ಭಾರತದಲ್ಲಿನ ಹಿಂದುಗಳು ಏನು ಮಾಡುತ್ತಿದ್ದಾರೆ ?